ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಇಂಗ್ಲೆಂಡ್‌ ವಿರುದ್ದ ಭಾರತ 3-2 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋಲಲಿದೆʼ: ಡೇಲ್‌ ಸ್ಟೇನ್‌ ಶಾಕಿಂಗ್‌ ಹೇಳಿಕೆ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು ಜೂನ್‌ 20 ರಂದು ಆರಂಭವಾಗಲಿದೆ. ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದೆ. ಈ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಇಂಗ್ಲೆಂಡ್‌ 3-2 ಅಂತರದಲ್ಲಿ ಸೋಲಿಸಲಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್‌ ಭವಿಷ್ಯ ನುಡಿದಿದ್ದಾರೆ.

ಭಾರತ ವಿರುದ್ಧ ಇಂಗ್ಲೆಂಡ್‌ ಟೆಸ್ಟ್‌ ಸರಣಿಯನ್ನು ಗೆಲ್ಲಲಿದೆ: ಸ್ಟೇನ್!

ಭಾರತ ಟೆಸ್ಟ್‌ ತಂಡದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಡೇಲ್‌ ಸ್ಟೇನ್‌.

Profile Ramesh Kote Jun 16, 2025 4:59 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು (IND vs ENG) ಜೂ 20 ರಂದು ಆರಂಭವಾಗುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿವೆ. ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಭಾರತ ತಂಡಕ್ಕೆ ಇಂಗ್ಲಿಷ್‌ ಕಂಡೀಷನ್ಸ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ. ಈ ಸರಣಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟ ಮಾಜಿ ಆಟಗಾರರು ತಮ್ಮದೇ ಆದ ಭವಿಷ್ಯವನ್ನು ನುಡಿದಿದ್ದಾರೆ. ಇದೀಗ ಈ ಸಾಲಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್‌ (Dale Steyn) ಸೇರ್ಪಡೆಯಾಗಿದ್ದಾರೆ. 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 2-3 ಅಂತರದಲ್ಲಿ ಸೋಲು ಅನುಭವಿಸಲಿದೆ ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಪ್ರವಾಸಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

"ಎಲ್ಲಾ ಪಂದ್ಯಗಳು ಕೂಡ ಅಂತಿಮ ಹಂತದವರೆಗೂ ಹೋಗಲಿವೆ, ಆದರೆ, ಈ ಎಲ್ಲಾ ಪಂದ್ಯಗಳಲ್ಲಿಯೂ ಫಲಿತಾಂಶ ಮೂಡಿ ಬರಲಿದೆ. ಭಾರತದ ವಿರುದ್ದ ಇಂಗ್ಲೆಂಡ್‌ ತಂಡ 3-2 ಅಂತರದಲ್ಲಿ ಗೆಲುವು ಪಡೆಯಲಿದೆ ಎಂಬುದು ನನ್ನ ಅನಿಸಿಕೆ. ಪ್ರತಿಯೊಂದು ಟೆಸ್ಟ್‌ ಪಂದ್ಯದಲ್ಲಿಯೂ ಫಲಿತಾಂಶ ಹೊರಬೀಳಲಿದೆ. ಈ ಸರಣಿಯ ಯಾವುದೇ ಪಂದ್ಯದಲ್ಲಿ ಒಂದು ಪ್ರಾಬಲ್ಯ ಸಾಧಿಸಿ ಗೆಲ್ಲುವುದಿಲ್ಲ, ಎಲ್ಲಾ ಐದು ಪಂದ್ಯಗಳು ಕೂಡ ಕೊನೆಯವರೆಗೂ ಬಂದು ಫಲಿತಾಂಶವನ್ನು ಕಾಣಲಿವೆ," ಎಂದು ಡೇಲ್‌ ಸ್ಟೇನ್‌ ಭವಿಷ್ಯ ನುಡಿದಿದ್ದಾರೆ.

