ಅಲ್ ನಸರ್ ಕ್ಲಬ್‌ನೊಂದಿಗೆ ಮತ್ತೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ರೊನಾಲ್ಡೋ
ರೊನಾಲ್ಡೊ, ಕ್ಲಬ್ ಮಟ್ಟದ ವೃತ್ತಿ ಜೀವನದಲ್ಲಿ ದಾಖಲೆಯ 800ನೇ ಗೋಲು ಗಳಿಸಿದರಾದರೂ, ತಾವು ಪ್ರತಿನಿಧಿಸಿದ ಅಲ್-ನಸರ್ ತಂಡಕ್ಕೆ ಯಾವುದೇ ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಮುಂದಿನ ಎರಡು ವರ್ಷಗಳ ನೂತನ ಒಪ್ಪಂದಲ್ಲಾದರೂ ತಂಡಕ್ಕೆ ಪ್ರಶಸ್ತಿ ತಂದುಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ.


ರಿಯಾದ್: ಇತ್ತೀಚೆಗಷ್ಟೇ ಕ್ರಿಸ್ಟಿಯಾನೊ ರೊನಾಲ್ಡೋ (Cristiano Ronaldo)ಅವರು ಸೌದಿ ಅರೇಬಿಯಾದ ಅಲ್ ನಸರ್(Al-Nassr) ಕ್ಲಬ್‌ಗೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರೊನಾಲ್ಡೋ ಕ್ಲಬ್‌ನೊಂದಿಗೆ ಹೊಸ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರೆ. ಅವರಿಗೆ ವರ್ಷಕ್ಕೆ 2000 ಕೋಟಿ ರೂ., ಖಾಸಗಿ ಜೆಟ್ ಸೇರಿ ಐಷಾರಾಮಿ ಸೌಲಭ್ಯ ಸಿಗಲಿದೆ.
ಸೌದಿ ಪ್ರೊ ಲೀಗ್ ಮುಕ್ತಾಯವಾದ ಕೆಲವೇ ಗಂಟೆಗಳ ನಂತರ, "ಈ ಅಧ್ಯಾಯ ಮುಗಿದಿದೆ. ಕಥೆ? ಇನ್ನೂ ಬರೆಯಲಾಗುತ್ತಿದೆ. ಎಲ್ಲರಿಗೂ ಕೃತಜ್ಞತೆ"ಎಂಬ ಶೀರ್ಷಿಕೆಯೊಂದಿಗಿನ ಫೋಟೋವನ್ನು ರೊನಾಲ್ಡೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಅವರು ಅಲ್ ನಸರ್ ತಂಡ ತೊರೆಯುವುದು ಖಚಿತ ಎನ್ನಲಾಗಿತ್ತು. ಇದೀಗ ಮುಂದಿನ 2 ವರ್ಷಗಳ ಕಾಲ ಅಲ್ ನಸರ್ ಕ್ಲಬ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
Cristiano Ronaldo's reported new Al Nassr contract is BONKERS:
— talkSPORT (@talkSPORT) June 26, 2025
💰 £178M per year
✍️ £24.5M signing bonus (increases to £38M in second year)
🇸🇦 £8M bonus if Al Nassr win the Saudi Pro League
🏆 £6.5M bonus if Al Nassr win the Asian Champions League
👟 £4M bonus for winning the… pic.twitter.com/97fDratrCP
"ಕ್ರಿಸ್ಟಿಯಾನೋ ರೊನಾಲ್ಡೊ 2027 ರವರೆಗೆ ಅಲ್ ನಸರ್ ಕ್ಲಬ್ ನಲ್ಲಿ ಉಳಿಯುತ್ತಾರೆ" ಎಂದು ಕ್ಲಬ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ. ಟಾಕ್ಸ್‌ಪೋರ್ಟ್ ಪ್ರಕಾರ, ಅಲ್-ನಾಸರ್‌ನಲ್ಲಿ ಒಪ್ಪಂದ ವಿಸ್ತರಣೆಗೆ ಸಹಿ ಹಾಕಿದ ನಂತರ ರೊನಾಲ್ಡೊ ಮುಂದಿನ ಎರಡು ವರ್ಷಗಳಲ್ಲಿ ವರ್ಷಕ್ಕೆ 178 ಮಿಲಿಯನ್ ಪೌಂಡ್‌ಗಳನ್ನು (ಸುಮಾರು 400 ಮಿಲಿಯನ್ ಯುರೋಗಳು ಅಥವಾ INR 2000 ಕೋಟಿ) ಗಳಿಸಲಿದ್ದಾರೆ. 2022 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಅಲ್ ನಸರ್‌ಗೆ ಬಂದಿದ್ದ ಕ್ರಿಸ್ಟಿಯಾನೊ ರೊನಾಲ್ಡೋ ಅವರ ಒಪ್ಪಂದ ಈ ಬೇಸಿಗೆ ಮುಕ್ತಾಯಗೊಳ್ಳಲಿದೆ. ಇದಕ್ಕೂ ಮುನ್ನ ಮುಂದಿನ ಎರಡು ವರ್ಷಗಳ ಕಾಲ ಮತ್ತೆ ಅವರೊಂದಿಗೆ ಕ್ಲಬ್ ಒಪ್ಪಂದ ಮಾಡಿಕೊಂಡಿದೆ.
