ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್ ನಾಯಕರಿಗೆ ಅಭಿವೃದ್ದಿ ಚಿಂತೆ ಇಲ್ಲ, ಕುರ್ಚಿ ಚಿಂತೆ: ನಿಖಿಲ್ ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಉಪಮುಖ್ಯ ಮಂತ್ರಿಗಳಿಗೆ ಮುಖ್ಯಮಂತ್ರಿಯಾಗುವ ಚಿಂತೆ ಸದಾ ದಿಲ್ಲಿ ಓಡಾಟ ಇದು ಸಾಧನೆಯೇ ? ಈ ರಾಜ್ಯದ ಬಡವರ, ರೈತರ, ಸಾಮಾನ್ಯ ಜನತೆಯ ಚಿಂತೆ ಇಲ್ಲದಾಗಿದೆ. ತಮ್ಮ ಚಿಂತೆಯಲ್ಲಿಯೇ ಕಾಂಗ್ರೆಸ್ ದಿನ ಕಳೆಯುತ್ತಿದೆ

ಕಾಂಗ್ರೆಸ್ ನಾಯಕರಿಗೆ ಅಭಿವೃದ್ದಿ ಚಿಂತೆ ಇಲ್ಲ, ಕುರ್ಚಿ ಚಿಂತೆ

ಜೆಡಿಎಸ್ ಸದಸ್ಯತ್ವ ಅಭಿಮಾಯ ಕಾರ್ಯಕ್ರಮ ಉದ್ಘಾಟಿಸಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

Profile Ashok Nayak Jul 17, 2025 12:24 AM

ಇಂಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಉಪಮುಖ್ಯ ಮಂತ್ರಿಗಳಿಗೆ ಮುಖ್ಯಮಂತ್ರಿಯಾಗುವ ಚಿಂತೆ ಸದಾ ದಿಲ್ಲಿ ಓಡಾಟ ಇದು ಸಾಧನೆಯೇ ? ಈ ರಾಜ್ಯದ ಬಡವರ, ರೈತರ, ಸಾಮಾನ್ಯ ಜನತೆಯ ಚಿಂತೆ ಇಲ್ಲದಾಗಿದೆ. ತಮ್ಮ ಚಿಂತೆಯಲ್ಲಿಯೇ ಕಾಂಗ್ರೆಸ್ ದಿನ ಕಳೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಪಟ್ಟಣದಲ್ಲಿ ಜೆ.ಡಿ.ಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಿತ್ತೂರ ಕರ್ನಾಟಕದ ವಿಜಯಪೂರ ಜಿಲ್ಲೆಯಲ್ಲಿ ನಾನು ಹಾಸನ, ಮಂಡ್ಯ, ಮೈಸೂರು ಸುಭದ್ರವಿದ್ದಂತೆ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂಬ ಆತ್ಮವಿಶ್ವಾಸ ನನಗಿದೆ. ಇಂತಹ ಜನಸಮುದಾಯ ಕಂಡಾಗ ಸಂತಸ ತಂದಿದೆ. ಹಳೆ ಮೈಸೂರಿನಂತೆ ಅಭಿವೃದ್ದಿಯ ವೇಗ ಈ ಕಲ್ಯಾಣದ ಕರ್ನಾಟಕ ಭಾಗದಲ್ಲಿ ನಡೆದಿಲ್ಲ. ನೀವು ಕಾರ್ಯಕರ್ತರು ಸದಾ ಪಕ್ಷ ಕಟ್ಟುವಲ್ಲಿ ನಿರತರಾಗಿ ಮುಂಬರುವ ಚುನಾವಣೆಯಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯದಿಂದ ಜಿಲ್ಲೆಯಲ್ಲಿ ೪ ಜನತಾದಳ ಶಾಸಕರು ಗೆಲ್ಲಲ್ಲಿದ್ದಾರೆ. ಸಭೆ ಸಮಾರಂಭಗಳು ಮುಂಬರುವ ದಿನಗಳಲ್ಲಿ ಸಾಕಷ್ಟು ಮೋಡೋಣ ಪಕ್ಷವೇ ಜೀವಾಳ. ಬಿ.ಡಿ ಪಾಟೀಲರ ಪರವಾಗಿ ನಾವಿದ್ದೇವೆ ಎಂಬ ಸಂದೇಶ ನೀಡಿರುವ ನಿಮಗೆ ಸದಾ ನಿಮಗೆ ಕೈ ಬಿಡುವುದಿಲ್ಲ. ಬಿ.ಡಿ ಪಾಟೀಲ ಮುಂಬರುವ ದಿನಗಳಲ್ಲಿ ಅವರಿಗೆ ಎಲ್ಲಾ ವಿಧದ ಸಹಾಯ ಸಹಕಾರ ನೀಡಿ ಗೆಲ್ಲಿಸುತ್ತೇವೆ. ಬಿ.ಡಿ ಅಭಿಮಾನಿಗಳು ಅವರ ಬಗ್ಗೆ ಅನುಮಾನ ಬೇಡ ಬಿ.ಡಿ ಪಾಟೀಲ ಹಣಕಾಸಿನಿಂದ ಶ್ರೀಮಂತರಲ್ಲ ಹೃದಯದಿಂದ ಶ್ರೀಮಂತರು ,ಪ್ರಜಾಪ್ರಭುಇತ್ವ ವ್ಯವಸ್ಥೆಯಲ್ಲಿ ಜನರು ತೀರ್ಮಾನ ಮಾಡಿದರೆ ಎಂತ ಗಟಾನುಗಟ್ಟಿ ನಾಯಕರು ಸೋತ್ತಿರುವುದು ಇತಿಹಾಸ, ಧೃತೀಗೆಡಬೇಡಿ ನಿಮ್ಮ ಪ್ರಮಾಣಿಕತೆ ನಿಷ್ಠೇ ಜನರು ಗುರುತಿಸುವಂತಹ ದಿನಗಳು ಸನ್ನಿಹಿತವಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಭಾಗ್ಯದ ಬಾಗಿಲು ಮತದಾರರೆ ತೇರೆಯುತ್ತಾರೆ ಅಮಚಿತ್ತದಿಂದ ಕಾದು ನೋಡಿ ಎಂದು ಆತ್ಮಸ್ಥೆರ್ಯ ನೀಡಿದರು.

