Umrao Jaan Re-Release: 'ಉಮ್ರಾವ್ ಜಾನ್' ರಿ-ರಿಲೀಸ್ ಪ್ರೀಮಿಯರ್ ಶೋಗೆ ಬಾಲಿವುಡ್ ನಟ- ನಟಿಯರ ಗ್ರ್ಯಾಂಡ್ ಎಂಟ್ರಿ; ಯಾರೆಲ್ಲ ಬಂದಿದ್ದರು?
ಬಾಲಿವುಡ್ನ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ 'ಉಮ್ರಾವ್ ಜಾನ್' ಜೂನ್ 27ರಂದು ಥಿಯೇಟರ್ಗಳಲ್ಲಿ ಮರು ಬಿಡುಗಡೆಯಾಗಿದೆ. ಇದು ನಟಿ ರೇಖಾ ಅಭಿನಯದ ಚಿತ್ರವಾಗಿದ್ದು ಫಾರೂಕ್ ಶೇಖ್, ರಾಜ್ ಬಬ್ಬರ್ ಮತ್ತು ನಸೀರುದ್ದೀನ್ ಷಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮುನ್ನ ಮುಂಬೈಯಲ್ಲಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ನಟಿ ರೇಖಾ ಸೇರಿದಂತೆ ಆಲಿಯಾ ಭಟ್, ಟಬು, ಜಾಹ್ನವಿ ಕಪೂರ್, ಹೇಮಾ ಮಾಲಿನಿ ಮತ್ತಿತರ ಬಾಲಿವುಡ್ ಕಲಾವಿದರು ಭಾಗವಹಿಸಿದ್ದರು.

Umrao Jaan Screening


ಇತ್ತೀಚೆಗೆ ಮುಂಬೈನಲ್ಲಿ ನಡೆದ 'ಉಮ್ರಾವ್ ಜಾನ್' ಚಿತ್ರದ ಪ್ರದರ್ಶನಕ್ಕೆ ನಟಿ ಆಲಿಯಾ ಭಟ್ ವಿಭಿನ್ನ ಲುಕ್ ಮೂಲಕ ಎಂಟ್ರಿ ನೀಡಿದರು. ಇವರ ಲುಕ್ ನೋಡಿದ ನೆಟ್ಟಿಗರು 80ರ ದಶಕದ 'ಸಿಲ್ಸಿಲಾ' ಚಿತ್ರದ 'ಚಾಂದಿನಿ'ಯನ್ನು ನೆನಪಿಸಿಕೊಂಡರು. ಆಲಿಯಾ ಗುಲಾಬಿ ಸೀರೆ ಜತೆಗೆ ಗರಿಗಳ ಕಿವಿಯೋಲೆಗಳನ್ನು ಧರಿಸಿದ್ದರು. ಇದು ಅವರ ಲುಕ್ಗೆ ಇನ್ನಷ್ಟು ಮೆರುಗು ನೀಡಿತು.

ನಟಿ ರೇಖಾ ಕ್ಲಾಸಿಕ್ ಲುಕ್ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಕ್ರೀಮ್ ಕಲರ್ ಸಲ್ವಾರ್ ಧರಿಸಿ ಗಮನ ಸೆಳೆದರು. ಇವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ತಬು ಕೂಡ ಈ ಕಾರ್ಯಕ್ರಮಕ್ಕೆ ಸ್ಟೈಲ್ ಲುಕ್ ಮೂಲಕ ಎಂಟ್ರಿ ನೀಡಿದ್ದಾರೆ. ಅವರು ಕೆಂಪು ಶರಾರಾ ಸೆಟ್ನಲ್ಲಿ ಕಂಗೊಳಿಸಿದ್ದು, ಈ ಡ್ರೆಸ್ಗೆ ಹೊಂದಿಕೊಳ್ಳುವ ಆಭರಣ ಧರಿಸಿ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ.

