Mutual Fund: ಈ 5 ಡಿಫೆನ್ಸ್ ಮ್ಯೂಚುವಲ್ ಫಂಡ್ಸ್ನಲ್ಲಿ 6 ತಿಂಗಳಲ್ಲಿ 30% ಲಾಭ
ದೇಶದ ರಕ್ಷಣಾ ಕ್ಷೇತ್ರವು ಹಿಂದೆಂದೂ ಕಂಡರಿಯದಂತೆ ಪ್ರಬಲವಾಗಿ ಬೆಳೆಯುತ್ತಿದೆ. ರಕ್ಷಣಾ ವಲಯದ ಉತ್ಪಾದನೆಯೂ ದೊಡ್ಡ ಉದ್ದಿಮೆಯಾಗಿದೆ. ಭಾರತವು 2024ರಲ್ಲಿ 23,000 ಕೋಟಿ ರುಪಾಯಿ ಮೌಲ್ಯದ ರಕ್ಷಣಾ ವಲಯದ ರಫ್ತನ್ನು ಮಾಡಿದೆ. 2020-30ರ ವೇಳೆಗೆ 55,000 ಕೋಟಿ ರುಪಾಯಿಗಳಷ್ಟು ಡಿಫೆನ್ಸ್ ಎಕ್ಸ್ಪೋರ್ಟ್ ಮಾಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಭಾರತದ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವಲಯದ ಉದ್ದಿಮೆಯನ್ನು ಆಧರಿಸಿದ ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರ ಗಮನವನ್ನು ಸೆಳೆಯುತ್ತಿವೆ.


ಮುಂಬೈ: 5 ಡಿಫೆನ್ಸ್ ಮ್ಯೂಚುವಲ್ ಫಂಡ್ಗಳಲ್ಲಿ(Mutual Fund) 6 ತಿಂಗಳುಗಳಲ್ಲಿ 30% ರಿಟರ್ನ್ಸ್ ಹೂಡಿಕೆದಾರರಿಗೆ ಸಿಕ್ಕಿದೆ. ಈ ಕುರಿತ ಮಾಹಿತಿಯನ್ನು ಈ ಎಪಿಸೋಡ್ನಲ್ಲಿ ತಿಳಿಯೋಣ. Value Research ಈ ಕುರಿತ ಡೇಟಾ ನೀಡಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಕೆಲವೊಂದು ಉಪಯುಕ್ತ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡೋಣ.
ದೇಶದ ರಕ್ಷಣಾ ಕ್ಷೇತ್ರವು ಹಿಂದೆಂದೂ ಕಂಡರಿಯದಂತೆ ಪ್ರಬಲವಾಗಿ ಬೆಳೆಯುತ್ತಿದೆ. ರಕ್ಷಣಾ ವಲಯದ ಉತ್ಪಾದನೆಯೂ ದೊಡ್ಡ ಉದ್ದಿಮೆಯಾಗಿದೆ. ಭಾರತವು 2024ರಲ್ಲಿ 23,000 ಕೋಟಿ ರುಪಾಯಿ ಮೌಲ್ಯದ ರಕ್ಷಣಾ ವಲಯದ ರಫ್ತನ್ನು ಮಾಡಿದೆ. 2020-30ರ ವೇಳೆಗೆ 55,000 ಕೋಟಿ ರುಪಾಯಿಗಳಷ್ಟು ಡಿಫೆನ್ಸ್ ಎಕ್ಸ್ಪೋರ್ಟ್ ಮಾಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಭಾರತದ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವಲಯದ ಉದ್ದಿಮೆಯನ್ನು ಆಧರಿಸಿದ ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರ ಗಮನವನ್ನು ಸೆಳೆಯುತ್ತಿವೆ. ಈ ಮ್ಯೂಚುವಲ್ ಫಂಡ್ಗಳು ನೇರವಾಗಿ ಡಿಫೆನ್ಸ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆಯನ್ನು ಮಾಡುತ್ತವೆ. ಏರೊಸ್ಪೇಸ್ ಮತ್ತು ಸಂಬಂಧಿತ ಕಂಪನಿಗಳಲ್ಲೂ ಹೂಡಿಕೆಯನ್ನು ಮಾಡುತ್ತವೆ. ಈ ಫಂಡ್ಗಳಲ್ಲಿ ಹೂಡಿಕೆದಾರರಿಗೆ ಭಾರತದ ರಾಷ್ಟ್ರೀಯ ಣದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆಯ ವಿಶಿಷ್ಟ ಅವಕಾಶವನ್ನೂ ಪಡೆದಂತಾಗುತ್ತದೆ.
