Eshani: ಇಶಾನಿಯ ಹೊಸ ಆಲ್ಬಂ ಸಾಂಗ್ ರಿಲೀಸ್: ಸಖತ್ ಹಾಟ್ ಅವತಾರದಲ್ಲಿ ಬಿಗ್ ಬಾಸ್ ಬೆಡಗಿ
ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇಶಾನಿ ದಿಢೀರ್ ಎಂದು ಟ್ರೆಂಡಿಂಗ್ನಲ್ಲಿದ್ದಾರೆ. ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡುತ್ತಿದ್ದ ಇಶಾನಿ ಈಗ ಹೊಸ ಆಲ್ಬಂ ಸಾಂಗ್ ಮೂಲಕ ಕಿಚ್ಚು ಹಚ್ಚಿದ್ದಾರೆ. ಇವರ ಹೊಸ ಸ್ವೇ ಎಂಬ ಹೊಸ ಸಾಂಗ್ ರಿಲೀಸ್ ಆಗಿದೆ.

Eshani New album song

ಕನ್ನಡದಲ್ಲಿ ಮಹಿಳೆಯರ ಹಿಪಾಪ್ ಸಾಂಗ್ ಅಂದಾಗ ತಕ್ಷಣ ನೆನಪಿಗೆ ಬರುವುದು ಇಶಾನಿ (Eshani). ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇವರು ರ್ಯಾಪರ್ ಆಗಿದ್ದು, ಈವರೆಗೂ 17 ಇಂಗ್ಲಿಷ್ ಆಲ್ಬಂ, 3 ಕನ್ನಡ ಆಲ್ಬಂ ಮಾಡಿದ್ದಾರೆ. ಇಶಾನಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹೆಚ್ಚಾಗಿ ಫೋಟೋ ಶೂಟ್ ಅಥವಾ ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಆದರೆ, ಕಳೆದ ಕೆಲವು ಸಮಯದಿಂದ ಇವರ ಹೊಸ ಆಲ್ಬಂ ಸಾಂಗ್ ಯಾವುದೀ ರಿಲೀಸ್ ಆಗಿರಲಿಲ್ಲ.
ಆದರೀಗ ದಿಢೀರ್ ಎಂದು ಇಶಾನಿ ಟ್ರೆಂಡಿಂಗ್ನಲ್ಲಿದ್ದಾರೆ. ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡುತ್ತಿದ್ದ ಇಶಾನಿ ಈಗ ಹೊಸ ಆಲ್ಬಂ ಸಾಂಗ್ ಮೂಲಕ ಕಿಚ್ಚು ಹಚ್ಚಿದ್ದಾರೆ. ಇವರ ಹೊಸ ಸ್ವೇ ಎಂಬ ಹೊಸ ಸಾಂಗ್ ರಿಲೀಸ್ ಆಗಿದೆ. ಇದು ಸಖತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ ಇಶಾನಿ ಇದರಲ್ಲಿ ಮೈಚಳಿ ಬಿಟ್ಟು ಅಭಿಮಾನಯ ಮಾಡಿರುವ ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ವಿಶೇಷ ಏನೆಂದರೆ ಇಶಾನಿ ಜೊತೆಗೆ ಅಭಿನಿಸಿರುವುದು ಗಟ್ಟಿಮೇಳ ಹಾಗೂ ನಂದಗೋಕುಲ ಖ್ಯಾತಿಯ ನಟ ಅಭಿದಾಸ್. ದೇಹವನ್ನ ಹುರಿಗೋಳಿಸಿರೋ ಅಭಿದಾಸ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಶಾನಿ-ಅಭಿ ಜೋಡಿ ಇಲ್ಲಿ ಫಯರ್ ಕ್ರಿಯೇಟ್ ಮಾಡಿದೆ. ಇಂಗ್ಲಿಷ್ ಭಾಷೆಯಲ್ಲಿರೋ ಹಾಡಿಗೆ ತಾರೆಯರು ಸೇರಿದಂತೆ ಇಶಾನಿ ಅಭಿದಾಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಇಶಾನಿ ಹುಟ್ಟಿದ್ದು ಮೈಸೂರಿನಲ್ಲಿ. ಆದರೆ, ಬೆಳೆದಿದ್ದು ಬೆಂಗಳೂರು, ದುಬೈ ಹಾಗೂ ಲಾಸ್ ಏಂಜಲೀಸ್‌ನಲ್ಲಿ. ಚಿಕ್ಕವಯಸ್ಸಿನಿಂದಲೂ ಇಶಾನಿಗೆ ಮ್ಯೂಸಿಕ್ ಅಂದ್ರೆ ಇಷ್ಟ. ಇವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯದಿದ್ದರೂ ತಮ್ಮ ಮಾತು ಹಾಗೂ ಕೃತಿಯಿಂದ ಜನಪ್ರಿಯರಾದರು. ಜೊತೆಗೆ ವಿವಾದ ಕೂಡ ಮಾಡಿಕೊಂಡರು. ಡ್ರೋನ್ ಪ್ರತಾಪ್ ವಿಚಾರದಲ್ಲಿ ಸಖತ್ ಟ್ರೋಲ್ ಆಗಿದ್ದರು. ವಿನಯ್ ಹಾಗೂ ನಮ್ರತಾ ಜೊತೆಗೆ ಜ್ಯೂಸ್ ಕುಡಿಯುತ್ತಾ ಕುಳಿತಿದ್ದ ಇಶಾನಿ, ನೇರವಾಗಿಯೇ ಪ್ರತಾಪ್ ಮೇಲೆ ವಾಗ್ದಾಳಿ ನಡೆಸಿದ್ದರು. "ಕಾಗೆ ಗೊತ್ತಿಲ್ವಾ..? ಕಾಗೆ ಕಕ್ಕ ಮಾಡ್ಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇರುತ್ತೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ ಉಳ್ಕೊಂಡಿದ್ದಾರೆ ಅಲ್ವಾ" ಎಂದು ಹೇಳಿದ್ದರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
Bhavya Gowda: ಕರ್ಣ ಧಾರಾವಾಹಿ ವಿವಾದದ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ಪ್ರತ್ಯಕ್ಷವಾದ ಭವ್ಯಾ ಗೌಡ