Summer Printed Fashion: ಬೇಸಿಗೆಯಲ್ಲಿ ಮನಸ್ಸನ್ನು ಉಲ್ಲಾಸಗೊಳಿಸುವ ಪ್ರಿಂಟೆಡ್ ಫ್ಯಾಷನ್‌ವೇರ್ಸ್ ಹಂಗಾಮ
Summer Printed Fashion: ಪ್ರತಿ ಬಾರಿಯಂತೆ ಈ ಬಾರಿಯೂ ಬೇಸಿಗೆಯಲ್ಲಿ ಮನಸ್ಸನ್ನು ಉಲ್ಲಾಸಿತಗೊಳಿಸುವ ಪ್ರಿಂಟೆಡ್ ಫ್ಯಾಷನ್‌ವೇರ್‌ಗಳು ಹೊಸ ರೂಪದಲ್ಲಿ ಮರುಕಳಿಸಿವೆ. ಯಾವ್ಯಾವ ಬಗೆಯವು ಬಂದಿವೆ? ಯಾವ ಬಗೆಯವು ಪ್ರಚಲಿತದಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಗಳು: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ ಸೀದಾ ಸಾದಾ ಉಡುಗೆಗಳಿಗಿಂತ ಪ್ರಿಂಟೆಡ್ ಫ್ಯಾಷನ್‌ವೇರ್‌ಗಳು (Summer Printed Fashion) ಟ್ರೆಂಡಿಯಾಗುತ್ತವೆ. ಇದಕ್ಕೆ ಕಾರಣವೂ ಇದೆ. ಧರಿಸಿದಾಗ ಇವು ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಇದಕ್ಕೆ ಪೂರಕ ಎಂಬಂತೆ ಈ ಸೀಸನ್‌ನಲ್ಲಿ ನಾನಾ ಬಗೆಯ ಪ್ರಿಂಟೆಡ್ ಡಿಸೈನರ್‌ವೇರ್‌ಗಳು ಈಗಾಗಲೇ ಹಂಗಾಮ ಎಬ್ಬಿಸಿವೆ. ಅಡ್ಡಡ್ಡ -ಉದ್ದುದ್ದ ಗೆರೆಗಳು, ರೇಖೆಗಳು, ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿಗಳ ಚಿತ್ತಾರ, ಊಹೆಗೂ ನಿಲುಕದ ವರ್ಣಮಯ ಚಿತ್ತಾರಗಳುಳ್ಳ ಪ್ರಿಂಟ್ಸ್ ಇಂದಿನ ಸಮ್ಮರ್ ಫ್ಯಾಷನ್ ಲಿಸ್ಟ್‌ನಲ್ಲಿವೆ. ಕುರ್ತಾ, ಸಲ್ವಾರ್-ಚೂಡಿದಾರ್, ಗೌನ್, ಫ್ರಾಕ್, ಸ್ಕರ್ಟ್ಸ್ ಹೀಗೆ ಬಹುತೇಕ ಕಾಸ್ಟ್ಯೂಮ್‌ಗಳ ರೂಪ-ರೇಷೆಯನ್ನು ಬದಲಿಸಿ ಟ್ರೆಂಡಿಯಾಗಿವೆ. ಪ್ರತಿ ಬಾರಿಯೂ ಬೇಸಿಗೆ ಬಂತೆಂದರೆ ಇದ್ದಕ್ಕಿದ್ದಂತೆ, ಮನಸ್ಸಿಗೆ ಮುದ ನೀಡುವ ಚಿತ್ತಾರ, ಉಲ್ಲಾಸಿತಗೊಳಿಸುವ ಪ್ರಿಂಟೆಡ್ ಡಿಸೈನರ್‌ವೇರ್‌ಗಳು ಎಲ್ಲರನ್ನು ಸವಾರಿ ಮಾಡುತ್ತವೆ ಎನ್ನುತ್ತಾರೆ ಡಿಸೈನರ್ ದೀಕ್ಷಾ.

ಶೈನಿಂಗ್ ಶಿಮ್ಮರ್ ಪ್ರಿಂಟ್ಸ್ ಫ್ಯಾಷನ್
ಇತ್ತೀಚೆಗೆ ಬಾಲಿವುಡ್ ಸ್ಟಾರ್ಸ್ ಫೇವರೇಟ್ ಇದಾಗಿದೆ. ಇವು 80ರ ದಶಕದ ಬಾಲಿವುಡ್ ಫ್ಯಾಷನ್ ಟ್ರೆಂಡ್ ನೆನಪಿಸುತ್ತಿವೆ. ಪಾರ್ಟಿವೇರ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಡಿಸೈನರ್‌ಗಳು.