ಇತ್ತೀಚೆಗೆ ಫಿಫಾ ಅಧ್ಯಕ್ಷ ಜಿಯಾನ್ನಿ ಇನ್‌ಫ್ಯಾಂಟಿನೋ ಅವರು "ರೊನಾಲ್ಡೋ ಕೆಲವು ಕ್ಲಬ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಕ್ಲಬ್ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಬಹುದು," ಎಂದು ಹೇಳಿದ್ದರು. ರೊನಾಲ್ಡೊ, ಕ್ಲಬ್ ಮಟ್ಟದ ವೃತ್ತಿ ಜೀವನದಲ್ಲಿ ದಾಖಲೆಯ 800ನೇ ಗೋಲು ಗಳಿಸಿದರಾದರೂ, ತಾವು ಪ್ರತಿನಿಧಿಸಿದ ಅಲ್-ನಸರ್ ತಂಡಕ್ಕೆ ಯಾವುದೇ ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಮುಂದಿನ ಎರಡು ವರ್ಷಗಳ ನೂತನ ಒಪ್ಪಂದಲ್ಲಾದರೂ ತಂಡಕ್ಕೆ ಪ್ರಶಸ್ತಿ ತಂದುಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ.
ಒಪ್ಪಂದವು ಈ ಕೆಳಗಿನ ಸೌಲಭ್ಯವನ್ನೂ ಒಳಗೊಂಡಿದೆ
24.5 ಮಿಲಿಯನ್ ಸಹಿ ಬೋನಸ್ (ಎರಡನೇ ವರ್ಷದಲ್ಲಿ £38 ಮಿಲಿಯನ್‌ಗೆ ಹೆಚ್ಚಳ)
ಅಲ್ ನಾಸರ್ ಸೌದಿ ಪ್ರೊ ಲೀಗ್ ಗೆದ್ದರೆ 8 ಮಿಲಿಯನ್ ಬೋನಸ್
ಅಲ್ ನಾಸರ್ ಏಷ್ಯನ್ ಚಾಂಪಿಯನ್ಸ್ ಲೀಗ್ ಗೆದ್ದರೆ 5 ಮಿಲಿಯನ್ ಬೋನಸ್
ಗೋಲ್ಡನ್ ಬೂಟ್ ಗೆದ್ದಿದ್ದಕ್ಕಾಗಿ 4 ಮಿಲಿಯನ್ ಬೋನಸ್
ಅಲ್ ನಾಸರ್‌ನ 15% ಮಾಲೀಕತ್ವ (£33 ಮಿಲಿಯನ್ ಎಂದು ಅಂದಾಜಿಸಲಾಗಿದೆ)
ಪ್ರತಿ ಗೋಲಿಗೆ 80 ಸಾವಿರ ಬೋನಸ್ (ಎರಡನೇ ವರ್ಷದಲ್ಲಿ 20% ಹೆಚ್ಚಳ)
ಪ್ರತಿ ಅಸಿಸ್ಟ್‌ಗೆ 40 ಸಾವಿರ ಬೋನಸ್ (ಎರಡನೇ ವರ್ಷದಲ್ಲಿ 20% ಹೆಚ್ಚಳ)
60 ಮಿಲಿಯನ್ ಮೌಲ್ಯದ ಪ್ರಾಯೋಜಕತ್ವದ ಒಪ್ಪಂದಗಳನ್ನು ಭರವಸೆ ನೀಡಲಾಗಿದೆ.
4 ಮಿಲಿಯನ್ ಮೌಲ್ಯದ ಖಾಸಗಿ ಜೆಟ್ ವೆಚ್ಚಗಳನ್ನು ಅಲ್-ನಾಸರ್ ಒಳಗೊಂಡಿದೆ.