ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDA vs ENGA: ಇಂಗ್ಲೆಂಡ್‌ ಲಯನ್ಸ್‌ ಎದುರು ಶತಕ ಸಿಡಿಸಿದ ಕನ್ನಡಿಗ ಕೆಎಲ್‌ ರಾಹುಲ್‌!

KL Rahul Scored Hundred againsr England Lions: ಇಂಗ್ಲೆಂಡ್‌ ವಿರುದ್ಧ ಮುಂಬವರು ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಕೆಎಲ್‌ ರಾಹುಲ್‌ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಅವರು ಜೂನ್‌ 6 ರಂದು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಎರಡನೇ ಅನಗತ್ಯ ಟೆಸ್ಟ್‌ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ.

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಶತಕ ಬಾರಿಸಿದ ಕೆಎಲ್‌ ರಾಹುಲ್!

ಕೆಎಲ್‌ ರಾಹುಲ್‌ ಶತಕ ಸಿಡಿಸಿದ್ದಾರೆ.

Profile Ramesh Kote Jun 6, 2025 9:52 PM

ನಾರ್ಥ್‌ಹ್ಯಾಮ್ಟನ್‌: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ (IND vs ENG) ಮುನ್ನ ಭಾರತ ತಂಡದ ಬ್ಯಾಟ್ಸ್‌ಮನ್‌ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಶುಭ ಚಿಹ್ನೆಯನ್ನು ನೀಡಿದ್ದಾರೆ. ಇಂಗ್ಲೆಂಡ್‌ ವಿರುದ್ದ ಪ್ರಸ್ತುತ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ತೆಂಡೂಲ್ಕರ್‌-ಆಂಡರ್ಸನ್‌ (Tendulkar-Anderson) ಟೆಸ್ಟ್‌ ಸರಣಿಗೂ ಮುನ್ನ ಕೆಎಲ್‌ ರಾಹುಲ್‌ ಭರ್ಜರಿ ಫಾರ್ಮ್‌ ಅನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಇಂಡಿಯಾಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.

ಇಲ್ಲಿನ ಕೌಂಟಿ ಗ್ರೌಂಡ್‌ನಲ್ಲಿ ಜೂನ್‌ 6 ರಂದು ಶುಕ್ರವಾರ ಆರಂಭವಾದ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತ ಎ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಜೋಡಿಯಿಂದ ದೊಡ್ಡ ಮೊತ್ತ ಮೂಡಿ ಬರಲಿಲ್ಲ. 26 ಎಸೆತಗಳಲ್ಲಿ 17 ರನ್‌ ಗಳಿಸಿದ ಬಳಿಕ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಭಿಮನ್ಯು ಈಶ್ವರನ್‌ ಕೇವಲ 11 ರನ್‌ ಗಳಿಸಿ ಔಟ್‌ ಆದರು. ಆ ಮೂಲಕ ಭಾರತ ಎ ತಂಡ 40 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

INDA vs ENGA: ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕರುಣ್‌ ನಾಯರ್!

ಕೆಎಲ್‌ ರಾಹುಲ್‌ ಭರ್ಜರಿ ಶತಕ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಮುಗಿಸಿಕೊಂಡ ಬಳಿಕ ಕೆಎಲ್‌ ರಾಹುಲ್‌ ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಅದರಂತೆ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶವನ್ನು ತೋರಿದರು. ಅವರು ಆಡಿದ 168 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 116 ರನ್‌ಗಳನ್ನು ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಲು ನೆರವು ನೀಡಿದರು. ಅಲ್ಲದೆ, ಅವರು ಧ್ರುವ್‌ ಜುರೆಲ್‌ ಅವರ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 121 ರನ್‌ಗಳನ್ನು ಕಲೆ ಹಾಕಿದರು.

ಧ್ರುವ್‌ ಜುರೆಲ್‌ ಅರ್ಧಶತಕ

ಕೆಎಲ್‌ ರಾಹುಲ್‌ ಜೊತೆ ಶತಕದ ಜೊತೆಯಾಟವನ್ನುಆಡಿದ ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ ಕೂಡ ಕೆಲ ಕಾಲ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. 87 ಎಸೆತಗಳನ್ನು ಆಡಿದ ಅವರು 7 ಮನಮೋಹಕ ಬೌಂಡರಿಗಳೊಂದಿಗೆ 52 ರನ್‌ಗಳನ್ನು ಕಲೆ ಹಾಕಿದರು. ಇದಕ್ಕೂ ಮುನ್ನ ಮತ್ತೊಬ್ಬ ಕನ್ನಡಗ ಕರುಣ್‌ ನಾಯರ್‌ 71 ಎಸೆತಗಳಲ್ಲಿ 40 ರನ್‌ಗಳನ್ನು ಬಾರಿಸಿ ವಿಕೆಟ್‌ ಒಪ್ಪಿಸಿದ್ದರು. ಅಂದ ಹಾಗೆ ಕರುಣ್‌ ನಾಯರ್‌ ಮೊದಲನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. 63 ಓವರ್‌ಗಳು ಮುಗಿಯುವ ಹೊತ್ತಿಗೆ ಭಾರತ ಎ ತಂಡ ಐದು ವಿಕೆಟ್‌ಗಳ ನಷ್ಟಕ್ಕೆ 257 ರನನ್‌ಗಳನ್ನು ಕಲೆ ಹಾಕಿತ್ತು.



ಮೊದಲನೇ ಅನಧಿಕೃತ ಟೆಸ್ಟ್‌ ಡ್ರಾ

ಇದಕ್ಕೂ ಮುನ್ನ ಮೇ 30 ರಂದು 2ರವರೆಗೆ ನಡೆದಿದ್ದ ಮೊದಲನೇ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ಎ ತಂಡ, 125.1 ಓವರ್‌ಗಳಿಗೆ 557 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಕರುಣ್‌ ನಾಯರ್‌ 204 ರನ್‌ ಗಳಿಸಿದ್ದರು. ಬಳಿಕ ಪ್ರಥಮ ಇನಿಂಗ್ಸ್‌ ಆಡಿದ್ದ ಇಂಗ್ಲೆಂಡ್‌ ಲಯನ್ಸ್‌ ತಂಡ 145.5 ಓವರ್‌ಗಳಿಗೆ 587 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಭಾರತ ಎ 41 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 241 ರನ್‌ಗಳನ್ನು ಕಲೆ ಹಾಕಿತ್ತು.