ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada New Movie: ಡಾ. ರಾಜ್‌ವೀರ್ ಅಭಿನಯದ RR77 ಚಿತ್ರದ ಫಸ್ಟ್‌ ಪೋಸ್ಟರ್‌ ಔಟ್‌

Kannada New Movie: ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿ.ಪಿ. ವೆಂಕಟೇಶ್ ನಿರ್ಮಾಣದ, ಮಂಜು ಕವಿ ನಿರ್ದೇಶನದ RR77 ಚಿತ್ರದ ಮೊದಲನೇ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಮಂಜು ಕವಿ ಅವರೇ ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಡಾ. ರಾಜ್‌ವೀರ್ ಅಭಿನಯದ RR77 ಚಿತ್ರದ ಫಸ್ಟ್‌ ಪೋಸ್ಟರ್‌ ಔಟ್‌

Profile Siddalinga Swamy Jun 12, 2025 6:05 PM

ಬೆಂಗಳೂರು: ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿ.ಪಿ. ವೆಂಕಟೇಶ್ ನಿರ್ಮಾಣದ ಚಿತ್ರ RR77 (Kannada New Movie). ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್‌ವೀರ್ ಅಭಿನಯಿಸಲಿದ್ದಾರೆ. ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ತಿಳಿಸಿದರು. ಸಂಪೂರ್ಣ ಕಥೆಯನ್ನು ಕೇಳಿ ಡಿ.ಪಿ. ವೆಂಕಟೇಶ್ ಅವರು ಕಥೆ ತುಂಬಾ ಮನಸ್ಸಿಗೆ ಹತ್ತಿರವಾಗಿದೆ. ಇಂತಹ ಕಥೆಗಾಗಿ ಕಾಯುತ್ತಿದ್ದೆ ಕರ್ನಾಟಕದ ಜನತೆಗೆ ನಮ್ಮ ಸಿನಿಮಾ ಕೊಡುಗೆಯಾಗಲಿ ಎಂದು ತಿಳಿಸಿ ಬಂಡವಾಳ ಹೂಡಲಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲರ ಗಮನ ಸೆಳೆಯುತ್ತದೆ ಎಂದು ಅವರು ಹೇಳಿದರು.

Kannada New Movie 1

ನಿರ್ದೇಶನ ತಂಡದಲ್ಲಿ ಎಸ್.ಜೆ. ಸಂಜಯ್, ದಯಾ, ಗಿರೀಶ್ ಸಾಕಿ, ಸಂಗೀತ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ. ಛಾಯಾಗ್ರಹಣ ರಾಜಕಡುರ್, ಈ ಚಿತ್ರದಲ್ಲಿ ಧರಣಿ ಹಾಗೂ ನಿಕಿತ ಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಮಂಜು ಕವಿ ಅವರು ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳಿಗೆ ಉತ್ತಮವಾದ ವಾದ್ಯ ಸಂಯೋಜನೆ ವಿಜಯ ಹರಿತ್ಸ. ವಿನು ಮನಸ್ಸು ನೀಡಿದ್ದಾರೆ. ಚಿತ್ರಕಥೆಗೆ ಸೂಕ್ತವಾದ ಕಲಾವಿದ ಡಾ. ರಾಜ್ ವೀರ್ ಎಂದು ಮಂಜು ಕವಿ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಚಿತ್ರಕ್ಕೆ ನೃತ್ಯ ಸಂಯೋಜನೆ ಜಗ್ಗು ಅವರು ಕಾರ್ಯನಿರ್ವಹಿಸಿದ್ದಾರೆ. ಇನ್ನು ಚಿತ್ರದ ಮೊದಲನೇ ಪೋಸ್ಟರ್ ಲುಕ್‌ ಅನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿ, RR77 ಚಿತ್ರ ತಂಡಕ್ಕೆ ಶುಭ ಹಾರೈಸಿದರು.