ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Financial Changes: ಆಧಾರ್‌-ಪ್ಯಾನ್‌ ಲಿಂಕ್‌, ಎಟಿಎಂ ವಿತ್‌ಡ್ರಾ ಫೀಸ್‌...: ಇಂದಿನಿಂದ ಬದಲಾಗಲಿದೆ ಹಲವು ನಿಯಮಗಳು

ಜು. 1ರಂದು ಸರ್ಕಾರ ಒಂದಷ್ಟು ನಿಯಮಗಳಲ್ಲಿ, ಆರ್ಥಿಕ ಕಾನೂನಿನಲ್ಲಿ ಬದಲಾವಣೆ ಜಾರಿಗೆ ತರುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ನಿಯಮ, ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕ ಹಾಗೂ ತತ್ಕಾಲ್, ರೈಲು ಟಿಕೆಟ್ ಬುಕಿಂಗ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

ಇಂದಿನಿಂದ ಬದಲಾಗಲಿದೆ ಹಲವು ನಿಯಮಗಳು

ಸಾಂದರ್ಭಿಕ ಚಿತ್ರ.

Profile Ramesh B Jul 1, 2025 6:00 AM

ಹೊಸದಿಲ್ಲಿ: ಪ್ರತಿ ತಿಂಗಳ ಮೊದಲ ದಿನ ಸರ್ಕಾರ ಒಂದಷ್ಟು ನಿಯಮಗಳಲ್ಲಿ, ಆರ್ಥಿಕ ಕಾನೂನಿನಲ್ಲಿ ಬದಲಾವಣೆ ಜಾರಿಗೆ ತರುತ್ತದೆ (Financial Changes). ಜುಲೈ ಕೂಡ ಇದಕ್ಕೆ ಹೊರತಾಗಿಲ್ಲ. ಜು. 1ರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ನಿಯಮ, ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕ ಹಾಗೂ ತತ್ಕಾಲ್, ರೈಲು ಟಿಕೆಟ್ ಬುಕಿಂಗ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಜತೆಗೆ ಹೊಸ ಪ್ಯಾನ್ ಕಾರ್ಡ್‌ ಅರ್ಜಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ವೈಯಕ್ತಿಕ ತೆರಿಗೆದಾರರು ಮತ್ತು ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಗ್ರಾಹಕರ ಮೇಲೂ ಬದಲಾವಣೆ ಪರಿಣಾಮ ಬೀರಲಿದೆ. ಈ ಕುರಿತಾದ ವಿವರ ಇಲ್ಲಿದೆ.

ಹೊಸ ಪ್ಯಾನ್‌ಗೆ ಆಧಾರ್ ಅಗತ್ಯ

ಕೇಂದ್ರೀಯ ನೇರ ತೆರಿಗೆ ಮಂಡಳಿಯು ಜು. 1ರಿಂದ ಪ್ಯಾನ್ ಕಾರ್ಡ್ ಅರ್ಜಿಗಳಿಗೆ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ಪ್ಯಾನ್ ಹೊಂದಿರುವವರು ಡಿ. 31ರೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಈ ನಿಯಮವನ್ನು ಪಾಲಿಸದಿದ್ದರೆ ಪ್ಯಾನ್ ನಿಷ್ಕ್ರಿಯವಾಗುತ್ತದೆ.

ಈ ಸುದ್ದಿಯನ್ನೂ ಓದಿ: Tatkal Ticket Booking: ಗಮನಿಸಿ; ಜು. 1ರಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಕಾರ್ಡ್ ದೃಢೀಕರಣ ಕಡ್ಡಾಯ

ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌

ಇನ್ನುಮುಂದೆ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಾಗಿರುತ್ತದೆ. ಅಲ್ಲದೆ ಜು. 15ರಿಂದ ನೋಂದಾಯಿತ ಮೊಬೈಲ್ ಫೋನ್‌ಗೆ ಕಳುಹಿಸುವ ಓಟಿಪಿಯನ್ನು ಒಳಗೊಂಡಿರುವ ಎರಡು-ಅಂಶದ ದೃಢೀಕರಣವು ಎಲ್ಲ ರೈಲು ಟಿಕೆಟ್‌ಗಳಿಗೆ ಅಗತ್ಯ. ಇದರೊಂದಿಗೆ ರೈಲ್ವೆ ಟಿಕೆಟ್ ದರಗಳಲ್ಲಿ ಕೊಂಚ ಹೆಚ್ಚಳವಾಗುವ ಸಾಧ್ಯತೆ ಇದೆ. ಎಸಿ ಅಲ್ಲದ ಕೋಚ್‌ಗಳಿಗೆ ಪ್ರತಿ ಕಿ.ಮೀ.ಗೆ 1 ಪೈಸೆ, ಎಸಿ ಕೋಚ್‌ಗಳಿಗೆ 2 ಪೈಸೆಯವರೆಗೆ ಅಧಿಕವಾಗುವ ಸಾಧ್ಯತೆ ಇದೆ.