ಡಿಫೆನ್ಸ್ ಮ್ಯೂಚುವಲ್ ಫಂಡ್ಗಳು "ವೆರಿ ಹೈ ರಿಸ್ಕ್ʼ ಕೆಟಗರಿಯಲ್ಲಿ ಬರುತ್ತವೆ. ಒಂದೇ ವಿಷಯಕ್ಕೆ ಅವುಗಳ ಥೀಮ್ ಫೋಕಸ್ ಆಗಿರುವುದು ಇದಕ್ಕೆ ಕಾರಣ. ಹೈ ರಿಸ್ಕ್ ಅನ್ನು ಬಯಸುವ ಹೂಡಿಕೆದಾರರಿಗೆ ಇದು ಹೊಂದಿಕೆಯಾಗುತ್ತದೆ. ದೀರ್ಘಕಾಲೀನ ಇನ್ವೆಸ್ಟ್ಮೆಂಟ್ಗೆ ಇದು ಸೂಕ್ತವಾಗಬಹುದು. ಜತೆಗೆ ಭಾರತ ಬೆಳೆಯುತ್ತಿರುವ ರಕ್ಷಣಾ ವಲಯದ ಮೇಲೆ ವಿಶ್ವಾಸ ಇರುವವರಿಗೆ ಆಗಬಹುದು.
ಈ ಡಿಫೆನ್ಸ್ ಮ್ಯೂಚುವಲ್ ಫಂಡ್ಗಳಲ್ಲಿ ಹೈ ರಿಟನ್ಸ್ನ ಸಾಧ್ಯತೆಗಳು ಇರುವಂತೆಯೂ, ಮಾರುಕಟ್ಟೆಗಳ ಕರೆಕ್ಷನ್ ವೇಳೆ ತೀವ್ರ ವೊಲಟಾಲಿಟಿಗೂ ಗುರಿಯಾಗಬಹುದು ಎಂಬುದನ್ನು ಹೂಡಿಕೆದಾರರು ಮನವರಿಕೆ ಮಾಡಿಕೊಳ್ಳಬೇಕು. ಆದ್ದರಿಂದ ಪೋರ್ಟ್ ಫೋಲಿಯೊವನ್ನು ಡೈವರ್ಸಿಫೈ ಮಾಡಲು ಬಯಸುವವರು, ಡಿಫೆನ್ಸ್ ಮ್ಯೂಚುವಲ್ ಫಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಈಗ, ಕಳೆದ 6 ತಿಂಗಳುಗಳಲ್ಲಿ ನೀಡಿರುವ ರಿಟರ್ನ್ಸ್ ಅನ್ನು ಅಧರಿಸಿ, 2025ರಲ್ಲಿ ಪರಿಗಣಿಸಬಹುದಾದ 5 ಡಿಫೆನ್ಸ್ ಮ್ಯೂಚುವಲ್ ಫಂಡ್ ಗಳ ವಿವರಗಳನ್ನು ನೋಡೋಣ.
