ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 54 ವರ್ಷದ ಪ್ರಿಯಕರನನ್ನು ಪರಿಚಯಿಸಿ ಟ್ರೋಲ್ ಆದ 27 ವರ್ಷದ ಕಂಟೆಂಟ್ ಕ್ರಿಯೇಟರ್‌; ನೆಟ್ಟಿಗರು ಹೇಳಿದ್ದೇನು?

ವಿದೇಶಿ ಕಂಟೆಂಟ್ ಕ್ರಿಯೇಟರ್‌ ಸಾಸ್ ತನ್ನ 54 ವರ್ಷದ ಗೆಳೆಯನೊಂದಿಗಿನ ಪ್ರಣಯ ಸಂಬಂಧವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇವರ ನಡುವೆ 27 ವರ್ಷಗಳ ವಯಸ್ಸಿನ ಅಂತರವಿರುವುದರಿಂದ ಆಕೆ ನೆಟ್ಟಿಗರಿಂದ ಟ್ರೋಲ್ ಆಗಿದ್ದಾಳೆ.

54 ವರ್ಷದ ಗೆಳೆಯನೊಂದಿಗೆ 27 ವರ್ಷದ ಯುವತಿಯ ಲವ್ವಿ ಡವ್ವಿ

Profile pavithra Jun 26, 2025 2:09 PM

ಲಂಡನ್‌: ಇತ್ತೀಚೆಗೆ ಕಾರಿನ ಸನ್‌ರೂಫ್‌ ತೆಗೆದು ಯುವ ಜೋಡಿಯೊಂದು ಅಪ್ಪಿಕೊಂಡು ಲಿಪ್‌ ಲಾಕ್‌ ಮಾಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ವಿದೇಶಿ ಮಹಿಳೆ ಸಾಸ್ ತನ್ನ 54 ವರ್ಷದ ಗೆಳೆಯನೊಂದಿಗಿನ ಪ್ರಣಯ ಸಂಬಂಧವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರಿದ್ದಾರೆ. ಸಾಸ್ ಹಾಗೂ ಆಕೆಯ ಗೆಳೆಯನ ನಡುವೆ 27 ವರ್ಷಗಳ ವಯಸ್ಸಿನ ಅಂತರವಿದೆ. ಹಣದ ಆಸೆಗಾಗಿ ಆಕೆ ಈ ಸಂಬಂಧ ಬೆಳೆಸಿದ್ದಾಳೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಜನರ ಟೀಕೆಗೆ ಕುಗ್ಗದ ಸಾಸ್ ಅದಕ್ಕೆ ಪ್ರತಿಕ್ರಿಯಿಸಿ, "ನಮ್ಮನ್ನು ಚೆನ್ನಾಗಿ ತಿಳಿದಿರುವವರು ನಮ್ಮ ಸಂಬಂಧವನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಿಜ ಜೀವನದಲ್ಲಿ, ಜನರು ನಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಮ್ಮನ್ನು ನೋಡಿ ಸಂತೋಷಪಡುತ್ತಾರೆ" ಎಂದು ಹೇಳಿದ್ದಾಳೆ. ಹಾಗೇ ಸಾಸ್ ತನ್ನ ಗೆಳೆಯನನ್ನು "ವಿದ್ಯಾವಂತ, ಬುದ್ಧಿವಂತ, ಶ್ರೀಮಂತ, ಮತ್ತು ಆಕರ್ಷಕ ವ್ಯಕ್ತಿ " ಎಂದು ಖುಷಿಯಿಂದ ಹೊಗಳಿದ್ದಾಳೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕೂಡಲೇ ವೈರಲ್ ಆಗಿ, ಸಾಕಷ್ಟು ಜನ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಸಾಸ್ ಅವಳನ್ನು ಬೆಂಬಲಿಸಿದರೆ, ಇತರರು ಆ ಸಂಬಂಧವನ್ನು ಟೀಕಿಸಿದ್ದಾರೆ. "ಅವರು ನಿಮ್ಮ ತಂದೆಯ ವಯಸ್ಸಿನವರು. ಈ ಸಂಬಂಧ ತಪ್ಪು" ಎಂದಿದ್ದಾರೆ. ಮತ್ತೊಬ್ಬರು, “ಗೌರವಕ್ಕಿಂತ ಹಣವನ್ನು ಆರಿಸಿ” ಎಂದು ಟೀಕಿಸಿದರೆ, ಮೂರನೆಯವರು, “ಹಣ ಮತ್ತು ಐಷಾರಾಮಿಗಾಗಿ ಏನು ಬೇಕಾದರೂ ಮಾಡುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಚಲಿಸುತ್ತಿದ್ದ ಕಾರಿನಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ ಮಾಡಿದ ದಂಪತಿ; ಮುಂದಾಗಿದ್ದೇ ಬೇರೆ

ಅನೇಕರು ಸಾಸ್‌ಗೆ ಬೆಂಬಲ ನೀಡಿದ್ದಾರೆ. ಒಬ್ಬರು, "ಇದರಲ್ಲಿ ಜನರ ಸಮಸ್ಯೆ ಏನು? ಇದು ಅವರ ಜೀವನ. ಎಲ್ಲ ಸಂಬಂಧಗಳು ಒಂದೇ ಆಗಿರುವುದಿಲ್ಲ" ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ಸಂಬಂಧವನ್ನು ಹೊಗಳುತ್ತಾ, "ಸಾಸ್ ಪ್ರೀತಿಯ ಜತೆಗೆ ಭದ್ರತೆಯನ್ನು ಪಡೆಯುತ್ತಿದ್ದಾರೆ. ಅವರ ವಿಡಿಯೊಗಳನ್ನು ನೋಡಿ, ಅವರು ಎಷ್ಟು ಖುಷಿಯಾಗಿದ್ದಾರೆ! ವಯಸ್ಸಿನ ವ್ಯತ್ಯಾಸವು ಸಮಸ್ಯೆಯಲ್ಲ" ಎಂದು ಹೇಳಿದ್ದಾರೆ. ಮೂರನೆಯವರು, "ಸಂತೋಷವಿದ್ದರೆ, ವಯಸ್ಸು, ನೋಟ ಅಥವಾ ಇನ್ನೇನು ಮುಖ್ಯವಲ್ಲ. ಪ್ರೀತಿಯೇ ಮುಖ್ಯ!" ಎಂದು ಹೇಳಿದ್ದಾರೆ.