ಐಟಿಆರ್ ಸಲ್ಲಿಕೆ ಗಡುವು

ಐಟಿಆರ್ ಅಥವಾ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವನ್ನು ಸಿಬಿಡಿಟಿ ಜು. 31ರಿಂದ ಸೆ. 15ರವರೆಗೆ ವಿಸ್ತರಿಸಿದೆ. ಇದು ಸಂಬಳ ಪಡೆಯುವ ವ್ಯಕ್ತಿಗಳಿಗೆ ಫೈಲಿಂಗ್‌ಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ 46 ದಿನಗಳನ್ನು ಒದಗಿಸುತ್ತದೆ. ಅದಾಗ್ಯೂ ಕೊನೆಯ ಕ್ಷಣದಲ್ಲಿ ಕಾಣಿಸಿಕೊಳ್ಳಬಹುದಾದ ಗೊಂದಲವನ್ನು ತಪ್ಪಿಸಲು ಈಗಲೇ ಫೈಲಿಂಗ್‌ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಕ್ರೆಡಿಟ್ ಕಾರ್ಡ್‌ನಲ್ಲಿ ಬದಲಾವಣೆ

ವಿಮಾನ ಟಿಕೆಟ್‌ಗಳನ್ನು ಖರೀದಿಸಲು ಎಸ್‌ಬಿಐ ಎಲೈಟ್, ಮೈಲ್ಸ್ ಎಲೈಟ್ ಮತ್ತು ಮೈಲ್ಸ್ ಪ್ರೈಮ್‌ನಂತಹ ಆಯ್ದ ಪ್ರೀಮಿಯಂ ಕಾರ್ಡ್‌ಗಳನ್ನು ಬಳಸುವಾಗ ನೀಡಲಾಗುವ ವಾಯು ಅಪಘಾತ ವಿಮೆಯನ್ನು ಎಸ್‌ಬಿಐ ಇಂದಿನಿಂದ ನಿಲ್ಲಿಸುತ್ತಿದೆ. ಜತೆಗೆ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಆಯ್ದ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಲಿವೆ.

ಐಸಿಐಸಿಐ ಬ್ಯಾಂಕ್‌ ಎಟಿಎಂ ವಹಿವಾಟುಗಳು ಸೇರಿದಂತೆ ಸೇವಾ ಶುಲ್ಕಗಳಲ್ಲಿಯೂ ಪರಿಷ್ಕರಣೆ ಮಾಡಲಿದೆ. ಐಸಿಐಸಿಐ ಬ್ಯಾಂಕ್‌ನ ಎಟಿಎಂಗಳಲ್ಲಿ ಮೊದಲ 5 ವಿತ್‌ಡ್ರಾ ಉಚಿತವಾಗಿರಲಿದೆ. ಅದರ ನಂತರ ನಗದು ಹಿಂಪಡೆಯುವ ಪ್ರತಿ ವಹಿವಾಟಿಗೆ 23 ರೂ. ಶುಲ್ಕ ವಿಧಿಸಲಾಗುತ್ತದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರು ಬ್ಯಾಂಕೇತರ ಎಟಿಎಂಗಳನ್ನು ಬಳಸಿದರೆ, ಮೆಟ್ರೋ ನಗರಗಳಿಗೆ ಉಚಿತ ವಹಿವಾಟುಗಳ ಸಂಖ್ಯೆ 3 ಮತ್ತು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ 5 ಮಾತ್ರ. ಇದನ್ನು ಮೀರಿ ನೀವು ಪ್ರತಿ ವಹಿವಾಟಿಗೆ ಕ್ರಮವಾಗಿ 23 ರೂ. ಮತ್ತು 8.5 ರೂ. ಪಾವತಿಸಬೇಕು.