ನಟಿ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಕೂಡ ಸ್ಕ್ರೀನಿಂಗ್ಗೆ ಆಗಮಿಸಿ ಗಮನ ಸೆಳೆದರು. ಅವರು ಬಿಳಿ ಕುರ್ತಾ ಧರಿಸಿದ್ದು, ಈ ಡ್ರೆಸ್ಗೆ ಹೊಂದಿಕೆಯಾಗುವ ಆಭರಣ ಧರಿಸಿದ್ದರು.

ಹಾಗೆಯೇ ಖುಷಿ ಕಪೂರ್ ಕೂಡ ಮಾಡರ್ನ್ ಡ್ರೆಸ್ ಮೂಲಕ ಎಂಟ್ರಿ ನೀಡಿದರು. ಅವರ ಸಿಂಪಲ್ ಮೇಕಪ್ ಹಾಗೂ ಡಾರ್ಕ್ ಲಿಪ್ಸ್ ಸ್ಟಿಕ್ ಫರ್ಪೆಕ್ಟ್ ಲುಕ್ ನೀಡಿತ್ತು.

ವಯಸಾದರೂ ಸೌಂದರ್ಯದಿಂದಲೇ ಎಲ್ಲರನ್ನೂ ಆಕರ್ಷಿಸುವ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಸಿನಿಮಾ ಇವೆಂಟ್ಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಈ ಬಾರಿ ಅವರು ಮೆರೂನ್ ಮತ್ತು ಚಿನ್ನದ ಬಣ್ಣದ ಕಾಂಜೀವರಂ ಸೀರೆಯಲ್ಲಿ ಕಂಗೊಳಿಸಿದರು. ನಟಿ ಈ ಸೀರೆಗೆ ಹೊಂದಿಕೊಳ್ಳುವ ಇಯರಿಂಗ್ಸ್ ಮತ್ತು ಗ್ರ್ಯಾಂಡ್ ಲುಕ್ನ ನೆಕ್ಲೆಸ್ ಧರಿಸಿದ್ದರು.

ನಟ ಆಮೀರ್ ಖಾನ್ ಸಹ ತಮ್ಮ ಕುಟುಂಬದೊಂದಿಗೆ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬ್ಲಾಕ್ ಕಲರ್ ಕುರ್ತಾ ಸೆಟ್ ಧರಿಸಿ ಪೋಸ್ ನೀಡಿದರು.

ಅನಿಲ್ ಕಪೂರ್ ಕೂಡ ಸ್ಕ್ರೀನಿಂಗ್ನಲ್ಲಿ ಡಿಫರೆಂಟ್ ಲುಕ್ನಿಂದ ಹೈ ಲೈಟ್ ಆದರು. ವೈಟ್ ಕಲರ್ ಕುರ್ತಾ, ಶೂ ಧರಿಸಿ ಸ್ಟೈಲಿಶ್ ಆಗಿ ಕಂಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೂಡ ಉಪಸ್ಥಿತರಿದ್ದರು. ಬ್ಲ್ಯಾಕ್ ಸೆಟ್ ಕೋಟ್ ಧರಿಸಿ ವೇದಿಕೆ ಮೇಲೆ ಮಾಡರ್ನ್ ಲುಕ್ನಿಂದ ಕಂಗೊಳಿಸಿದರು. ಹಿರಿಯ ಗಾಯಕಿ ಆಶಾ ಭೋಸ್ಲೆ, ಮಹಿಮಾ ಚೌಧರಿ ಮತ್ತು ಅವರ ಮಗಳು ಆರ್ಯನಾ, ನೂಶ್ರತ್ ಭರೂಚಾ, ಮಿರ್ರಾ ರಜಪೂತ್ ಕಪೂರ್, ಶ್ಯಾಮ್ ಕೌಶಲ್ ಮತ್ತಿತರರು ಭಾಗಿಯಾಗಿದ್ದರು.