BBK 12: ಪ್ರೆಸ್ಮೀಟ್ ಬೆನ್ನಲ್ಲೇ ಹೊರಬಿತ್ತು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವವರ ಲಿಸ್ಟ್
ಬಿಗ್ ಬಾಸ್ ಪ್ರೆಸ್ಮೀಟ್ ಮುಗಿದ ಬೆನ್ನಲ್ಲೇ ಈ ಬಾರಿ ದೊಡ್ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದು ಯಾರೆಲ್ಲ ಅಂದ್ರೆ, ಕನ್ನಡದ ಅರ್ನಬ್ ಗೋಸ್ವಾಮಿ ಅಂತಲೇ ಫೇಮಸ್ ಆಗಿರುವ ನ್ಯೂಸ್ ಆಂಕರ್ ಚಂದನ್ ಶರ್ಮಾ ಮೊದಲಿಗರಾಗಿದ್ದಾರಂತೆ.

Bigg Boss and Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada season 12) ಕುರಿತು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಸದ್ಯದಲ್ಲೇ ಬಿಬಿಕೆ 12 ಸೀಸನ್ ಶುರುವಾಗಲಿದೆ. ಅಷ್ಟೇ ಅಲ್ಲದೆ ಈ ಬಾರಿ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಅದರ ಆಯೋಜಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ರಿವೀಲ್ ಆಗಿದೆ. ಆಯೋಜಕರು ಕಿಚ್ಚ ಸುದೀಪ್ ಅವರನ್ನು ಮನವೊಲಿಸಲು ಯಶಸ್ವಿಯಾಗಿದ್ದು, ಇವರೇ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿ ದೊಡ್ಮನೆಯೊಳಹೆ ಹೋಗುವ ಕಂಟೆಸ್ಟೆಂಟ್ಸ್ ಯಾರೆಂಬ ಗಾಸಿಪ್ ಹರಿದಾಡುತ್ತಿದೆ.
ಬಿಗ್ ಬಾಸ್ ಪ್ರೆಸ್ಮೀಟ್ ಮುಗಿದ ಬೆನ್ನಲ್ಲೇ ಈ ಬಾರಿ ದೊಡ್ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದು ಯಾರೆಲ್ಲ ಅಂದ್ರೆ, ಕನ್ನಡದ ಅರ್ನಬ್ ಗೋಸ್ವಾಮಿ ಅಂತಲೇ ಫೇಮಸ್ ಆಗಿರುವ ನ್ಯೂಸ್ ಆಂಕರ್ ಚಂದನ್ ಶರ್ಮಾ ಮೊದಲಿಗರಾಗಿದ್ದಾರಂತೆ. ಪ್ರತಿಭಾವಂತ ಚಂದನ್ ಶರ್ಮಾ ಸೀರಿಯಲ್ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನು ಕಳೆದ ಕೆಲವು ವರ್ಷಗಳಿಂದ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ.
BBK 12: ಸುದೀಪ್ ಮನವೊಲಿಸುವಲ್ಲಿ ಕಲರ್ಸ್ ಯಶಸ್ವಿ: ಬಿಗ್ ಬಾಸ್ 12ಕ್ಕೆ ಕಿಚ್ಚನ ನಿರೂಪಣೆ
ಕೆಜಿಎಫ್ ಸಿನಿಮಾದ ಮೂಲಕ ದೇಶಾದ್ಯಂತ ಸದ್ದು - ಸುದ್ದಿ ಮಾಡಿದವರು ಅರ್ಚನಾ ಜೋಯಿಸ್ ಬಿಗ್ ಬಾಸ್ಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂತೆಯೆ ಈ ಬಾರಿ ಬಿಗ್ ಬಾಸ್ ವೇದಿಕೆಗೆ ಕಿಚ್ಚು ಹಚ್ಚೋದಕ್ಕೆ ಪ್ರಿಯಾಂಕಾ ಉಪೇಂದ್ರ ಬರ್ತಾರೆ. ಉಪೇಂದ್ರ ಮಡದಿಗೆ ಬಿಗ್ ಬಾಸ್ ಆಫರ್ ಕೊಟ್ಟಿದೆ ಎಂದು ಹೇಳಲಾಗಿದೆ. ಹಾಗೆಯೆ ಶ್ರೀರಸ್ತು ಶುಭಮಸ್ತು, ಇಷ್ಟದೇವತೆ ಮುಂತಾದ ಸೀರಿಯಲ್‌ಗಳಲ್ಲಿ ಮಿಂಚಿದ ಶ್ರೀ ಮಹಾದೇವ್. ಅವರಿಗೂ ಬಿಗ್ ಬಾಸ್ ಕಡೆಯಿಂದ ಕರೆ ಹೋಗಿದ್ಯಂತೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವುದು ಅವರನ್ನು ಅಂತಿಮಗೊಳಿಸುವುದು, ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಈಗಾಗಲೇ ಆಯೋಜಕರು ಆರಂಭ ಮಾಡಿದ್ದಾರೆ. ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆಯಂತೆ. ಪ್ರಮೋ ಶೂಟ್ ಕೂಡ ನಡೆದಿದೆ ಎಂಬ ವಿಚಾರವನ್ನು ಪ್ರೆಸ್ಮೀಟ್ನಲ್ಲಿ ರಿವೀಲ್ ಮಾಡಲಾಗಿದ್ದು, ಸದ್ಯದಲ್ಲೇ ಪ್ರೊಮೋ ಬಿಡುಗಡೆ ಆಗಲಿದೆ.