ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Root: ವಿಶ್ವ ದಾಖಲೆ ಸನಿಹ ಜೋ ರೂಟ್‌

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 6000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶ ಕೂಡ ಇದೆ. ಈ ಮೈಲಿಗಲ್ಲನ್ನು ತಲುಪಲು ಅವರಿಗೆ ಕನಿಷ್ಠ ಮೂರು ಟೆಸ್ಟ್‌ ಪಂದ್ಯಕ್ಕೂ ಹೆಚ್ಚಿನ ಸಮಯ ಬೇಕಾಗಬಹುದು.

ವಿಶ್ವ ದಾಖಲೆ ಸನಿಹ ಜೋ ರೂಟ್‌

Profile Abhilash BC Jun 26, 2025 12:23 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್(Joe Root) ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಜು.2 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್(IND vs ENG 2nd Test) ಪಂದ್ಯದಲ್ಲಿ ರೂಟ್‌ 73 ರನ್‌ ಗಳಿಸಿದರೆ ಭಾರತದ ವಿರುದ್ಧ 3000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ದಾಖಲೆ ಕೂಡ ರೂಟ್‌ ಹೆಸರಿನಲ್ಲಿಯೇ ಇದೆ. ಸದ್ಯ ಅವರು 2927* ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್(2555) ದ್ವಿತೀಯ ಸ್ಥಾನದಲ್ಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 6000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶ ಕೂಡ ಇದೆ. ಈ ಮೈಲಿಗಲ್ಲನ್ನು ತಲುಪಲು ಅವರಿಗೆ ಕನಿಷ್ಠ ಮೂರು ಟೆಸ್ಟ್‌ ಪಂದ್ಯಕ್ಕೂ ಹೆಚ್ಚಿನ ಸಮಯ ಬೇಕಾಗಬಹುದು. ರೂಟ್ ಇದುವರೆಗೆ ಡಬ್ಲ್ಯೂಟಿಸಿಯಲ್ಲಿ 5624 ರನ್ ಗಳಿಸಿದ್ದಾರೆ ಮತ್ತು ಐತಿಹಾಸಿಕ ಸಾಧನೆ ಮಾಡಲು ಅವರಿಗೆ 376 ರನ್‌ಗಳು ಬೇಕಾಗಿವೆ. ರೂಟ್‌ ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದರು. ಎಡ್ಜ್‌ಬಾಸ್ಟನ್‌ನಲ್ಲಿ ರೂಟ್‌ ಬ್ಯಾಟಿಂಗ್‌ ದಾಖಲೆ ಕೂಡ ಉತ್ತಮವಾಗಿದೆ.

ಭಾರತ ವಿರುದ್ಧ ಅತ್ಯಧಿಕ ಟೆಸ್ಟ್‌ ರನ್‌ ಗಳಿಸಿದ ಬ್ಯಾಟರ್‌ಗಳು

ಆಟಗಾರ ರನ್‌ ಪಂದ್ಯ
ಜೋ ರೂಟ್‌ 2927* 31
ರಿಕಿ ಪಾಂಟಿಂಗ್‌ 2555 29
ಅಲೆಸ್ಟರ್ ಕುಕ್ 2431 30
ಸೀವನ್‌ ಸ್ಮಿತ್‌ 2356 24
ಕ್ಲೈವ್ ಲಾಯ್ಡ್ 2344 28

ದ್ರಾವಿಡ್‌ ದಾಖಲೆ ಮೇಲೆ ಕಣ್ಣು

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿರುವ ಜೋ ರೂಟ್‌ ಇನ್ನೊಂದು ಕ್ಯಾಚ್‌ ಹಿಡಿದರೆ ದ್ರಾವಿಡ್‌ ಅವರನ್ನು ಹಿಂದಿಕ್ಕಿ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಲಿದ್ದಾರೆ. ಸದ್ಯ ಉಭಯ ಆಟಗಾರರು 210 ಕ್ಯಾಚ್‌ಗಳೊಂದಿಗೆ ಜಂಟಿ ಅಗ್ರಸ್ಥಾನಿಯಾಗಿದ್ದಾರೆ.