ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಮಾನದಲ್ಲಿ ಆಲೂಗಡ್ಡೇಗೇನು ಕೆಲಸ ?

ಆಲೂಗಡ್ಡೆಗಳಲ್ಲಿ ಶೇ.80ರಷ್ಟು ನೀರಿನ ಅಂಶವಿದೆ. ಈ ನೀರಿನ ಅಂಶ ಮತ್ತು ಅವುಗಳಲ್ಲಿ ಇರುವ ಇತರ ರಾಸಾಯನಿಕಗಳ ಬಳಕೆಯಿಂದ ಅವು ಮಾನವ ದೇಹದಂತೆಯೇ ರೇಡಿಯೋ ತರಂಗಗಳನ್ನು ಗ್ರಹಿಸು ತ್ತವೆ ಅಥವಾ ಪ್ರತಿಬಿಂಬಿಸುತ್ತವೆ. ವೈ-ಫೈ ತರಂಗಗಳು ಹೆಚ್ಚಾಗಿ 2.4 GHz ಮತ್ತು 5 GHz ವಾಯು ಅಲೆಯನ್ನು ಬಳಸುತ್ತವೆ.

ವಿಮಾನದಲ್ಲಿ ಆಲೂಗಡ್ಡೇಗೇನು ಕೆಲಸ ?

ಸಂಪಾದಕರ ಸದ್ಯಶೋಧನೆ

ವೈಮಾನಿಕ ಕ್ಷೇತ್ರದಲ್ಲಿ ಭದ್ರತೆ, ಆರಾಮ ಮತ್ತು ತಂತ್ರಜ್ಞಾನ ಗಮನಾರ್ಹ ಅಂಶಗಳೆಂಬುದರಲ್ಲಿ ಎರಡು ಮಾತಿಲ್ಲ. ಇದರ ಜತೆಗೆ, ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸಲು ವಿಮಾನಗಳಲ್ಲಿ ನೀಡುವ ವೈ-ಫೈ ಸೇವೆಯೂ ಅಷ್ಟೇ ಮಹತ್ವದ್ದು. ಆದರೆ ಈ ವೈ-ಫೈ ಸಂಪರ್ಕವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಲು ಬೋಯಿಂಗ್ ಕಂಪನಿಯ ಎಂಜಿನಿಯರ್‌ಗಳು 2012ರಲ್ಲಿ ಕೈಗೊಂಡ ಪ್ರಯೋಗವೊಂದು ವೈಮಾನಿಕ ಇತಿಹಾಸದ ವಿಚಿತ್ರ ಮತ್ತು ವಿಶಿಷ್ಟವಾಗಿದೆ.

ಇಡೀ ವಿಮಾನದಲ್ಲಿ ಸಾವಿರಾರು ಕಿಲೋ ಆಲೂಗಡ್ಡೆಯನ್ನು ಚೀಲದಲ್ಲಿ ತುಂಬಿ, ಅವೆಲ್ಲವು ಗಳನ್ನು ಪ್ರಯಾಣಿಕರ ಸೀಟಿಗೆ ಕಟ್ಟಿ ವೈ-ಫೈ ಸಿಗ್ನಲ್ ಪರೀಕ್ಷೆ ನಡೆಸಿದ್ದು ವಿಚಿತ್ರವಾದರೂ ಸತ್ಯ. ಈ ಅನನ್ಯ ಪ್ರಯೋಗದ ಹಿನ್ನೆಲೆಯನ್ನು ವಿವರಿಸಬೇಕು. 2010ರ ದಶಕದ ಆರಂಭದಲ್ಲಿ ವಿಮಾನ ಗಳಲ್ಲಿ ವೈ-ಫೈ ವ್ಯವಸ್ಥೆಯ ಅಳವಡಿಕೆಯನ್ನು ಹಲವು ವಿಮಾನಯಾನ ಕಂಪನಿಗಳು ಆರಂಭಿಸಿ ದವು.

