ರೋಹಿತ್ ಶರ್ಮಾರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಗೆ 18 ವರ್ಷಗಳು!
Rohit Sharma is remembering his international debut: ಭಾರತ ತಂಡಕ್ಕೆ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಂತರ ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕರೆಂಬ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 2007ರ ಜೂನ್ 23 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, ಇದೀಗ 18 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ತಮಗೆ ಈ ಅವಕಾಶ ಸಿಕ್ಕಿದ್ದಕ್ಕೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಹಿಟ್ಮ್ಯಾನ್ ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆಗೆ 18 ವರ್ಷ

ನವದೆಹಲಿ: ಭಾರತ (India) ಹಾಗೂ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರ ಸಾಲಿನಲ್ಲಿ ನಿಂತಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit sharma) ಇದೀಗ ತಮ್ಮ 18 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಸಾರಥ್ಯದಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2007ರ ಜೂನ್ 23 ರಂದು ಪದಾರ್ಪಣೆ ಮಾಡಿದ್ದರು. ಐರ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ ಗೆಲುವು ಸಾಧಿಸಿದ್ದರಿಂದ ಹಿಟ್ಮ್ಯಾನ್ಗೆ ಬ್ಯಾಟ್ ಬೀಸುವ ಅವಕಾಶ ಸಿಕ್ಕಿರಲಿಲ್ಲ. ಆಗ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್ ರಂತಹ ಸರ್ವಶ್ರೇಷ್ಠ ಆಟಗಾರರು ಇದ್ದರು.
ತಮ್ಮ ಚೊಚ್ಚಲ ಪಂದ್ಯದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆಯದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮೂರು ದಿನಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಲಭಿಸಿತ್ತು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಅವರು 9 ಎಸೆತಗಳಿಂದ 8 ರನ್ ಗಳಿಸಿದ್ದರು.
IND vs ENG: ಕೆಎಲ್ ರಾಹುಲ್ ಭಾರತದ ಅತ್ಯುತ್ತಮ ಟಸ್ಟ್ ಬ್ಯಾಟ್ಸ್ಮನ್ ಎಂದ ಚೇತೇಶ್ವರ್ ಪೂಜಾರ!
ತುಂಬಾ ಕೃತಜ್ಞನಾಗಿದ್ದೇನೆ: ರೋಹಿತ್ ಶರ್ಮಾ
ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ನಂತರ ತಮ್ಮ ಕುಟುಂಬದೊಂದಿಗೆ ದುಬೈ ಪ್ರವಾಸದಲ್ಲಿರುವ ರೋಹಿತ್ ಶರ್ಮಾ, ಇಂದಿಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ 18 ವರ್ಷಗಳು ಪೂರ್ಣಗೊಂಡಿರುವ ಸಂತಸವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಾವು ಬಳಸುತ್ತಿದ್ದ ಹೆಲ್ಮೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ ಹಾಗೂ ಭಾರತದ ಪರ ಸುದೀರ್ಘ ಕಾಲದವರೆಗೆ ಆಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ವೈಭವ
ಏಕದಿನ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ರೋಹಿತ್ ಶರ್ಮಾ, ಈ ಸ್ವರೂಪದಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರು ಸಿಡಿಸಿದ್ದ 264 ರನ್ಗಳು, ಏಕದಿನ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಬಾರಿಸಿರುವ ಗರಿಷ್ಠ ಮೊತ್ತವಾಗಿದೆ. ಇದುವರೆಗೂ ಆಡಿರುವ 273 ಏಕದಿನ ಪಂದ್ಯಗಳಿಂದ 11,168 ರನ್ ಗಳಿಸಿದ್ದು, ಇದರಲ್ಲಿ 32 ಶತಕ ಹಾಗೂ 58 ಅರ್ಧಶತಕಗಳನ್ನು ಅವರು ಬಾರಿಸಿದ್ದಾರೆ.
IND vs ENG: 128 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಕನ್ನಡಿಗ ಪ್ರಸಿಧ್ ಕೃಷ್ಣ!
ಎರಡು ಐಸಿಸಿ ಟ್ರೋಫಿ ಗೆದ್ದ ನಾಯಕ
ವಿರಾಟ್ ಕೊಹ್ಲಿಯ ನಂತರ ಭಾರತ ತಂಡದ ಮೂರು ಮಾದರಿಯ ನಾಯಕನಾಗಿದ್ದ ರೋಹಿತ್ ಶರ್ಮಾ, ಎರಡು ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ನಂತರ ಭರತಕ್ಕೆ ಐಸಿಸಿ ಟ್ರೋಫಿ ಗೆದ್ದ ನಾಯಕ ಎಂಬ ದಾಖಲೆ ಬರೆದಿದ್ದಾರೆ. 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ಯಶಸ್ವಿಯಾಗಿ ತೆಗೆದುಕೊಂಡು ಹೋಗಿದ್ದ ಅವರು, ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ತಂಡವನ್ನು ಫೈನಲ್ ಹಂತ ತಲುಪಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡು ಮತ್ತೊಮ್ಮೆ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು.
ಆದರೆ ವೆಸ್ಟ್ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 6 ರನ್ಗಳಿಂದ ಮಣಿಸಿ ಭಾರತ ತಂಡಕ್ಕೆ ಎರಡನೇ ಚುಟಕು ವಿಶ್ವಕಪ್ ಗೆದ್ದುಕೊಟ್ಟಿದ್ದರು. ಈ ಪಂದ್ಯದ ನಂತರ ಟಿ20-ಐ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ರೋಹಿತ್, 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಎಂಎಸ್ ಧೋನಿ ಧೋನಿ ನಂತರ ಭಾರತಕ್ಕೆ ಎರಡು ಐಸಿಸಿ ಟ್ರೋಫಿ ಗೆದ್ದ ನಾಯಕ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ಭರವಸೆಯಲ್ಲಿ ಹಿಟ್ಮ್ಯಾನ್ ಇದ್ದಾರೆ.
Rohit Sharma's Instagram story. 🇮🇳 pic.twitter.com/4Pf7tGBIwy
— Mufaddal Vohra (@mufaddal_vohra) June 23, 2025
ಅಂತಾರಾಷ್ಟ್ರೀಯ ಕ್ರಿಕೆಟ್ನ ಅಂಕಿ - ಅಂಶಗಳು
ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ದಾಖಲೆ ಅದ್ಭುತವಾಗಿದೆ. ಅವರು 499 ಪಂದ್ಯಗಳಿಂದ 19700 ರನ್ ಗಳಿಸಿದ್ದಾರೆ. 4301 ಟೆಸ್ಟ್ ರನ್ ಗಳಿಸಿರುವ ರೋಹಿತ್, 12 ಶತಕ ಹಾಗೂ 18 ಅರ್ಧಶತಕ ಗಳಿಸಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ಸರ್ವಶ್ರೇಷ್ಠ ರನ್ ಸ್ಕೋರರ್ ಆಗಿರುವ ಹಿಟ್ಮ್ಯಾನ್, 140 ಕ್ಕೂ ಹೆಚ್ಚು ಸ್ಟ್ರೆಕ್ ರೇಟ್ನಲ್ಲಿ 159 ಪಂದ್ಯಗಳಿಂದ 4221 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 32 ಅರ್ಧಶತಕಗಳಿವೆ.