Priyanka Chopra: ಪ್ರಿಯಾಂಕಾ ಶೂಟಿಂಗ್ ಸೆಟ್ನಲ್ಲಿ ಮಗಳು ಮಾಲ್ತಿ ಕ್ಯೂಟ್ ರಿಯಾಕ್ಷನ್ ಹೇಗಿತ್ತು?
ಬಾಲಿವುಡ್ ಬಳಿಕ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ವೈಯಕ್ತಿಕ ವಿಚಾರದಲ್ಲಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಸಿನಿಮಾದ ಜತೆ ಕುಟುಂಬದೊಂದಿಗೂ ಸಮಯ ಕಳೆಯುವ ಪ್ರಿಯಾಂಕಾ ಮಗಳಿಗಾಗಿ ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ʼಹೆಡ್ಸ್ ಆಫ್ ಸ್ಟೇಟ್ʼ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾಗಲೂ ಮಗಳು ಮಾಲ್ತಿ ತನ್ನೊಂದಿಗೆ ಸಮಯ ಕಳೆಯುತ್ತಿದ್ದಳು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Priyanka Chopra


ನಟಿ ಪ್ರಿಯಾಂಕಾ ಚೋಪ್ರಾ ತನ್ನ ಮಗಳು ಮಾಲ್ತಿ ಮೇರಿ ಜೋನಾಸ್ ಜತೆಗಿನ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟಿ ಸಂದರ್ಶನವೊಂದರಲ್ಲಿ ಮಗಳ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಮಗಳು ಸೆಟ್ನಲ್ಲಿ ಹೇಗೆ ಸಮಯ ಕಳೆಯುತ್ತಾಳೆ ಎಂಬುದನ್ನು ತಿಳಿಸಿದ್ದಾರೆ.

ʼʼಹೆಡ್ಸ್ ಆಫ್ ಸ್ಟೇಟ್ʼ ಸಿನಿಮಾ ಶೂಟ್ ಮಾಡುವಾಗ ನನ್ನ ಮಗಳು ಮಾಲ್ತಿ ನನ್ನ ಜತೆ ಇದ್ದಳು. ನಾವು ಫ್ರಾನ್ಸ್ನ ಪ್ರೊವಾನ್ಸ್ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಅವಳು ಅಜ್ಜಿ ಜತೆ ಬೇಕರಿಗೂ ತೆರಳಿ ಕ್ರೊಸಾಂಟ್ ತಂದು ತಿನ್ನುತ್ತಿದ್ದಳು. ಸೆಟ್ನಲ್ಲಿ ಅವಳು ಎಷ್ಟು ಖುಷಿ ಪಟ್ಟಳು ಅಂದರೆ ಅದು ಅವಳ ಮುದ್ದಾದ ಅನುಭವʼʼ ಎಂದು ಪ್ರಿಯಾಂಕಾ ವಿವರಿಸಿದ್ದಾರೆ.

ಪ್ರಿಯಾಂಕಾ ಹೇಳುವಂತೆ, ಮಾಲ್ತಿ ಸೆಟ್ನ ಕ್ರಾಫ್ಟ್ ಸರ್ವೀಸ್ಗೆ ತನ್ನದೇ ಆದ ಕ್ಯೂಟ್ ನಿಕ್ ನೇಮ್ ಕೊಟ್ಟಿದ್ದಾಳೆ. ಅವಳು ಅದನ್ನು ಕ್ರಾಫ್ಟಿ ಎಂದೇ ಕರೆಯುತ್ತಿದ್ದಳು. ಅದು ತುಂಬಾ ಕ್ಯೂಟ್ ಆಗಿತ್ತು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಈಗ ಮಾಲ್ತಿ ನ್ಯೂಯಾರ್ಕ್ನಲ್ಲಿಯೇ ಶಾಲೆಗೆ ಹೋಗಲು ಶುರು ಮಾಡಿದ್ದಾಳೆ ಎಂದು ಪ್ರಿಯಾಂಕಾ ಮಗಳ ಬಗ್ಗೆ ತಿಳಿಸಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ 2018ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದು ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರು ಮದುವೆಯಾಗಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದಿರುವ ಅವರು ಮಾಲ್ತಿ ಮೇರಿ ಜೋನಾಸ್ ಎಂಬ ಹೆಸರು ಇಟ್ಟಿದ್ದಾರೆ.

ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ನಟಿಸಿದ 'ಸಿಟಾಡೆಲ್' ಸೀರಿಸ್ನ ಪ್ರಿಯಾಂಕಾ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪ್ರಿಯಾಂಕಾ ‘ಹೆಡ್ಸ್ ಆಫ್ ಸ್ಟೇಟ್’ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಜಾನ್ ಸೀನಾ ಅಮೆರಿಕದ ಅಧ್ಯಕ್ಷನ ಪಾತ್ರದಲ್ಲಿ, ಇದ್ರಿಸ್ ಇಲ್ಬಾ ಬ್ರಿಟನ್ ಪ್ರಧಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಈ ಇಬ್ಬರನ್ನೂ ರಕ್ಷಿಸುವ ಎಂಐ6 ಏಜೆಂಟ್ನ ಪಾತ್ರ ಮಾಡುತ್ತಿದ್ದಾರೆ. ಸಿನಿಮಾವನ್ನು ರಷ್ಯನ್ ನಿರ್ದೇಶಕ ಇಲ್ಯಾ ನೈಶಲರ್ ನಿರ್ದೇಶನ ಮಾಡುತ್ತಿದ್ದಾರೆ. ದಿ ಸ್ಯಾಫರನ್ ಕಂಪನಿ, ಬಿಗ್ ಇಂಡಿ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.