Donald Trump: ಭಾರತ-ಪಾಕ್ ಸಂಘರ್ಷಕ್ಕೆ ಕೊನೆ ಹಾಡಿದ್ದೇ ನಾನು; ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಘರ್ಷಣೆಯನ್ನು (Conflict) ನಾನೇ ತಡೆದಿದ್ದೇನೆ ಎಂದು ಬುಧವಾರ ಮತ್ತೊಮ್ಮೆ ಹೇಳಿದ್ದಾರೆ. "ಭಾರತ-ಪಾಕ್ ಘರ್ಷಣೆಯನ್ನು ತಡೆಯುವುದು ಪ್ರಮುಖವಾಗಿತ್ತು ಎಂದು ಟ್ರಂಪ್, ನೆದರ್ಲೆಂಡ್ಸ್ನ ದಿ ಹೇಗ್ನಲ್ಲಿ ನಡೆದ ನ್ಯಾಟೋ ಶೃಂಗಸಭೆಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಘರ್ಷಣೆಯನ್ನು (Conflict) ನಾನೇ ತಡೆದಿದ್ದೇನೆ ಎಂದು ಬುಧವಾರ ಮತ್ತೊಮ್ಮೆ ಹೇಳಿದ್ದಾರೆ. ಯುದ್ಧ ಮುಂದುವರಿದರೆ ಎರಡೂ ದೇಶಗಳೊಂದಿಗೆ ಅಮೆರಿಕ ವ್ಯಾಪಾರ ಮಾಡುವುದಿಲ್ಲ ಎಂದು ತಾಕೀತು ಮಾಡಿದ್ದೇನೆ ಎಂದು ಹೇಳುವ ಮೂಲಕ ಭಾರತ-ಪಾಕ್ ಸಂಘರ್ಷವನ್ನು ನಾನೇ ತಡೆದಿದ್ದೇನೆ ಎಂದಿದ್ದಾರೆ.
"ಭಾರತ-ಪಾಕ್ ಘರ್ಷಣೆಯನ್ನು ತಡೆಯುವುದು ಪ್ರಮುಖವಾಗಿತ್ತು ಎಂದು ಟ್ರಂಪ್, ನೆದರ್ಲೆಂಡ್ಸ್ನ ದಿ ಹೇಗ್ನಲ್ಲಿ ನಡೆದ ನ್ಯಾಟೋ ಶೃಂಗಸಭೆಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಕ್ತಿಯನ್ನು ಹೊಂದಿವೆ ಎಂದ ಅವರು, ಎರಡೂ ದೇಶಗಳೊಂದಿಗೆ ವ್ಯಾಪಾರದ ಕುರಿತು ಫೋನ್ ಸಂಭಾಷಣೆ ನಡೆಸಿದ್ದಾಗಿ ತಿಳಿಸಿದರು.
ಕಳೆದ ದಾಳಿಯ ತೀವ್ರತೆಯನ್ನು ಗಮನಿಸಿ, ಅದು ತುಂಬಾ ಭೀಕರವಾಗಿತ್ತು. ಯುದ್ಧ ಮುಂದುವರಿದರೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವುದಿಲ್ಲವೆಂದು ನಾನು ಹೇಳಿದ್ದೆ ಎಂದು ಟ್ರಂಪ್ ಹೇಳಿದರು. ದೇಶಗಳು ವಾಣಿಜ್ಯ ಒಪ್ಪಂದ ಮಾಡಲೇಬೇಕು ಎಂದಾಗ, ಯುದ್ಧ ಮಾಡಿದರೆ ಯಾವುದೇ ಒಪ್ಪಂದವಿಲ್ಲ ಎಂದು ತಾಕೀತು ಮಾಡಿದ್ದಾಗಿ ತಿಳಿಸಿದರು. ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಈ ತಿಂಗಳು ವೈಟ್ಹೌಸ್ಗೆ ಭೇಟಿ ನೀಡಿದ್ದರು ಎಂದು ಟ್ರಂಪ್ ಹೇಳಿದರು. ಜನರಲ್ ತುಂಬಾ ಪ್ರಭಾವಶಾಲಿಯಾಗಿದ್ದ. ಕಳೆದ ವಾರ ನನ್ನ ಕಚೇರಿಯಲ್ಲಿದ್ದರು ಎಂದರು. ಪ್ರಧಾನಿ ಮೋದಿ ನನ್ನ ಗೊತ್ತಿರುವವರು. ಅವರು ಶ್ರೇಷ್ಠ ವ್ಯಕ್ತಿ, ಅವರ ಜತೆ ವಿವೇಕದಿಂದ ಮಾತನಾಡಿ ಯುದ್ಧ ತಡೆದೆ. ವಾಣಿಜ್ಯ ಒಪ್ಪಂದಕ್ಕಾಗಿ ಅವರು ಶಾಂತಿಯನ್ನು ಒಪ್ಪಿದರು. ನಾವು ಪರಮಾಣು ಯುದ್ಧವನ್ನು ತಡೆದಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Donald Trump: ಅವನೊಬ್ಬ ಕಮ್ಯುನಿಸ್ಟ್ ಹುಚ್ಚ; ಭಾರತೀಯ ಮೂಲದ ಮೇಯರ್ ಅಭ್ಯರ್ಥಿಯ ವಿರುದ್ಧ ಟ್ರಂಪ್ ವಾಗ್ದಾಳಿ
ಟ್ರಂಪ್, ಭಾರತ-ಪಾಕ್ ಘರ್ಷಣೆಯನ್ನು ಸರಿಪಡಿಸಿದೆ" ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಭಾರತವು ಈ ಶಾಂತಿ ಒಪ್ಪಂದವು ಎರಡೂ ದೇಶಗಳ ಸೇನಾಪಡೆಗಳ ಸೈನಿ ಕಾರ್ಯಾಚರಣೆಯ ನಿರ್ದೇಶಕ ಜನರಲ್ಗಳ (ಡಿಜಿಎಂಒ) ನೇರ ಮಾತುಕತೆಯಿಂದ ನಡೆದಿದೆ ಎಂದು ಒತ್ತಿಹೇಳಿದೆ. ಕಳೆದ ವಾರ ಟ್ರಂಪ್ ಜೊತೆ 35 ನಿಮಿಷಗಳ ಫೋನ್ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ, ಭಾರತವು ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಈ ಮಾತುಕತೆಗಳು ಪಾಕಿಸ್ತಾನದ ಕೋರಿಕೆಯಂತೆ ಆರಂಭವಾದವು ಎಂದು ಸ್ಪಷ್ಟಪಡಿಸಿದರು.