ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದುವೆಗೆ ಉಡುಗೊರೆ ತರಬೇಡಿ ಎಂದು ಹೇಳಿದ ಅಮೆಜಾನ್ ಸಂಸ್ಥಾಪಕ ಮಾಡಿದ್ದೇನು?

ಶೀಘ್ರದಲ್ಲೇ ವಿವಾಹವಾಗಲಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ತಮಗೆ ಯಾವುದೇ ಉಡುಗೊರೆಗಳನ್ನು ನೀಡಬೇಡಿ ಎಂದಿದ್ದಾರೆ. ಬದಲಾಗಿ ಅತಿಥಿಗಳ ಪರವಾಗಿ 3 ಸ್ಥಳೀಯ ಸಂಸ್ಥೆಗಳಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ.

ಮದ್ವೆಯ ಗಿಫ್ಟ್‌ಗೆ ನೋ ಎಂದ ಅಮೆಜಾನ್‌ ಸಂಸ್ಥಾಪಕ! ಕಾರಣವೇನು?

Profile pavithra Jun 27, 2025 3:25 PM

ವೆನಿಸ್‌ನಲ್ಲಿ ಮದುವೆಯಾಗಲು ಸಜ್ಜಾಗಿರುವ ಅಮೆಜಾನ್ (Amazon) ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವಿಶೇಷ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ತಮ್ಮ ಮದುವೆಗೆ ಬರುವ ಅತಿಥಿಗಳ ಬಳಿ ಯಾವುದೇ ಗಿಫ್ಟ್‌ ತರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಇನ್ನು ವಿಶೇಷ ಏನೆಂದರೆ, ಬೆಜೋಸ್ ಮತ್ತು ಸ್ಯಾಂಚೆಜ್ ತಮ್ಮ ಅತಿಥಿಗಳ ಪರವಾಗಿ ಮೂರು ಸ್ಥಳೀಯ ಸಂಸ್ಥೆಗಳಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಈ ಕೊಡುಗೆಗಳು ಯುನೆಸ್ಕೋ ವೆನಿಸ್ ಕಚೇರಿ, CORILA ಮತ್ತು ವೆನಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ಹೋಗಲಿವೆ ಎಂದಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಮದುವೆ ಆಚರಣೆಗೆ ಮುಂಚಿತವಾಗಿ ಬೆಜೋಸ್ ಮತ್ತು ಸ್ಯಾಂಚೆಜ್ ದಂಪತಿ ಸ್ಪಷ್ಟ ಸಂದೇಶದೊಂದಿಗೆ ಆಮಂತ್ರಣಗಳನ್ನು ಕಳುಹಿಸಿದ್ದು, ಅದರಲ್ಲಿ ದಯವಿಟ್ಟು, ಉಡುಗೊರೆಗಳನ್ನು ನೀಡಬೇಡಿ ಎಂದಿದ್ದಾರೆ. ಹಾಗೇ ಅತಿಥಿಗಳ ಪರವಾಗಿ ಯುನೆಸ್ಕೋ ವೆನಿಸ್ ಕಚೇರಿ, CORILA ಮತ್ತು ವೆನಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ನಾವು ದೇಣಿಗೆಗಳನ್ನು ನೀಡುತ್ತೇವೆ ಎಂದು ಅವರು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಿದ್ದಾರೆ.

ಈ ಜೋಡಿಯ ಮದುವೆಗೆ ವೆನಿಸ್‌ನ ಐತಿಹಾಸಿಕ ಪ್ರದೇಶಗಳಲ್ಲಿ ಪ್ರತಿಭಟನಾ ಫಲಕಗಳನ್ನು ಹಾಕಲಾಗಿದೆ. ಈಗಾಗಲೇ ಅತಿಯಾದ ಪ್ರವಾಸೋದ್ಯಮದಿಂದ ಬಳಲುತ್ತಿರುವ ನಗರದಲ್ಲಿ ಸಂಚಾರ ಅಡಚಣೆಗಳು, ಇತರ ತೊಂದರೆಗಳ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ವಿವಾಹದ ನಂತರದ ಆಚರಣೆಗಳಿಗೆ ಈ ಜೋಡಿ ಕ್ಯಾನರೆಜಿಯೊ ಅನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ವರದಿಗಳ ಪ್ರಕಾರ, ಪ್ರತಿಭಟನೆಗಳ ಭಯದಿಂದಾಗಿ ಈಗ ಕ್ಯಾಸ್ಟೆಲ್ಲೊ ಜಿಲ್ಲೆಯ ಆರ್ಸೆನಲ್‌ಗೆ ಸ್ಥಳಾಂತರಿಸಲಾಗಿದೆ.ಈ ದಂಪತಿ ಸಾಧ್ಯವಾದಲ್ಲೆಲ್ಲಾ ಸ್ಥಳೀಯ ಮಾರಾಟಗಾರರನ್ನು ಬೆಂಬಲಿಸುತ್ತಿದ್ದಾರೆ. ಮದುವೆಗೆ ಬೇಕಾದ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಸುಮಾರು ಶೇ. 80ರಷ್ಟನ್ನು ಮುರಾನೊ ಗಾಜಿನ ಸಾಮಗ್ರಿ ತಯಾರಕ ಲಗುನಾ ಬಿ ಮತ್ತು ನಗರದ ಅತ್ಯಂತ ಹಳೆಯ ಪೇಸ್ಟ್ರಿ ತಯಾರಕ ರೋಸಾ ಸಾಲ್ವಾದವರಿಂದ ತೆಗೆದುಕೊಳ್ಳಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ಮಹಿಳೆ; ರೈಲು ಸೇವೆಯಲ್ಲಿ ವ್ಯತ್ಯಯ

ಬೆಜೋಸ್ ಮತ್ತು ಸ್ಯಾಂಚೆಜ್ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸ್ಯಾಂಚೆಜ್ ಅವರಿಗೆ ಈಗಾಗಲೇ ಎರಡು ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಬೆಜೋಸ್‌ ಕೂಡ ತಮ್ಮ ಮೊದಲನೇ ಹೆಂಡತಿಯಿಂದ ದೂರವಾಗಿದ್ದು ಇವರಿಗೆ ನಾಲ್ಕು ಜನ ಮಕ್ಕಳಿದ್ದಾರೆ.