Kamal Haasan: ಭಾಷಾ ಹೇರಿಕೆ ವಿರುದ್ಧ ಕರ್ನಾಟಕದ ಪರವಾಗಿದ್ದೇನೆ ಎಂದ ಕಮಲ್
Kannada Language Row: ಕಮಲ್ ಹಾಸನ್ ದಕ್ಷಿಣದಲ್ಲಿ ಹಿಂದಿ ಭಾಷಾ ಹೇರಿಕೆ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ತಮ್ಮ ಹೊಸ ಚಿತ್ರ 'ಥಗ್ ಲೈಫ್' ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಅವರು, ನಾವು ಹಿಂದಿ ಭಾಷೆ ಹೇರಿಕೆ ಮಾಡದಿದ್ದರೂ ಕಲಿಯುತ್ತೇವೆ. ನಮಗೆ ಭಾಷೆ ಹೇರಿಕೆ ಮಾಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಕಮಲ್ ಹಾಸನ್.

ಚೆನ್ನೈ: ಕನ್ನಡ ಭಾಷೆ (Kannada language row) ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡ ನಟ ಕಮಲ್ ಹಾಸನ್ (Actor Kamal Haasan) ಈಗ ದಕ್ಷಿಣದಲ್ಲಿ ಹಿಂದಿ ಭಾಷಾ ಹೇರಿಕೆ (Hindi imposition) ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ತಮ್ಮ ಹೊಸ ಚಿತ್ರ 'ಥಗ್ ಲೈಫ್' ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಅವರು, ನಾವು ಹಿಂದಿ ಭಾಷೆ ಹೇರಿಕೆ ಮಾಡದಿದ್ದರೂ ಕಲಿಯುತ್ತೇವೆ. ನಮಗೆ ಭಾಷೆ ಹೇರಿಕೆ ಮಾಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಕಮಲ್ ಹಾಸನ್ ಈಗ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹೊಸ ಚಿತ್ರ 'ಥಗ್ ಲೈಫ್' ಪ್ರಚಾರದ ವೇಳೆ ಕಮಲ್, ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿದ್ದಾರೆ.
65 ವರ್ಷಗಳ ವೃತ್ತಿ ಜೀವನದ 234ನೇ ಚಿತ್ರ 'ಥಗ್ ಲೈಫ್' ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಿ ವಿವಾದ ಉಂಟು ಮಾಡಿದ ಕಮಲ್ ಹಾಸನ್ ಕ್ಷಮೆಯಾಚಿಸಲು ನಿರಾಕರಿಸಿದರು. ಇದರಿಂದಾಗಿ ಈ ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲ.
ತ್ರಿಭಾಷಾ ನೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ʼಏಕ್ ದುಯೆ ಕೆ ಲಿಯೇʼ ಚಿತ್ರದಲ್ಲಿ ನಟಿಸುವಾಗ ನಾನು ಹಿಂದಿ ಕಲಿತಿದ್ದೇನೆ. ನಾವು ಹೇರಿಕೆ ಇಲ್ಲದೆ ಭಾಷೆ ಕಲಿಯುತ್ತೇವೆ. ಆದರೆ ಭಾಷೆಯನ್ನು ಹೇರಬೇಡಿ. ಇದರಿಂದ ಅಂತಿಮವಾಗಿ ಶಿಕ್ಷಣ ಮತ್ತು ನಾವು ಶಿಕ್ಷಣದಲ್ಲಿ ಕಡಿಮೆ ಮಾರ್ಗವನ್ನು ತೋರಿಸುತ್ತದೆ. ಶಿಕ್ಷಣದ ದಾರಿಯಲ್ಲಿ ಅಡೆತಡೆಗಳನ್ನು ಹಾಕಬಾರದು ಎಂದರು.
ನಿರ್ದಿಷ್ಟ ಭಾಷೆಯ ಹೇರಿಕೆಯು ಕಲಿಕಾ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದ ಕಮಲ್, ಈ ವಿಚಾರದಲ್ಲಿ ನಾನು ಪಂಜಾಬ್, ಕರ್ನಾಟಕ, ಆಂಧ್ರ ಪ್ರದೇಶಕ್ಕೂ ಬೆಂಬಲ ನೀಡುತ್ತೇನೆ. ಇದು ಈ ಹೇರಿಕೆಯನ್ನು ವಿರೋಧಿಸುತ್ತಿವೆ ಎಂದರು.
ಇದನ್ನೂ ಓದಿ: Hassan News: ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್ ಮಾಡಿ ಹಿಂದಕ್ಕೆ ತಳ್ಳಿದ ಬೈಕ್ ಸವಾರ; ಮುಂದೇನಾಯ್ತು?
ದಕ್ಷಿಣ ಮತ್ತು ಉತ್ತರದಲ್ಲಿ ಚಲನಚಿತ್ರಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿರುವ ಕಮಲ್ ಹಾಸನ್, ಅಂತಾರಾಷ್ಟ್ರೀಯ ಪ್ರಗತಿಯನ್ನು ಕಾಣಬೇಕಾದರೆ ಒಂದು ಭಾಷೆಯನ್ನು ಕಲಿಯಬೇಕು. ಅದುವೇ ಇಂಗ್ಲಿಷ್. ನಮ್ಮಲ್ಲಿ ಇಂಗ್ಲಿಷ್ ಶಿಕ್ಷಣ ಇನ್ನೂ ನಿಧಾನವಾಗಿದೆ ಎಂದು ನಾನು ಭಾವಿಸುತ್ತೇನೆ. ಈಗ ಇದ್ದಕ್ಕಿದ್ದಂತೆ ಅದನ್ನು ಬದಲಾಯಿಸಿದರೆ ಅನಗತ್ಯವಾಗಿ ಅನೇಕ ಜನರು ಅನಕ್ಷರಸ್ಥರಾಗುತ್ತಾರೆ. ವಿಶೇಷವಾಗಿ ತಮಿಳುನಾಡಿನಲ್ಲಿ ಎಂದರು.