Cannes 2025: ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ತಾರೆಯರ ಗ್ರ್ಯಾಂಡ್ ಎಂಟ್ರಿ
ವಿಶ್ವವಿಖ್ಯಾತ 2025ರ ಕೇನ್ಸ್ ಚಲನಚಿತ್ರೋತ್ಸವವು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೇನ್ಸ್ ಚಲನಚಿತ್ರೋತ್ಸವ ಅದ್ಧೂರಿಯಾಗಿ ಮೇ 13ರಂದು ಆರಂಭವಾಗಿದೆ. ಹಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಸೆಲೆಬ್ರಿಟಿಗಳು, ಅಂತಾರಾಷ್ಟ್ರೀಯ ನಿರ್ಮಾಪಕರು ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಭಾರತದ ನಿತಾಂಶಿ ಗೋಯೆಲ್, ಜಾಕ್ವೆಲಿನ್ ಫೆರ್ನಾಂಡಿಸ್, ಅನುಪಮ್ ಖೇರ್, ಶೇಖರ್ ಕಪೂರ್ ಭಾಗವಹಿಸಿದ್ದು, ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

Cannes 2025_ Nitanshi Goel


ಕೇನ್ಸ್ ಚಲನಚಿತ್ರೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ನಿತಾಂಶಿ ಗೋಯೆಲ್ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ. ʼಲಾಪತ್ ಲೇಡೀಸ್ʼ ಹಿಂದಿ ಸಿನಿಮಾ ಖ್ಯಾತಿಯ ನಿತಾಂಶಿ ಗೋಯೆಲ್ ಅವರು ಕಸೂತಿ ಮತ್ತು ಲೇಯರ್ಡ್ ಹೊಂದಿರುವ ವಿಶೇಷ ವಿನ್ಯಾಸದ ಬ್ಲ್ಯಾಕ್ ಗೋಲ್ಡ್ ಮಿಶ್ರಿತ ಗೌನ್ನಲ್ಲಿ ಪ್ರಿನ್ಸೆಸ್ನಂತೆ ಕಂಗೊಳಿಸಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಇವರ ಗ್ರ್ಯಾಂಡ್ ಲುಕ್ ಅನೇಕ ಜನರ ಕಣ್ಮನ ಸೆಳೆದಿದೆ.

ನಟಿ ನಿತಾಂಶಿ ಪಿಂಕ್ ವೈಟ್ ಕಲರ್ ಕಾಂಬಿನೇಶನ್ ಇರುವ ಲೆಹೆಂಗಾವನ್ನು ಧರಿಸಿದ್ದು, ಇವರ ಹೇರ್ ಸ್ಟೈಲ್ ವಿಭಿನ್ನವಾಗಿ ಮೂಡಿಬಂದಿದೆ. ಅವರು ಹೇರ್ ಸ್ಟೈಲ್ ಅನ್ನು ಮುತ್ತಿನ ದಾರಗಳಿಂದ ಅಲಂಕಾರ ಮಾಡಿ ಸ್ಟೈಲಿಶ್ ಆಗಿ ಕಾಣಿಸಿದ್ದಾರೆ. ಬಾಲಿವುಡ್ ಹಿರಿಯ ನಟಿಯರಾದ ರೇಖಾ, ಮಧುಬಾಲಾ, ಮೀನಾ ಕುಮಾರಿ ಮತ್ತು ನರ್ಗಿಸ್ ಅವರ ಭಾವಚಿತ್ರಗಳನ್ನು ಫ್ರೇಮ್ ಮಾಡಲಾಗಿದ್ದು, ಅದನ್ನು ಮುತ್ತಿನ ದಾರಗಳ ಜತೆಗೆ ಪೋಣಿಸಿ ಹೇರ್ ಸ್ಟೈಲ್ ಮಾಡಿದ್ದಾರೆ.

ʼವಿಕ್ರಾಂತ್ ರೋಣʼ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕೇನ್ಸ್ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವೈಟ್ ಶರ್ಟ್ ಸಿಲ್ವರ್ ವಿನ್ಯಾಸ ಇರುವ ಬಟ್ಟೆಯನ್ನು ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಧರಿಸಿದ್ದಾರೆ. ಸಿಂಪಲ್ ಮೇಕಪ್ ಸ್ಟನಿಂಗ್ ಲುಕ್ನಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ನೋಡುಗರ ಗಮನ ಸೆಳೆದಿದ್ದಾರೆ.

ʼಎಮರ್ಜೆನ್ಸಿʼ, ʼದಿ ಕಾಶ್ಮಿರ್ ಫೈಲ್ಸ್ʼ ಸಿನಿಮಾ ಖ್ಯಾತಿಯ ಹಿರಿಯ ನಟ ಅನುಪಮ್ ಖೇರ್ ಕೂಡ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಸೂಟ್ನಲ್ಲಿ ಸಿಂಪಲ್ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅನುಪಮ್ ಖೇರ್ ಸೂಟ್ ಧರಿಸಿ ರಾಯಲ್ ಲುಕ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಮಾಡೆಲ್ನಂತೆ ಹೆಜ್ಜೆ ಹಾಕಿದ್ದಾರೆ.

78ನೇ ಕೇನ್ಸ್ ಚಲನಚಿತ್ರೋತ್ಸವವು ಮೇ 13ರಿಂದ ಆರಂಭವಾಗಿ 24ರವರೆಗೆ ನಡೆಯಲಿದೆ. ಈ ವರ್ಷ ಭಾರತೀಯ ಮೂಲದ ಚಲನಚಿತ್ರಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. 'ಹೋಮ್ ಬೌಂಡ್', 'ಅರಣ್ಯೇರ್ ದಿನ್ ರಾತ್ರಿ', 'ತನ್ವಿ ದಿ ಗ್ರೇಟ್' ಇತರ ಭಾರತ ಮೂಲದ ಸಿನಿಮಾಗಳು ಪ್ರದರ್ಶನ ಕಂಡಿದೆ. ಸಿನಿಮಾ, ಕಿರುಚಿತ್ರ, ಉತ್ತಮ ನಿರ್ದೇಶನ ಎಂಬ ಅನೇಕ ಜಾನರ್ ಅಡಿಯಲ್ಲಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಕೂಡ ಸಿಗುವ ಸಾಧ್ಯತೆ ಇದೆ.