ಆದರೆ ಬೋಯಿಂಗ್‌ಗೆ ಸಮಸ್ಯೆಯೊಂದು ಎದುರಾಯಿತು. ವೈ-ಫೈ ಸಿಗ್ನಲ್‌ಗಳ ವಿತರಣೆಯು ಹತ್ತಿರ ದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಂದ ಪ್ರಭಾವಿತವಾಗಿ ಸಂಪರ್ಕ ಸಮರ್ಪಕವಾಗಿ ಆಗುತ್ತಿರ ಲಿಲ್ಲ. ಬೋಯಿಂಗ್‌ನ ಎಂಜಿನಿಯರ್‌ಗಳು ಪ್ರಯಾಣಿಕರ ದೇಹಗಳು, ಬಟ್ಟೆಗಳು ಮತ್ತು ಅವರ ಚಲನೆ ವೈ-ಫೈ ಸಿಗ್ನಲ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ

ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಗಂಟೆಗಟ್ಟಲೆ ವಿಮಾನದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿ ಪ್ರಯೋಗ ಮಾಡುವುದು ತುಸು ಕಷ್ಟಸಾಧ್ಯವೆಂದು ಅನಿಸಿತು. ಈ ಸಂದರ್ಭದಲ್ಲಿ ಬೋಯಿಂಗ್ ತಂಡವು ಯಾರೂ ನಿರೀಕ್ಷಿಸದ ಪರಿಹಾರವನ್ನು ಕಂಡುಹಿಡಿಯಿತು. ಪ್ರಯಾಣಿಕರ ಬದಲು ವಿಮಾನದಲ್ಲಿ ಆಲೂಗಡ್ಡೆಯನ್ನು ತುಂಬಿ ಪ್ರಯೋಗ ಮಾಡಲು ನಿರ್ಧರಿಸಿತು.

ಆಲೂಗಡ್ಡೆಗಳಲ್ಲಿ ಶೇ.80ರಷ್ಟು ನೀರಿನ ಅಂಶವಿದೆ. ಈ ನೀರಿನ ಅಂಶ ಮತ್ತು ಅವುಗಳಲ್ಲಿ ಇರುವ ಇತರ ರಾಸಾಯನಿಕಗಳ ಬಳಕೆಯಿಂದ ಅವು ಮಾನವ ದೇಹದಂತೆಯೇ ರೇಡಿಯೋ ತರಂಗಗಳನ್ನು ಗ್ರಹಿಸುತ್ತವೆ ಅಥವಾ ಪ್ರತಿಬಿಂಬಿಸುತ್ತವೆ. ವೈ-ಫೈ ತರಂಗಗಳು ಹೆಚ್ಚಾಗಿ 2.4 GHz ಮತ್ತು 5 GHz ವಾಯು ಅಲೆಯನ್ನು ಬಳಸುತ್ತವೆ. ಅಂದರೆ, ಆಲೂಗಡ್ಡೆಗಳು ಸಿಗ್ನಲ್‌ಗಳ ಮಾರ್ಗದಲ್ಲಿ ಮಾನವ ದೇಹದಂತೆಯೇ ವರ್ತಿಸುತ್ತವೆ. ಇದು ಬೋಯಿಂಗ್ ಎಂಜಿನಿಯರ್‌ಗಳಿಗೆ ತಮ್ಮ ವೈ-ಫೈ ಪರಿಕರಗಳನ್ನು ಯಾವುದೇ ತೊಂದರೆಯಿಲ್ಲದೆ ಪರೀಕ್ಷಿಸಲು ಒಂದು ಪರಿಪೂರ್ಣ ಪರ್ಯಾಯವಾಗಿ ಪರಿಣಮಿಸಿತು. ಬೋಯಿಂಗ್ ತನ್ನ777 ವಿಮಾನ ಮಾದರಿಯನ್ನು ನಿರ್ದಿಷ್ಟವಾಗಿ ಆರಿಸಿಕೊಂಡಿ ತು. ಈ ವಿಮಾನದಲ್ಲಿ ಪ್ರಯಾಣಿಕರ ಆಸನಗಳನ್ನು ತುಂಬಲು ಸಾವಿರಾರು ಕಿಲೋ ಆಲೂಗಡ್ಡೆ ಗಳನ್ನು ವಿಶಿಷ್ಟ ಶಾಕ್ ಪ್ರೂಫ್‌ ಬ್ಯಾಗು ಗಳಲ್ಲಿ ಇಡಲಾಯಿತು.