- ಮೋತಿಲಾಲ್ ಓಸ್ವಾಲ್ ನಿಫ್ಟಿ ಇಂಡಿಯಾ ಡಿಫೆನ್ಸ್ ETF
Motilal Oswal Nifty India Defence ETF (32.43%)
ಹೂಡಿಕೆಯ ಆರಂಭಿಕ ಮೊತ್ತ: 500/-
ಮೋತಿಲಾಲ್ ಓಸ್ವಾಲ್ ನಿಫ್ಟಿ ಇಂಡಿಯಾ ಡಿಫೆನ್ಸ್ ETF, 2024ರ ಆಗಸ್ಟ್ 21ರಲ್ಲಿ ಬಿಡುಗಡೆಯಾಗಿದೆ. ಹೈ ರಿಸ್ಕ್ ಮ್ಯೂಚುವಲ್ ಫಂಡ್ ಸ್ಕೀಮ್ ಇದಾಗಿದೆ. ಭಾರತದ ಬೆಳೆಯುತ್ತಿರುವ ರಕ್ಷಣಾ ಉದ್ದಿಮೆಯಲ್ಲಿ ಹೂಡಿಕೆಗೆ ಇದು ಅವಕಾಶವನ್ನು ನೀಡುತ್ತದೆ. ಈ ಮ್ಯೂಚುವಲ್ ಫಂಡ್ ನಿಫ್ಟಿ ಇಂಡಿಯಾ ಡಿಫೆನ್ಸ್ TRI Index ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಫಂಡ್ 463 ಕೋಟಿ ರುಪಾಯಿಗಳ ಕಾರ್ಪಸ್ ಅನ್ನು ಹೊಂದಿದೆ. ಇದು ಇನ್ನೂ ಒಂದು ವರ್ಷವನ್ನು ಪೂರ್ಣಗೊಳಿಸಿಲ್ಲ. ಈ ಫಂಡ್ನ ಎಕ್ಸ್ಪೆನ್ಸ್ ರೇಶಿಯೊ 0.41% ಆಗಿದ್ದು, ಕಡಿಮೆಯಾಗಿದೆ. ದೀರ್ಘಾವಧಿಯ ಹೂಡಿಕೆದಾರರಿಗೆ ಕೋಸ್ಟ್ ಎಫೆಕ್ಟಿವ್ ಆಗಿದೆ. ಈ ಮ್ಯೂಚುವಲ್ ಫಂಡ್ನಲ್ಲಿ 500 ರುಪಾಯಿಗಳಿಂದ ಹೂಡಿಕೆ ಆರಂಭಿಸಬಹುದು.
ಟಾಪ್ ಹೋಲ್ಡಿಂಗ್ಸ್: ಮೋತಿಲಾಲ್ ಓಸ್ವಾಲ್ ನಿಫ್ಟಿ ಇಂಡಿಯಾ ಡಿಫೆನ್ಸ್ ETF, ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೆಚ್ಚು ಹೂಡಿಕೆ ಮಾಡಿದೆ. 18.63 % ವೈಟ್ ಅನ್ನು ಒಳಗೊಂಡಿದೆ. ಎರಡನೆಯದಾಗಿ ಹಿಂದೂಸ್ತಾನ್ ಏರೊನಾಟಿಕ್ಸ್ ಅಥವಾ ಎಚ್ಎಎಲ್ನಲ್ಲಿ 18.01%, ಸೋಲಾರ್ ಇಂಡಸ್ಟ್ರೀಸ್ನಲ್ಲಿ 16.08%, ಮಝಗಾಂವ್ ಡೊಕ್ ಶಿಪ್ಬಿಲ್ಡರ್ಸ್ನ ಷೇರಿನಲ್ಲೂ ಹೂಡಿಕೆ ಮಾಡಿದೆ.
- ಗ್ರೊ ನಿಫ್ಟಿ ಇಂಡಿಯಾ ಡಿಫೆನ್ಸ್ ETF (32.07%)
Groww Nifty India Defence ETF
ಗ್ರೊ ನಿಫ್ಟಿ ಇಂಡಿಯಾ ಡಿಫೆನ್ಸ್ ETF , 2024ರ ಅಕ್ಟೋಬರ್ 8ರಂದು ಚಾಲನೆಯಾಗಿದೆ. ಇದು ನಿಫ್ಟಿ ಇಂಡಿಯಾ ಡಿಫೆನ್ಸ್ TRI Index ಅನ್ನು ಆಧರಿಸಿದೆ.
