ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈತ ಕಲಿಯುಗದ ಷಹಜಹಾನ್‌! ಪತ್ನಿಗಾಗಿ ಮತ್ತೊಂದು ತಾಜ್‌ಮಹಲನ್ನೇ ಕಟ್ಟಿಸಿದ ಭೂಪ

ಮಧ್ಯಪ್ರದೇಶದ ದಂಪತಿ ಆನಂದ್ ಪ್ರಕಾಶ್ ಚೌಕ್ಸೆ ಮತ್ತು ಆತನ ಪತ್ನಿ ತಮ್ಮ ಮನೆಯನ್ನು ಐತಿಹಾಸಿಕ ಸ್ಮಾರಕವಾದ ತಾಜ್‍ ಮಹಲ್‍ನ ಪ್ರತಿಕೃತಿಯಂತೆ ವಿನ್ಯಾಸಗೊಳಿಸಿದ್ದಾರೆ. ನಾಲ್ಕು ಬೆಡ್ ರೂಂಗಳಿರುವ ಈ ಮನೆ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಆಕರ್ಷಿಸಿದೆ.

ದೇಶದಲ್ಲಿ ಮತ್ತೊಂದು ತಾಜ್‌ಮಹಲ್‌ ನಿರ್ಮಾಣ!

Profile pavithra Jun 16, 2025 6:44 PM

ಭೋಪಾಲ್: ತಾಜ್‍ ಮಹಲ್(Taj Mahal) ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಾರೆ. ಆದರೆ ಮಧ್ಯಪ್ರದೇಶದ ದಂಪತಿ ತಮ್ಮ ಮನೆಯನ್ನು ಈ ಐತಿಹಾಸಿಕ ಸ್ಮಾರಕದ ಪ್ರತಿಕೃತಿಯಂತೆ ವಿನ್ಯಾಸಗೊಳಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಈ ಮನೆಯನ್ನು ನೋಡಿ ಫುಲ್‌ ಫಿದಾ ಆಗಿದ್ದಾರೆ.

ಆನಂದ್ ಪ್ರಕಾಶ್ ಚೌಕ್ಸೆ ಮತ್ತು ಇತನ ಪತ್ನಿ ಒಡೆತನದ ನಾಲ್ಕು ಬೆಡ್ ರೂಂಗಳಿರುವ ಮನೆ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿದೆ. ಈ ಮನೆಯನ್ನು ಮಕ್ರಾನಾ ಅಮೃತಶಿಲೆಯನ್ನು ಬಳಸಿ ತಯಾರಿಸಲಾಗಿದೆಯಂತೆ. ಇದು ಮೂಲ ಸ್ಮಾರಕದ ಮೂರನೇ ಒಂದು ಭಾಗದಷ್ಟು ಗಾತ್ರದಲ್ಲಿದೆ ಎಂದು ದಂಪತಿ ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಅದು ಅಲ್ಲದೇ ಈ ಮನೆ ಅಮೃತಶಿಲೆಯ ಗುಮ್ಮಟಗಳು ಮತ್ತು ಸೊಗಸಾದ ಕಮಾನುಗಳನ್ನು ಹೊಂದಿದೆ. ಈ ಮನೆಯನ್ನು ಪ್ರೀತಿಯ ಸಾಕ್ಷಿಯಾಗಿ ನಿರ್ಮಿಸಲಾಗಿದೆ ಎಂದು ಆನಂದ್ ಪ್ರಕಾಶ್ ಚೌಕ್ಸೆ ಹೇಳಿದ್ದಾನೆ.

ನೆಟ್ಟಿಗರು ಕೂಡ ಈ ಅದ್ಭುತ ವಾಸ್ತುಶಿಲ್ಪವನ್ನು ಹೋಲುವ ಮನೆಯನ್ನು ಫುಲ್‌ ಫಿದಾ ಆಗಿದ್ದಾರೆ. ಅನೇಕರು ಈ ಮನೆಯ ಸೌಂದರ್ಯವನ್ನು ಹೊಗಳಿ ಕಾಮೆಂಟ್‌ ಮಾಡಿದ್ದಾರೆ. "ತುಂಬಾ ಸುಂದರವಾಗಿದೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಈ ಜೋಡಿಯನ್ನು ಪ್ರೀತಿಸುತ್ತೇನೆ ಹಾಗೇ ಈ ಮನೆಯನ್ನು ಪ್ರೀತಿಸುತ್ತೇನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ದಂಪತಿಯನ್ನು ಹೊಗಳಿದ್ದಾರೆ. "ಅವರ ಮನೆಗಿಂತ ಅವರ ವಿನಮ್ರ ನಡವಳಿಕೆಯೇ ಹೆಚ್ಚು ಇಷ್ಟವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪತ್ನಿಗಾಗಿ ಚಹಾ ತಯಾರಿಸಿದ ವಿದೇಶಿ ಪತಿ; ಆದರ್ಶ ದಂಪತಿ ಎಂದ ನೆಟ್ಟಿಗರು

ತಾಜ್ ಮಹಲ್ ಭಾರತದ ಉತ್ತರ ಪ್ರದೇಶದ ಆಗ್ರಾದಲ್ಲಿದೆ. ಇದನ್ನು 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್‌ಳ ನೆನಪಿಗಾಗಿ ಈ ಮಹಲ್ ಅನ್ನು ನಿರ್ಮಿಸಿದ್ದಾನೆ. ಇದು ಈಗ ಜಗತ್ಪ್ರಸಿದ್ಧವಾಗಿದೆ.