Viral News: ದೊಡ್ಡದಾದ ತುಟಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಮಹಿಳೆ; ಹೇಗಿದೆ ಗೊತ್ತಾ ಈಗ ಆಕೆಯ ತುಟಿಯ ಲುಕ್?
ಸ್ಪೇನ್‌ನ ಮಜೋರ್ಕಾದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿಯೆನ್ನಾ ವುರ್ಸ್ಟೆಲ್ ವಿಶ್ವದಲ್ಲೇ ಅತಿ ದೊಡ್ಡ ತುಟಿಗಳ ಹೊಂದುವ ಮೂಲಕ ಗಮನ ಸೆಳೆದಿದ್ದಾಳೆ. ಜತೆಗೆ ಈಕೆ ಸೋಶಿಯಲ್ ಮಿಡಿಯಾಗಳಲ್ಲಿ ಆಗಾಗ್ಗೆ ಅಪಹಾಸ್ಯಕ್ಕೊಳಗಾಗುತ್ತಿದ್ದಳು. ಆದರೆ ಈ ತುಟಿಗಳ ಸರ್ಜರಿಗಾಗಿ ಅವಳು ಸುಮಾರು $160,000 (ಸುಮಾರು 1.3 ಕೋಟಿ ರೂ.) ಖರ್ಚು ಮಾಡಿದ್ದಾಳೆ ಎನ್ನುವ ವಿಚಾರ ಇದು ಬಯಲಾಗಿದೆ.


ಮ್ಯಾಡ್ರಿಡ್: ಸುಂದರವಾದ ತುಟಿಯೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಈಗಂತೂ ದೊಡ್ಡ ತುಟಿ ಟ್ರೆಂಡ್! ಕೆಲವರು ದಪ್ಪಗಿನ ತುಟಿಗಾಗಿ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಇತ್ತೀಚೆಗೆ ಯುವತಿಯೊಬ್ಬಳು ದೊಡ್ಡ ತುಟಿಗಾಗಿ ಹಸಿಮೆಣಸಿನ ಕಾಯಿಯನ್ನು ಕತ್ತರಿಸಿಕೊಂಡು ಅದನ್ನು ತುಟಿಗೆ ಉಜ್ಜಿಕೊಂಡ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿತ್ತು. ಇದೀಗ ಸ್ಪೇನ್‌ನ ಮಜೋರ್ಕಾದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿಯೆನ್ನಾ ವುರ್ಸ್ಟೆಲ್ ತನ್ನ ತುಟಿಯ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾಳೆ. ಅದು ಅಲ್ಲದೇ, ಆಕೆ ಈ ದಪ್ಪಗಿನ ತುಟಿಗಾಗಿ ಸಾಕಷ್ಟು ಹಣವನ್ನು ಕೂಡ ಸುರಿದಿದ್ದಾಳೆ.
ಕಾಸ್ಮೆಟಿಕ್ ಸರ್ಜರಿಗಾಗಿ ಆಕೆ ಮಾಡಿದ ಖರ್ಚು
ದೊಡ್ಡ ತುಟಿಗಳನ್ನು ಹೊಂದುವ ಅವಳ ಬಯಕೆ ಇಂದು ನಿನ್ನೆಯದಲ್ಲ! ಆಕೆ ತನ್ನ 18ನೇ ವಯಸ್ಸಿನಲ್ಲಿ ಕಾಸ್ಮೆಟಿಕ್ ಚಿಕಿತ್ಸೆಗೆ ಒಳಗಾಗಿದ್ದಳು. ಅಂದಿನಿಂದ ಸೌಂದರ್ಯ ವೃದ್ಧಿಗಾಗಿ ವಿಯೆನ್ನಾ ಸುಮಾರು $160,000 (ಸುಮಾರು 1.3 ಕೋಟಿ ರೂ.) ಖರ್ಚು ಮಾಡಿದ್ದಾಳೆ ಎಂದು ವರದಿಯಾಗಿದೆ. ಇದರಲ್ಲಿ ಸುಮಾರು $37,000 (ಸುಮಾರು 39 ಲಕ್ಷ ರೂ.) ಕೇವಲ ತುಟಿ ಶಸ್ತ್ರಚಿಕಿತ್ಸೆಗಳು ಮತ್ತು ಫಿಲ್ಲರ್‌ಗಳಿಗಾಗಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಉಳಿದ ಹಣವನ್ನು ಅವಳ ದೇಹದ ಇತರ ಭಾಗಗಳ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಖರ್ಚು ಮಾಡಿದ್ದಾಳೆ. ಇನ್ನು ಅವಳು ಲಿಪ್ ಫಿಲ್ಲರ್ ಚಿಕಿತ್ಸೆಗಳಿಗಾಗಿ ವಾರಕ್ಕೊಮ್ಮೆ ಮೆಜೋರ್ಕಾದಿಂದ ಫ್ರಾಂಕ್‌ಫರ್ಟ್‌ಗೆ ಪ್ರಯಾಣಿಸುತ್ತಾಳೆ.