ಈ ಮ್ಯೂಚುವಲ್ ಫಂಡ್ " ವೆರಿ ಹೈ ರಿಸ್ಕ್ʼ ಕೆಟಗರಿಗೆ ಬರುತ್ತದೆ. ಈಗ 183 ಕೋಟಿ ರುಪಾಯಿ ಮೌಲ್ಯದ ಅಸೆಟ್ಸ್ ಅನ್ನು ನಿರ್ವಹಿಸುತ್ತಿದೆ. ಇದರ ಎಕ್ಸ್ ಪೆನ್ಸ್ ರೇಶಿಯೊ 0.43% ಆಗಿದೆ.
ಟಾಪ್ ಹೋಲ್ಡಿಂಗ್ಸ್:
ಗ್ರೊ ನಿಫ್ಟಿ ಇಂಡಿಯಾ ಡಿಫೆನ್ಸ್ ETFನ ಹೆಚ್ಚಿನ ಹೂಡಿಕೆ ಭಾರತ್ ಎಲೆಕ್ಟ್ರಾನಿಕ್ಸ್ನಲ್ಲಿ ಇದೆ. ಅದು 18.63% ವೈಟ್ ಅನ್ನು ಒಳಗೊಂಡಿದೆ. ಎರಡನೆಯದಾಗಿ ಎಚ್ಎಎಲ್ನಲ್ಲಿ 18.01%, ಮೂರನೆಯದಾಗಿ ಸೋಲಾರ್ ಇಂಡಸ್ಟ್ರೀಸ್, ಮಝ್ ಗಾಂವ್ ಡೊಕ್ ಮತ್ತು ಭಾರತ್ ಡೈನಾಮಿಕ್ಸ್ನಲ್ಲಿ ಹೂಡಿಕೆ ಮಾಡಲಾಗಿದೆ.
- ಮೋತಿಲಾಲ್ ಓಸ್ವಾಲ್ ನಿಫ್ಟಿ ಇಂಡಿಯಾ ಡಿಫೆನ್ಸ್ ಇಂಡೆಕ್ಸ್ ಫಂಡ್
- ರೆಗ್ಯುಲರ್ ಪ್ಲಾನ್ (31.92%)
Motilal Oswal Nifty India Defence Index Fund – Regular Plan
ಮೋತಿಲಾಲ್ ಓಸ್ವಾಲ್ ನಿಫ್ಟಿ ಇಂಡಿಯಾ ಡಿಫೆನ್ಸ್ ಇಂಡೆಕ್ಸ್ ಫಂಡ್ 2024ರ ಜುಲೈ 3ರಂದು ಬಿಡುಗಡೆ ಆಗಿದೆ. ಇದು Nifty India Defence TRI index ಅನ್ನು ಟ್ರ್ಯಾಕ್ ಮಾಡುತ್ತದೆ. ಹೈ ರಿಸ್ಕ್ ಕೆಟಗರಿಯಲ್ಲಿ ಬರುತ್ತದೆ. ಇದು 3,776 ಕೋಟಿ ರುಪಾಯಿ ಮೌಲ್ಯದ ಅಸೆಟ್ಗಳನ್ನು ನಿರ್ವಹಿಸುತ್ತಿದೆ.