ಬೋಯಿಂಗ್ ತನ್ನ ಈ ಪ್ರಯೋಗ ಶ್ರೇಣಿಗೆ Project SPUDS ಎಂದು ಹೆಸರಿಟ್ಟಿತು (SPUDS ಪೂರ್ಣ ರೂಪ Synthetic Personnel Using Dielectric Substitution). ಪ್ರತಿಯೊಂದು ಕುರ್ಚಿಯಲ್ಲಿ ಒಂದು ಆಲೂಗಡ್ಡೆ ಮೂಟೆಯನ್ನು ಇರಿಸಿ, ಇಡೀ ವಿಮಾನವನ್ನು ‘ಕೃತಕ ಪ್ರಯಾಣಿಕ’ರಿಂದ ತುಂಬಲಾ ಯಿತು.

ನಂತರ, ವೈ-ಫೈ ರೌಟರ್‌ಗಳನ್ನು ಹಲವು ಸ್ಥಳಗಳಲ್ಲಿ ಇರಿಸಿ ವಿವಿಧ ಸಿಗ್ನಲ್ ಬಲದ ಪ್ರಮಾಣಗಳ ಪರೀಕ್ಷೆ ನಡೆಸಲಾಯಿತು. ಈ ಪ್ರಯೋಗದ ಮುಖ್ಯ ಉದ್ದೇಶ- ವೈ-ಫೈ ಸಿಗ್ನಲ್ ಪ್ಲಾಟ್ ಫಾರ್ಮ್ ಹೇಗೆ ಹರಡುತ್ತದೆ ಎಂಬುದನ್ನು ಪತ್ತೆ ಮಾಡುವುದು, ಅನಾರೋಗ್ಯಕರ ಸಿಗ್ನಲ್ ಜೋನ್ ಅಥವಾ ಡೆಡ್ ಜೋನ್‌ಗಳನ್ನು ಗುರುತಿಸುವುದು, ಅತ್ಯುತ್ತಮ ಸಿಗ್ನಲ್ ವ್ಯಾಪ್ತಿಗೆ ರೌಟರ್‌ಗಳ ಸರಿಯಾದ ಸ್ಥಳ ನಿರ್ಧಾರ ಹಾಗೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ವೈ-ಫೈ ಸೇವೆಯ ಗುಣಮಟ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಪತ್ತೆ ಮಾಡುವುದು.

ವಿಮಾನದಲ್ಲಿ ಎಲ್ಲಿ ಎಷ್ಟು ಶಕ್ತಿಯ ಸಿಗ್ನಲ್ ಇದೆ ಎಂಬುದನ್ನು ತಿಳಿಯಲು ‘ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಮ್ಯಾಪಿಂಗ್’ ತಂತ್ರಜ್ಞಾನವನ್ನು ಬಳಸಿದರು. ಈ ತಂತ್ರಜ್ಞಾನದ ಮೂಲಕ ವೈ-ಫೈ ತರಂಗಗಳು ಹೇಗೆ ಹರಡುತ್ತವೆ, ಎಲ್ಲಿ ನಿರ್ಬಂಧಗಳಿವೆ, ಎಲ್ಲಿ ತಡೆಗಳು ಎದುರಾಗುತ್ತವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಯಿತು.

ಇದರ ಆಧಾರದ ಮೇಲೆ ಬೋಯಿಂಗ್ ಎಂಜಿನಿಯರ್‌ಗಳು ವೈ-ಫೈ ಎಕ್ಸೆಸ್ ಪಾಯಿಂಟ್‌ಗಳನ್ನು ಪುನರ್‌ಸ್ಥಳಾಂತರಿಸಿ ಪೂರಕ ಬೂಸ್ಟರ್ ಗಳನ್ನು ಸೇರಿಸಿದರು. ಇದರಿಂದ ಪ್ರಯಾಣಿಕರು ಯಾವುದೇ ಕುರ್ಚಿಯಲ್ಲಿ ಕುಳಿತರೂ ಉತ್ತಮ ವೈ-ಫೈ ಸಂಪರ್ಕವನ್ನು ಹೊಂದಲು ಸಾಧ್ಯವಾಯಿತು.