ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anupama Serial: ಜನಪ್ರಿಯ ಸೀರಿಯಲ್‌ಗೆ ಸಂಕಷ್ಟ; ನಿರ್ಮಾಪಕರ ವಿರುದ್ಧ ಕೇಸ್‌ ದಾಖಲು?

ʻಅನುಪಮಾʼ ದೇಶದ ನಂಬರ್ ಒನ್ ಸೀರಿಯಲ್ ಎಂಬ ಖ್ಯಾತಿಯನ್ನು ಕೂಡ ಪಡೆದಿದೆ. ಇದೀಗ ಇದೇ ಸಿರೀಯಲ್ ಸೆಟ್ ಅಗ್ನಿ ದುರಂತಕ್ಕೆ ಒಳಗಾಗಿದೆ. ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿ ಸೆಟ್ ನಲ್ಲಿ ಅನುಪಮಾ ಸೀರಿಯಲ್ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿತ್ತು, ಆದರೆ ಅಲ್ಲಿ ಅಗ್ನಿ ಅವಘಡವಾಗಿದೆ. ಇದೀಗ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.

ಜನಪ್ರಿಯ ಸೀರಿಯಲ್‌ಗೆ ಬೀಳುತ್ತಾ ತೆರೆ?

Profile Pushpa Kumari Jun 25, 2025 4:11 PM

ಮುಂಬೈ: ಸಾರಾಭಾಯ್ ವರ್ಸಸ್ ಸಾರಾಭಾಯ್ , ಅನುಪಮಾ ಇತ್ಯಾದಿ ಸೀರಿಯಲ್ ಮೂಲಕವೇ ಮನೆಮಾತಾದ ನಟಿ ರೂಪಾಲಿ ಗಂಗೂಲಿ (Rupali Ganguly) ಅವರು ತಮ್ಮ ಅದ್ಭುತ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದಾರೆ. ಅನುಪಮಾ ಸೀರಿಯಲ್ ದೇಶದ ನಂಬರ್ ಒನ್ ಸೀರಿಯಲ್ ಎಂಬ ಖ್ಯಾತಿಯನ್ನು ಕೂಡ ಪಡೆದಿತ್ತು. ಇದೀಗ ಇದೇ ಸೀರಿಯಲ್ ಸೆಟ್ ಅಗ್ನಿ ದುರಂತಕ್ಕೆ ಒಳಗಾಗಿದೆ. ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿ ಸೆಟ್ ನಲ್ಲಿ ಅನುಪಮಾ ಸೀರಿಯಲ್ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿತ್ತು, ಆದರೆ ಅಲ್ಲಿ ಅಗ್ನಿ ಅವಘಡವಾಗಿದೆ. ಇದೀಗ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶೂಟಿಂಗ್ ಸೆಟ್‌ಗಳಲ್ಲಿ ಯಾವುದೇ ಸೂಕ್ತ ಸುರಕ್ಷತಾ ಕ್ರಮ ವಹಿಸದೇ ಕಾರ್ಮಿಕರ ಜೀವವನ್ನು ಪಣಕ್ಕಿಟ್ಟು ಶೂಟಿಂಗ್ ಮಾಡಲು ಮುಂದಾದ ನಿರ್ಮಾಪಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘವು ಮಹಾರಾಷ್ಟ್ರದ ಸಿಎಂ ಅವರಿಗೆ ಮನವಿ ಪತ್ರವನ್ನು ಬರೆದಿದೆ.

ಮುಂಬೈ ಮತ್ತು ಇತರ ಭಾಗದ ಚಲನಚಿತ್ರ ಸ್ಟುಡಿಯೋಗಳಲ್ಲಿ ಪದೇ ಪದೆ ಬೆಂಕಿ ಅವಘಡಗಳು ನಡೆಯುವ ಪ್ರಮಾಣ ಇತ್ತೀಚಿನ ವರ್ಷದಲ್ಲಿ ಹೆಚ್ಚಾಗಿದೆ. ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಸಾವಿರಾರು ತಂತ್ರಜ್ಞರು, ಕಾರ್ಮಿಕರು ಮತ್ತು ಕಲಾವಿದರು ಪ್ರತಿದಿನ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಹಿಂದಿನ ಹಲವಾರು ಘಟನೆಗಳು ಮತ್ತು ಎಚ್ಚರಿಕೆಗಳ ಹೊರ ತಾಗಿಯೂ, ಅಧಿಕಾರಿಗಳು ಅಥವಾ ಫಿಲ್ಮ್ ಸಿಟಿ ಆಡಳಿತವು ಯಾವುದೇ ವ್ಯವಸ್ಥಿತ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಕಾರ್ಮಿಕರ ಸಂಘವು ಈ ಬಗ್ಗೆ ಉಲ್ಲೇಖಿಸಿದೆ.

ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘವು ಈ ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ಈ ವಿಚಾರವನ್ನು ಗಮನಕ್ಕೆ ತಂದಿದೆ. ಹಾಗಿದ್ದರೂ ಕಟ್ಟುನಿಟ್ಟಾದ ಅಗ್ನಿ ಸುರಕ್ಷತಾ ಮಾರ್ಗ ಸೂಚಿ ಗಳು ಜಾರಿಗೆ ತರುವಲ್ಲಿ ವಿಫಲವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು.ಕಾರ್ಯಕ್ರಮದ ನಿರ್ಮಾಪಕರ ವಿರುದ್ಧವೂ ಎಫ್‌ಐಆರ್ ದಾಖಲಿ ಸಬೇಕು ಮತ್ತು ಮುಂಬೈ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಗೊಳಿಸ ಬೇಕೆಂದು ಸಂಘವು ಒತ್ತಾಯಿಸಿದೆ.

ಇದನ್ನು ಓದಿ:X&Y Movie: ʼರಾಮಾ ರಾಮಾ ರೇʼ ಖ್ಯಾತಿಯ ಡಿ.ಸತ್ಯಪ್ರಕಾಶ್ ನಿರ್ದೇಶನ, ನಟನೆಯ ʼX&Yʼ ಚಿತ್ರ ಜೂ.26ರಂದು ರಿಲೀಸ್‌

ರೂಪಾಲಿ ಗಂಗೂಲಿ ಅವರ ಅನುಪಮಾ ಸೀರಿಯಲ್‌ ಜೂ. 23ರಂದು ಶೂಟಿಂಗ್ ಸೆಟ್ ಬೆಂಕಿಗೆ ಆಹುತಿಯಾಯಿತು. ಬೆಂಕಿ ಅವಘಡದ ನಂತರ ಬೆಂಕಿ ಅವಘಡದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ನಿರ್ಮಾಪಕರು ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಈ ಘಟನೆಯ ಬಗ್ಗೆ ಯಾವುದೇ ತಪ್ಪು ಮಾಹಿತಿ ನೀಡುವುದನ್ನು ತಪ್ಪಿಸುವಂತೆ ಅವರು ಅಭಿ ಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