ಟಾಪ್ ಹೋಲ್ಡಿಂಗ್ಸ್:
ಭಾರತ್ ಎಲೆಕ್ಟ್ರಾನಿಕ್ಸ್ (18.61%)
HAL : 18%
ಸೋಲಾರ್ ಇಂಡಸ್ಟ್ರೀಸ್ (16.07%)
ಮಝಗಾಂವ್ ಡೊಕ್ (8.7%)
ಭಾರತ್ ಡೈನಾಮಿಕ್ಸ್ ( 7.61%)
- ಗ್ರೊ ನಿಫ್ಟಿ ಇಂಡಿಯಾ ಡಿಫೆನ್ಸ್ ETF FoF - ರೆಗ್ಯುಲರ್ ಪ್ಲಾನ್ (31.67%)
roww Nifty India Defence ETF FoF – Regular Plan
ಈ ಮ್ಯೂಚುವಲ್ ಫಂಡ್ ಓಪನ್ ಎಂಡೆಡ್ ಸ್ಕೀಮ್ ಆಗಿದ್ದು, ಗ್ರೋ ಮ್ಯೂಚುವಲ್ ಪಂಡ್ ಇದನ್ನು 2024ರ ಅಕ್ಟೋಬರ್ 11 ರಂದು ಬಿಡುಗಡೆಗೊಳಿಸಿದೆ. ಇದು ಕೂಡ Nifty India Defence TRI index ಅನ್ನು ಅಧರಿಸಿದೆ. ಹೈ ರಿಸ್ಕ್ ಕೆಟಗರಿಯಲ್ಲಿ ಬರುತ್ತದೆ. 61 ಕೋಟಿ ರುಪಾಯಿ ಅಸೆಟ್ ಅನ್ನು ನಿರ್ವಹಿಸುತ್ತಿದೆ. ಇದು ಗ್ರೊ ನಿಫ್ಟಿ ಇಂಡಿಯಾ ಡಿಫೆನ್ಸ್ ಇಟಿಎಫ್-ಜಿ ಯಲ್ಲಿ ಟಾಪ್ ಹೋಲ್ಡಿಂಗ್ಸ್ ಅನ್ನು ಒಳಗೊಂಡಿದೆ.
- ಆದಿತ್ಯ ಬಿರ್ಲಾ ಸನ್ ಲೈಫ್ ನಿಫ್ಟಿ ಇಂಡಿಯಾ ಡಿಫೆನ್ಸ್ ಇಂಡಿಯಾ ಇಂಡೆಕ್ಸ್ ಫಂಡ್
Aditya Birla Sun Life Nifty India Defence Index Fund – Regular Plan (31.59%)
ಇದು ಕೂಡ ಓಪನ್ ಎಂಡೆಡ್ ಸ್ಕೀಮ್ ಆಗಿದ್ದು, 2024ರ ಆಗಸ್ಟ್ 30ರಂದು ಆದಿತ್ಯಾ ಬಿರ್ಲಾ ಸನ್ ಲೈಫ್ ಸಂಸ್ಥೆ ಬಿಡುಗಡೆಗೊಳಿಸಿತು. ಇದು Nifty India Defence TRI index ಅನ್ನು ಟ್ರ್ಯಾಕ್ ಮಾಡುತ್ತದೆ. ಹೂ ರಿಸ್ಕ್ ಕೆಟಗರಿಯಲ್ಲಿ ಬರುತ್ತದೆ. 664 ಕೋಟಿ ರುಪಾಯಿ ಅಸೆಟ್ ಅನ್ನು ನಿರ್ವಹಿಸುತ್ತಿದೆ. ಎಕ್ಸ್ಪೆನ್ಸ್ ರೇಶಿಯೊ 1.06% ಆಗಿದೆ.
ಟಾಪ್ ಹೋಲ್ಡಿಂಗ್ಸ್:
ಭಾರತ್ ಎಲೆಕ್ಟ್ರಾನಿಕ್ಸ್ (18.61%)
ಎಚ್ಎಎಲ್ : 18%
ಸೋಲಾರ್ ಇಂಡಸ್ಟ್ರೀಸ್ ( 16.06%)
ಮಝ್ ಗಾಂವ್ ಡೊಕ್ ಶಿಪ್ ಬಿಲ್ಡರ್ಸ್ (8.7%)
ಭಾರತ್ ಡೈನಾಮಿಕ್ಸ್ (7.61%)