ಟ್ರಾಪಿಕಲ್ ಪ್ರಿಂಟ್ಸ್ ಕ್ರೇಝ್
ಇಂದು ಟ್ರಾಪಿಕಲ್ ಪ್ರಿಂಟ್ಸ್ ಕ್ರೇಝ್ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಹೆಣ್ಣುಮಕ್ಕಳು ಅದರಲ್ಲೂ ವಿವಾಹಿತರು ಹಾಕುವ ಸೆಲ್ವಾರ್ ಹಾಗೂ ಚೂಡಿದಾರ್‌ಗಳು ಈ ಪ್ರಿಂಟ್ಸ್‌ನಿಂದಲೇ ತುಂಬಿ ಹೋಗಿವೆ. ಇವು ಯಂಗ್ ಲುಕ್ ನೀಡುತ್ತವೆ ಎಂಬ ಕಾರಣದಿಂದಾಗಿ ಮಧ್ಯ ವಯಸ್ಕ ಹೆಣ್ಣುಮಕ್ಕಳು ಇವುಗಳಿಗೆ ಹೆಚ್ಚು ಮಾರು ಹೋಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಕಾಟನ್ ಮೆಟಿರೀಯಲ್‌ನಲ್ಲೂ ಇವು ಹೆಚ್ಚು ಪಾಪುಲರ್ ಆಗಿವೆ ಎನ್ನುವ ಫ್ಯಾಷನ್ ಡಿಸೈನರ್ ಸ್ನೇಹಾ ಪ್ರಕಾರ, ಇವನ್ನು ಧರಿಸಿದಾಗ ಮನಸ್ಸು ಉಲ್ಲಾಸಿತಗೊಳ್ಳುತ್ತದಂತೆ.

ಈ ಸುದ್ದಿಯನ್ನೂ ಓದಿ | Summer Fashion, Beauty: ಸಮ್ಮರ್‌ನಲ್ಲಿ ವೈಬ್ರೆಂಟ್ ಕಲರ್ಸ್ ಹಂಗಾಮ
ಆಕ್ಸೆಸರೀಸ್‌ಗೂ ಕಾಲಿಟ್ಟ ಪ್ರಿಂಟೆಡ್ ವಿನ್ಯಾಸ
ಇನ್ನು, ಈ ಪ್ರಿಂಟೆಡ್ ವಿನ್ಯಾಸ, ಕೇವಲ ಧರಿಸುವ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ, ಸೀರೆ, ಅಲಂಕಾರಿಕ ಆಕ್ಸೆಸರೀಸ್ ಸೇರಿದಂತೆ ಎಲ್ಲೆಡೆಯಲ್ಲೂ ಜನಪ್ರಿಯವಾಗತೊಡಗಿವೆ. ಹೌದು. ಲೈಫ್‌ಸ್ಟೈಲ್ ಫ್ಯಾಷನ್ ವಿನ್ಯಾಸಕರ ಘೋಷಣೆಯ ಲಿಸ್ಟ್‌ನಿಂದ ಇದು ಹೊರಬಿದ್ದಿದ್ದೇ ತಡ, ಎಲ್ಲೆಂದರಲ್ಲಿ, ನಾನಾ ಡಿಸೈನರ್ ಪ್ರಿಂಟ್ಸ್ ಆಕ್ಸೆಸರೀಸ್‌ನಲ್ಲೂ ತುಂಬಿ ತುಳುಕಾಡತೊಡಗಿವೆ. ವುಡ್-ನಾನ್‌ವುಡ್ ಬ್ಯಾಂಗಲ್ಸ್, ಸರಗಳು, ಹೆಡ್-ಹೇರ್ ಬ್ಯಾಂಡ್ಸ್, ಡಿಸೈನರ್ಸ್ ಆಕ್ಸೆಸ್ಸರೀಸ್, ಜಂಕ್ ಜ್ಯುವೆಲರಿಗಳು ಕೂಡ ಈ ವಿನ್ಯಾಸದಲ್ಲಿ ದೊರೆಯುತ್ತಿವೆ. ಅಲ್ಲದೇ, ಅನಿಮಲ್ ಹಾಗೂ ಟ್ರಾಪಿಕಲ್ ಪ್ರಿಂಟ್ಸ್‌ನ ಹ್ಯಾಂಡ್‌ಬ್ಯಾಗ್‌ಗಳು ಮಾನಿನಿಯರ ಹೆಗಲೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)