Ramayana Movie: ಯಶ್ ರಾವಣನಾಗಿ ಮಿಂಚುತ್ತಿರುವ ರಾಮಾಯಣ ಚಿತ್ರದಿಂದ ಬಿಗ್ ಅಪ್ಡೇಟ್
ಕೋಟ್ಯಂತರ ಸಿನಿಪ್ರಿಯರಿಗೆ ರಾಮಾಯಣ ಚಿತ್ರತಂಡದಿಂದ ಗುಡ್ನ್ಯೂಸ್ ಸಿಕ್ಕಿದೆ. ಇದೇ ಗುರುವಾರ ಅಂದರೆ ಜು.3ರಂದು ಇಡೀ ವಿಶ್ವೇ ಕಾತುರದಿಂದ ಕಾಯುತ್ತಿರುವ ರಾಮಾಯಣದ ಗ್ಲಿಮ್ಸ್ ಅಪ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ. ಆ ಮೂಲಕ ಸಿನಿಪ್ರಿಯರಿಗೆ ಗುಡ್ನ್ಯೂಸ್ ಸಿಕ್ಕಿದೆ.


ಮುಂಬೈ: ರಾಕಿಂಗ್ ಸ್ಟಾರ್ ಯಶ್(Actor Yash) ರಾವಣನಾಗಿ ಮಿಂಚುತ್ತಿರುವ ಬಹು ನಿರೀಕ್ಷೆಯ ರಾಮಾಯಣ ಸಿನಿಮಾದ(Ramayana Movie) ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕೋಟ್ಯಂತರ ಸಿನಿಪ್ರಿಯರಿಗೆ ಚಿತ್ರತಂಡದಿಂದ ಗುಡ್ನ್ಯೂಸ್ ಸಿಕ್ಕಿದೆ. ಇದೇ ಗುರುವಾರ ಅಂದರೆ ಜು.3ರಂದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ರಾಮಾಯಣದ ಗ್ಲಿಮ್ಸ್ ಅಪ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ. ಈ ಬಗ್ಗೆ ಚಿತ್ರತಂಡ ಪೋಸ್ಟರ್ವೊಂದನ್ನು ರಿಲೀಸ್ ಮಾಡಿದ್ದು, ರಾಮಾಯಣದ ಭಾಗವಾಗುವ ಅವಕಾಶ ನಿಮ್ಮದಾಗಿಸಿಕೊಳ್ಳಿ: ದ ಇಂಟ್ರೊಡಕ್ಷನ್ ಸ್ಕ್ರೀನಿಂಗ್ ಎಂದು ಬರೆಯಲಾಗಿದೆ.

ಬಾಲಿವುಡ್ನ ರಾಮಾಯಣ ಚಿತ್ರದ ಫಸ್ಟ್ ಗ್ಲಿಂಪ್ಸ್ ಜುಲೈ-3 ರಂದು ರಿಲೀಸ್ ಆಗುತ್ತಿದೆ. ಆದರೆ, ಇದರಲ್ಲಿ ಅಸಲಿಗೆ ಏನು ತೋರಿಸುತ್ತಾರೆ ಅನ್ನುವ ಕುತೂಹಲವೂ ಇದೆ. ಈ ದಿನ ರಾಮಾಯಣ ಚಿತ್ರದ ಟೈಟಲ್ ಟೀಸರ್ ಮಾತ್ರ ರಿಲೀಸ್ ಆಗುತ್ತಿದೆ. ಆದರೆ, ಅದು ವಿಶೇಷವಾಗಿಯೇ ಇದೆ. ದೇಶದ ಪ್ರಮುಖ ಸಿಟಿಯ ಥಿಯೇಟರ್ನಲ್ಲಿಯೇ ಇದು ಪ್ರದರ್ಶನ ಆಗುತ್ತಿದೆ ಎನ್ನಲಾಗಿದೆ. ರಾಮಾಯಣ ಸಿನಿಮಾದ ಟೈಟಲ್ ಟೀಸರ್ ಸ್ಪೆಷಲ್ ಆಗಿದೆ. ಇದನ್ನ 3D ಅಲ್ಲಿಯೇ ತೋರಲಾಗುತ್ತಿದೆ. ಆ ದಿನ ಇಷ್ಟು ಬಿಟ್ರೆ ಬೇರೆ ಏನೂ ಇರೋದಿಲ್ಲ ಅನ್ನೋ ಸುದ್ದಿಗಳೂ ಹರಿದಾಡುತ್ತಿವೆ.

ಈ ಸುದ್ದಿಯನ್ನೂ ಓದಿ: Ramayana Movie: ಬಿಗ್ ಬಜೆಟ್ ರಾಮಾಯಣ ಸಿನಿಮಾದಲ್ಲಿ ಮತ್ತಷ್ಟು ಸ್ಟಾರ್ಸ್ ಫಿಕ್ಸ್!
ರಾಮಾಯಣ ಭಾರತೀಯ ಸಿನಿಮಾರಂಗದಲ್ಲಿಯೇ ಬಿಗ್ ಬಜೆಟ್ ಸಿನಿಮಾಗಳಲ್ಲೊಂದಾಗಿದೆ. ಈಗಾಗಲೇ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟುಕೊಂಡಿದ್ದು ಯಶ್ ನಟನೆ ಜೊತೆಗೆ ನಿರ್ಮಾಣ ಮಾಡ್ತಿದ್ದಾರೆ ಅನ್ನೋ ಸುದ್ದಿ ಗೊತ್ತಾದ ನಂತರ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ. ರಾಮಾಯಣ ಸಿನಿಮಾಗಾಗಿ ಬೃಹತ್ ಸೆಟ್ಗಳನ್ನು ಹಾಕಲಾಗಿದೆ. ಆಕ್ಷನ್ ಸೀಕ್ವೆನ್ಸ್ಗಳನ್ನು ಹಾಲಿವುಡ್ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy norris)ನಿರ್ದೇಶನ ಮಾಡುತ್ತಿದ್ದಾರೆ .
ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಯಶ್ ಹಾಗೂ ರಣಬೀರ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಜೊತೆಯಾಗಿ ಯಶ್ ರಾಮಾಯಣ ಚಿತ್ರಕ್ಕೆ ಕೋ ಪ್ರೊಡ್ಯೂಸರ್ ಆಗಿದ್ದಾರೆ. ನಟನೆ ಜೊತೆ ಜೊತೆಗೆ ಪ್ರತಿ ಹಂತದಲ್ಲಿಯೂ ಯಶ್ ಸಿನಿಮಾದ ಜೊತೆ ತೊಡಗಿಸಿಕೊಂಡಿದ್ದಾರೆ. ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ರಾಮಾಯಣ ಭಾಗ 1 2026, ದೀಪಾವಳಿ ರಿಲೀಸ್ ಆದರೆ ಎರಡನೇ ಭಾಗ 2027ಕ್ಕೆ ಬಿಡುಗಡೆಯಾಗಲಿದೆ.