ತುಟಿಯ ವಿಚಾರಕ್ಕೆ ಆಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಅವಳ ಲುಕ್ ನೋಡಿ ತಮಾಷೆ ಮಾಡಿದ್ದಾರೆ. "ನೋಡುವುದಕ್ಕೆ ಭಯಾನಕವಾಗಿದ್ದಾಳೆ" ಎಂದು ನೆಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ.
ಅದು ಅಲ್ಲದೇ ವಿಯೆನ್ನಾ ಕೂಡ ಈ ದಪ್ಪ ತುಟಿಗಳಿಂದ ಆದ ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಇದರಿಂದೆ ತಿನ್ನುವುದು, ಮಾತನಾಡುವುದು ಮತ್ತು ಉಸಿರಾಡುವುದು ಕಷ್ಟವಾಗುತ್ತದೆ ಎಂದು ಒಪ್ಪಿಕೊಳ್ಳುತ್ತಾಳೆ. ಆದರೆ ಈ ಬಗ್ಗೆ ಅವಳಿಗೆ ಯಾವುದೇ ಬೇಸರವಿಲ್ಲ ಎಂದೂ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ಹಾಸ್ಟೆಲ್ ಕಾರಿಡಾರ್‌ನಲ್ಲಿ ಹರಿದಾಡಿದ ಹಾವು; ಬೆಚ್ಚಿ ಬೀಳಿಸುವ ವಿಡಿಯೊ ಇಲ್ಲಿದೆ
ತುಟಿಯ ಅಂದಕ್ಕಾಗಿ 52 ಲಕ್ಷ ರೂ. ಸುರಿದ ಫೆಟಿಶ್ ಬಾರ್ಬಿ
ಆಸ್ಟಿಯಾ ನಿವಾಸಿ ಫೆಟಿಶ್ ಬಾರ್ಬಿ ಎಂಬ ಮಹಿಳೆ ತನ್ನ ತುಟಿಯ ಅಂದ ಹೆಚ್ಚಿಸಿಕೊಳ್ಳುವುದಕ್ಕಾಗಿ 52 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಹೌದು ಈಕೆಗೆ ದಪ್ಪಗಿನ ತುಟಿಯೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಲಿಪ್ ಫಿಲ್ಲರ್‌ಗಳ ಸಹಾಯದಿಂದ ತನ್ನ ತುಟಿಗಳನ್ನು ಮೂರುಪಟ್ಟು ದೊಡ್ಡದಾಗಿ ಮತ್ತು ದಪ್ಪವಾಗಿಸಿದ್ದಾಳೆ. ತುಟಿಯ ಅಂದ ಕಾಪಾಡಿಕೊಳ್ಳಲು ಆಕೆ ಮೂರು ತಿಂಗಳಿಗೊಮ್ಮೆ ಫಿಲ್ಲರ್‌ಗಳನ್ನು ತೆಗೆದುಕೊಳ್ಳುತ್ತಾಳೆ. ಈ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕಾಪಟ್ಟೆ ವೈರಲ್ ಆಗಿತ್ತು.