ಇದನ್ನೂ ಓದಿ: Indi (Vijayapura) News: ಜಿ.ಟಿ.ಟಿ.ಸಿ ಕಾಲೇಜಿನ ಬಹುದಿನಗಳ ಕನಸು ಈಡೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ನಿನ್ನೇ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಂದು ದೊಡ್ಡ ಸಾರ್ವಜನಿಕ ಸಭೆ ಹಾಗೂ ಅನೇಕ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ ಕೇವಲ ಶಂಕು ಸ್ಥಾಪನೆ ಮಾಡಿ ಭೂಮಿ ಪೂಜೆ ಮಾಡಿ ಹೋದರೆ ನೀವು ಕೊಟ್ಟ ಮಾತು ಕಾರ್ಯಗತ ಸಾಧ್ಯನಾ ? ಮಲೇಯ ಮಹಾದೇಶ್ವರ ಬೆಟ್ಟಕ್ಕೆ ಮುಖ್ಯ ಮಂತ್ರಿಗಳು ಸಚಿವ ಸಂಪುಟ ಸದಸ್ಯರು ೩.೫೦ ಸಾವಿರ ಕೋಟಿ ಅನುಧಾನ ಜಿಲ್ಲೆಯ ಸಮಗ್ರ ಅಭಿವೃದ್ದಿ, ನಂದಿ ಬೆಟ್ಟಕ್ಕೆ ೩೦೫೦ ಸಾವಿರ ಕೋಟಿ ಅನುಧಾನ ಇದು ಇಡೇರುತ್ತದೇ ಎಂಬ ನನ್ನ ಪ್ರಶ್ನೆ ? ಚುನಾವಣೆ ಸಂಧರ್ಬದಲ್ಲಿ ೫ ಗ್ಯಾರಂಟಿ ಯೋಜನೆ ನೀವು ಪ್ರಣಾಳಿಕೆ ಬಿಡುಗಡೆ ಮಾಡಿದ್ದೀರಿ ಪ್ರತಿ ತಿಂಗಳು ಕೋಡುತ್ತೇವೆ ಎಂದು ಹೇಳಿರುವ ನೀವು ಪ್ರತಿ ತಿಂಗಳು ನೀಡಲಾಗಿದೆಯೇ ? ಉಪಚುನಾವಣೆ, ಎಂ.ಎಲ್.ಸಿ ಬಂದಾಗ ಗ್ಯಾರಂಟಿ ಹಣ ಹಾಕುವುದು ಇನ್ನು ಮುಂದೆ ಗ್ಯಾರಂಟಿ ಹಣ ಜಿಲ್ಲಾ ಪಂಚಾಯತಿ ತಾಲೂಕಾ ಪಂಚಾಯತಿ ಬಂದಾಗ ಗ್ಯಾರಂಟಿ ಹಣ ನೀಡುತ್ತಾರೆ ಎಂದು ಕಾಂಗ್ರೇಸ ಸರಕಾರದ ವಿರುದ್ಧ ಹರಿಹಾಯ್ದರು.

