ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suicide Bomb Blast: ಆತ್ಮಾಹುತಿ ಬಾಂಬ್‌ ಸ್ಫೋಟ- ತಾಲಿಬಾನ್‌ಗಳು ದಾಳಿ ಹೊತ್ತುಕೊಂಡ್ರೂ ಭಾರತದ ಮೇಲೆ ಪಾಕ್‌ ಬ್ಲೇಮ್‌ ಗೇಮ್‌

ನಿನ್ನೆ ಮಧ್ಯಾಹ್ನ ತಾಲಿಬಾನ್ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 16 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇನ್ನು ಈ ಡೆಡ್ಲಿ 2019ರಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಹೋಲುತ್ತದೆ ಎನ್ನಲಾಗಿದೆ.

ಆತ್ಮಾಹುತಿ ಬಾಂಬ್‌: ಭಾರತದ ಮೇಲೆ ಪಾಕ್‌ ಬ್ಲೇಮ್‌ ಗೇಮ್‌

Profile Rakshita Karkera Jun 29, 2025 2:55 PM

ಇಸ್ಲಾಮಾಬಾದ್‌: ನಿನ್ನೆ ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯನ್ನೇ ಹೋಲುವ ಆತ್ಮಾಹುತಿ ಕಾರು ಸ್ಫೋಟ(Suicide Bomb Blast) ಸಂಭವಿಸಿದ್ದು, ಬರೋಬ್ಬರಿ 16 ಪಾಕ್‌ ಸೈನಿಕರು ಹತ್ಯೆಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ತಾಲಿಬಾನ್‌ ಜೊತೆ ಗುರುತಿಸಿಕೊಂಡಿರುವ ಹಫೀಝ್‌ ಗುಲ್‌ ಬಹದ್ದೂರ್‌ ಎಂಬ ಸಂಘಟನೆ ಹೊತ್ತುಕೊಂಡಿದೆ. ಇಷ್ಟಾದರೂ ಕುತಂತ್ರಿ ಪಾಕ್‌ ಮಾತ್ರ ಭಾರತದತ್ತ ಬೊಟ್ಟು ಮಾಡಿದೆ. ಈ ದಾಳಿಯನ್ನು ಭಾರತವೇ ನಡೆಸಿದೆ ಎಂದು ಆರೋಪಿಸಿದೆ. ಪಾಕ್‌ನ ಈ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ. ಆತ್ಮಹತ್ಯಾ ಬಾಂಬರ್ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ವಿದೇಶಾಂಗ ಸಚಿವಾಲಯ ಭಾನುವಾರ ಬಲವಾಗಿ ತಿರಸ್ಕರಿಸಿದೆ.

"ಜೂನ್ 28 ರಂದು ವಜೀರಿಸ್ತಾನ್ ಮೇಲೆ ನಡೆದ ದಾಳಿಗೆ ಭಾರತವನ್ನು ದೂಷಿಸಿ ಪಾಕಿಸ್ತಾನ ಸೇನೆಯು ಅಧಿಕೃತ ಹೇಳಿಕೆಯನ್ನು ನೀಡಿರುವುದನ್ನು ನಾವು ನೋಡಿದ್ದೇವೆ. ಈ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ X ರಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Border Security Force: ಪಾಕ್‌-ಭಾರತ ಉದ್ವಿಗ್ನತೆ ನಡುವೆಯೇ ಬಿಎಸ್‌ಎಫ್‌ ಯೋಧರಿಗೆ ಸಿಕ್ತು ಗುಡ್‌ನ್ಯೂಸ್‌!

ನಿನ್ನೆ ಮಧ್ಯಾಹ್ನ ತಾಲಿಬಾನ್ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 16 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇನ್ನು ಈ ಡೆಡ್ಲಿ 2019ರಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಹೋಲುತ್ತದೆ ಎನ್ನಲಾಗಿದೆ. ಈ ಬಗ್ಗೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಈ ಸ್ಫೋಟದಲ್ಲಿ 16 ಸೈನಿಕರು ಸಾವನ್ನಪ್ಪಿದ್ದಾರೆ, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ಆರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ನಾಲ್ವರು ಸೈನಿಕರು ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ ತಾಲಿಬಾನ್‌ನ ಒಂದು ಬಣವಾದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪಿನ ಆತ್ಮಹತ್ಯಾ ಬಾಂಬರ್ ವಿಭಾಗವು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.