ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drug mafia: ಬೆಂಗಳೂರಿನಲ್ಲಿ ಗಾಂಜಾಮಿಶ್ರಿತ ಜೆಲ್ಲಿ ಚಾಕೊಲೇಟ್‌ ಪತ್ತೆ, ಗ್ಯಾಂಗ್‌ನ ಇಬ್ಬರ ಬಂಧನ

Drug mafia: ಗಾಂಜಾದ ಭಟ್ಟಿ ಇಳಿಸಿರುವ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿರುವುದು ಪತ್ತೆ ಆಗಿದೆ. ಒಂದು ಪ್ಯಾಕ್​ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಇದೆ. ಈ ಜೆಲ್ಲಿ ಬಾಯಿಗೆ ಇಟ್ಟಾಗ ಕರಗುತ್ತದೆ ಹಾಗೂ ಮತ್ತು ತರಿಸುತ್ತದಂತೆ. ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್​​ಗಿಂತ ಈ ಜೆಲ್ಲಿ ಗಾಂಜಾ ಕಿಕ್ಕು ಹೆಚ್ಚು ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಗಾಂಜಾಮಿಶ್ರಿತ ಜೆಲ್ಲಿ ಚಾಕೊಲೇಟ್‌ ಪತ್ತೆ, ಇಬ್ಬರ ಬಂಧನ

ಬಂಧಿತ ಆರೋಪಿಗಳು

ಹರೀಶ್‌ ಕೇರ ಹರೀಶ್‌ ಕೇರ Jun 26, 2025 10:14 AM

ಬೆಂಗಳೂರು: ರಾಜಧಾನಿಯಲ್ಲಿ ಗಾಂಜಾ ಮಾರಾಟ (Ganja selling) ಮಾಡಲು ಕೇಡಿಗಳು ಹೊಸದೊಂದು ದಾರಿ ಹುಡುಕಿಕೊಂಡಿದ್ದಾರೆ. ಜೆಲ್ಲಿ ಚಾಕೊಲೇಟ್​​ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ (Bengaluru Crime news) ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್​​ ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಜೆಲ್ಲಿ ಗಾಂಜಾ ಗ್ಯಾಂಗ್‌ನ​ (Drug mafia) ಇಬ್ಬರನ್ನು ಬಂಧಿಸಿದ್ದಾರೆ. ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು.

ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿದ್ದು, ಒಟ್ಟು ಮೂರು ಲಕ್ಷ ರೂ. ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಗಾಂಜಾದ ಭಟ್ಟಿ ಇಳಿಸಿರುವ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿರುವುದು ಪತ್ತೆ ಆಗಿದೆ.

ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಆರೋಪಿಗಳು ವಾಸವಿದ್ದರು. ಮಂಗಳೂರು ಮೂಲದ ಸ್ನೇಹಿತನ ಮೂಲಕ ದಂಧೆ ನಡೆಸುತ್ತಿದ್ದರು. ಆರೋಪಿಗಳು ಈ ಜೆಲ್ಲಿ ಗಾಂಜಾವನ್ನು ಎಲ್ಲಿ ತಯಾರು ಮಾಡುತ್ತಿದ್ದರು ಎಂಬುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಒಂದು ಪ್ಯಾಕ್​ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಇದೆ. ಈ ಜೆಲ್ಲಿ ಬಾಯಿಗೆ ಇಟ್ಟಾಗ ಕರಗುತ್ತದೆ ಹಾಗೂ ಮತ್ತು ತರಿಸುತ್ತದಂತೆ. ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್​​ಗಿಂತ ಈ ಜೆಲ್ಲಿ ಗಾಂಜಾ ಕಿಕ್ಕು ಹೆಚ್ಚು ಎನ್ನಲಾಗುತ್ತಿದೆ. ಪಾಕೆಟ್​​ನಲ್ಲಿಟ್ಟುಕೊಂಡರೂ ಯಾರಿಗೂ ಡೌಟ್ ಬರಲ್ಲ. ಪೊಲೀಸರೇ ತಡಕಾಡಿದರೂ ಪೆಡ್ಲರ್ ಯಾರು, ಗ್ರಾಹಕ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲವಂತೆ.

ವಿದೇಶಿ ಡ್ರಗ್ ಪೆಡ್ಲರ್ ಬಂಧನ

ಇತ್ತೀಚೆಗೆ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಲಾಗಿತ್ತು. ನೈಜೀರಿಯಾ ಮೂಲದ ಆರೋಪಿ ಬ್ಯುಸಿನೆಸ್ ವೀಸಾದಡಿ ಬೆಂಗಳೂರಿಗೆ ಬಂದು, ತನ್ನ ದೇಶದಿಂದಲೇ ಕೆಜಿಗಟ್ಟಲೇ ಡ್ರಗ್ ತಂದು ಡೀಲರ್​ಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಡ್ರಗ್ ಡೀಲ್ ಮಾಡಲು ಸೆಕೆಂಡ್ ಹ್ಯಾಂಡ್ ಬೈಕ್ ಸಹ ಬಳಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Harassment: ಯುವತಿಗೆ ಕಿರಿಕ್‌ ಮಾಡಿದ ಗಾಂಜಾ ಗ್ಯಾಂಗ್:‌ ಐವರ ಬಂಧನ