*

ಈ ಭಾಗಕ್ಕೆ ಶಕ್ತಿ ಕೊಟ್ಟಿರುವ ಹೃದಯವಂತ ಜನರು ೬೧ ಸಾವಿರ ಮತಗಳು ನೀಡಿ ಅಲ್ಪಮತದಿಂದ ನಾನು ಸೊತ್ತಿರುವೆ ಈ ಹಣವಿಲ್ಲದ ಬಡವನಿಗೆ ನೀವು ನಲತುಂಬಿರುವ ನೀವು ನಿಮಗೆ ನಾನು ಯಾವ ರೀತಿ ಖುಣ ತೀರಿಸಬೇಕು ನಿಮಗೆ ಹೋಗಳಲು ಪದಗಳೇ ಇಲ್ಲ, ಈ ಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನೀರಾವರಿ ಮಾಡಿದ್ದಾರೆ. ಇಂದು ರೈತರ ಪರಸ್ಥಿತಿ ಹೇಳತೀರದು, ಶಾಶ್ವತ ನೀರಾವರಿ ಇಲ್ಲ ಅನೇಕ ಸಮಸ್ಯಗಳು ಇವೆ. ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಕಲ್ಪನೆ ಕುಮಾರಸ್ವಾಮಿಯವರದ್ದು.

ಮುಂದೆ ಬಿಜೆಪಿ ಬೋಮ್ಮಾಯಿ ಸರಕಾರ ಮಾಡಿದೆ ಆದರೆ ಇಂದು ಕಾಂಗ್ರೆಸ್ ನಾವೇ ಮಾಡಿರುವುದು ಹೇಳುವು ಎಷ್ಟರಮಟ್ಟಿಗೆ ಸತ್ಯೆ. ಈ ಬಡವನಿಗೆ ನಿಮ್ಮ ಆರ್ಶೀವಾದ ಸದಾ ಇರಲಿ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಪಂಚಪ್ಪ ಕಲ್ಬುರ್ಗಿ ಮಾತನಾಡಿದರು.

ಮಾಜಿ ಸಚಿವ ವೇಂಕಠರಾವ ನಾಡಗೌಡ, ಮಾಜಿ ವಿಧಾನ ಪರಿಷ್ಯತ ಸದಸ್ಯ ಬಿ.ಜಿ ಪಾಟೀಲ ಹಲಸಂಗಿ, ಮಾಜಿ ಜಿ.ಪಂ ಸದಸ್ಯ ರಾಮು ರಾಠೋಡ,ಮುಖಂಡರಾದ ಮರೇಪ್ಪ ಗಿರಣಿವಡ್ಡರ, ನಾಗೇಶ ತಳಕೇರಿ, ರಾಜುಗೌಡ ಪಾಟೀಲ,ಅಪ್ಪುಗೌಡ ಪಾಟೀಲ, ಮಹಿಬೂಬ ಬೇನೂರ, ಸಿದ್ದು ಡಂಗಾ, ವಿಜಯಕುಮಾರ ಬೋಸಲೆ ಶ್ರೀಶೈಲಗೌಡ ಪಾಟೀಲ, ಪೀರಪ್ಪ ಹೊಟಗಾರ, ಹಣಮಂತ ಹರಳಯ್ಯಾ ,ಬಸಗೊಂಡ ಪಾಟೀಲ, ರುದ್ದೇಶ ಖೈನೂರ, ರೇವಣಸಿಸಿದ್ದ ಗೊಡಕೆ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ವೇದಿಕೆಯಲ್ಲಿದ್ದರು.