ಆರ್‌ ಅಶ್ವಿನ್‌, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಇತ್ತೀಚೆಗೆ ಟೆಸ್ಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಲವು ಹೊಸ ಪ್ರತಿಭೆಗಳು ದೀರ್ಘಾವಧಿ ಸ್ವರೂಪಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಶುಭಮನ್‌ ಗಿಲ್‌ಗೆ ಟಸ್ಟ್‌ ನಾಯಕತ್ವವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಕೆಎಲ್‌ ರಾಹುಲ್‌, ರಿಷಭ್‌ ಪಂತ್‌, ಶುಭಮನ್‌ ಗಿಲ್‌, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ ಅವರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ.

IND vs ENG: ಮೊದಲ ಟೆಸ್ಟ್‌ ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್‌ಗೆ ಕೋಚಿಂಗ್ ಜವಾಬ್ದಾರಿ?

ಬ್ರೆಂಡನ್‌ ಮೆಕಲಮ್‌ ಅವರು ಕೋಚ್‌ ಆದ ಬಳಿಕ ಇಂಗ್ಲೆಂಡ್‌ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಅಂದಿನಿಂದ ತವರಿನಲ್ಲಿ ಆಡಿದ 20 ಟೆಸ್ಟ್‌ ಪಂದ್ಯಗಳಲ್ಲಿ ಆಂಗ್ಲರು 15 ರಲ್ಲಿ ಗೆಲುವು ಪಡೆದಿದ್ದರೆ, ನಾಲ್ಕರಲ್ಲಿ ಸೋಲು ಅನುಭವಿಸಿದೆ ಹಾಗೂ ಒಂದು ಡ್ರಾನಲ್ಲಿ ಅಂತ್ಯ ಕಂಡಿದೆ. ಈ ದಾಖಲೆಯನ್ನು ಗಮನಿಸಿದ ಡೇಲ್‌ ಸ್ಟೇನ್, ಈ ಟೆಸ್ಟ್‌ ಸರಣಿಯನ್ನು ಇಂಗ್ಲೆಂಡ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವನ್ನು ಶ್ಲಾಘಿಸಿದ ಡೇಲ್‌ ಸ್ಟೇನ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡದ ಬಗ್ಗೆಯೂ ಡೇಲ್‌ ಸ್ಟೇನ್‌ ಮಾತನಾಡಿದ್ದಾರೆ. "ಈ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಋತುವಿನ ಆರಂಭದಿಂದಲೂ, ದಕ್ಷಿಣ ಆಫ್ರಿಕಾ ತಂಡವು ಫೈನಲ್‌ಗೆ ತಲುಪಲು ನಿರ್ದಿಷ್ಟ ಸಂಖ್ಯೆಯ ಪಂದ್ಯಗಳನ್ನು ಗೆಲ್ಲಬೇಕು ಎಂದು ತಿಳಿದಿತ್ತು ಮತ್ತು ಅವರು ಅದನ್ನು ಪೂರ್ಣಗೊಳಿಸಿದರು. ಎದುರಾಳಿಗಳನ್ನು ಲೆಕ್ಕಿಸದೆ ಸತತ ಏಳು ಪಂದ್ಯಗಳನ್ನು ಗೆದ್ದರು," ಎಂದು ಸ್ಟೇನ್ ಶ್ಲಾಘಿಸಿದ್ದಾರೆ.

IND vs ENG: ಕೆಎಲ್‌ ರಾಹುಲ್‌ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!

"ನೀವು ಯಾರ ವಿರುದ್ಧ ಸ್ಪರ್ಧಿಸಿದರೂ ಪರವಾಗಿಲ್ಲ, ಟೆಸ್ಟ್ ಕ್ರಿಕೆಟ್ ಆಡಿದ ಯಾರಾದರೂ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಎಂದಿಗೂ ಸುಲಭವಲ್ಲ ಎಂದು ನಿಮಗೆ ಹೇಳುತ್ತಾರೆ. ಸತತ ಏಳು ಗೆಲುವುಗಳು, ಫೈನಲ್‌ನಲ್ಲಿ ಸ್ಥಾನ ಗಳಿಸುವುದು ಮತ್ತು ನಂತರ ಇಂದು ಗೆಲುವಿನ ಗೆರೆಯನ್ನು ದಾಟುವುದು - ಅದು ಸಂಪೂರ್ಣವಾಗಿ ದೊಡ್ಡದಾಗಿದೆ," ಎಂದು ಅವರು ತಿಳಿಸಿದ್ದಾರೆ.