ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shreyas Iyer: 2 ವಾರಗಳ ಅಂತರದಲ್ಲಿ 2 ಫೈನಲ್‌ ಸೋತ ಶ್ರೇಯಸ್‌ ಅಯ್ಯರ್‌

ಮೊದಲು ಬ್ಯಾಟಿಂಗ್‌ ನಡೆಸಿದ ಫಾಲ್ಕನ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಂಗ್‌ಕ್ರಿಷ್ ರಘುವಂಶಿ (7 ರನ್‌), ಇಶಾನ್‌ ಎಂ. (20 ರನ್‌) ಹಾಗೂ ಅಮೋಘ ಭಟ್ಕಲ್‌ (16 ರನ್) ಗಳಿಸಿ ಔಟಾದರು. ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಕೈಕೊಟ್ಟರು. ಅವರ ಗಳಿಕೆ ಕೇವಲ 12 ರನ್‌.

2 ವಾರಗಳ ಅಂತರದಲ್ಲಿ 2 ಫೈನಲ್‌ ಸೋತ ಶ್ರೇಯಸ್‌ ಅಯ್ಯರ್‌

Profile Abhilash BC Jun 13, 2025 5:41 PM

ಮುಂಬಯಿ: ಶ್ರೇಯಸ್‌ ಅಯ್ಯರ್‌(Shreyas Iyer) ನೇತೃತ್ವದ ತಂಡ 2 ವಾರಗಳ ಅಂತರದಲ್ಲಿ ಎರಡು ಫೈನಲ್‌ ಟೂರ್ನಿಯಲ್ಲಿ ಸೋಲು ಕಂಡಿದೆ. ಗುರುವಾರ ರಾತ್ರಿ ನಡೆದ ಟಿ20 ಮುಂಬೈ ಲೀಗ್‌' ಟೂರ್ನಿಯ(T20 Mumbai 2025) ಫೈನಲ್‌ ಪಂದ್ಯದಲ್ಲಿ ಅಯ್ಯರ್‌ ಸಾರಥ್ಯದ ಸೋಬೋ ಮುಂಬೈ ಫಾಲ್ಕನ್ಸ್‌ ತಂಡವು ಮುಂಬೈ ಸೌತ್‌ ಸೆಂಟ್ರಲ್‌ ಮರಾಠ ರಾಯಲ್ಸ್‌(SMF vs MSCMR) ತಂಡದ ವಿರುದ್ಧ 5 ವಿಕೆಟ್‌ ಅಂತರದ ಸೋಲು ಕಂಡಿದೆ. ಇದಕ್ಕೂ ಮುನ್ನ ಜೂನ್‌ 3 ರಂದು ನಡೆದಿದ್ದ ಐಪಿಎಲ್‌ ಫೈನಲ್‌ನಲ್ಲಿ ಅಯ್ಯರ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡ ಆರ್‌ಸಿಬಿ ವಿರುದ್ಧ ಸೋಲು ಕಂಡಿತ್ತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಫಾಲ್ಕನ್ಸ್‌ ತಂಡ ಮಯೂರೇಶ್ ತಂಡೇಲ್(50*) ಅವರ ಅಜೇಯ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಯಲ್ಸ್‌ ಪಡೆ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್‌ ಬಾರಿಸಿ ಗೆಲುವು ಸಾಧಿಸಿತು. ಚೇಸಿಂಗ್‌ ವೇಳೆ ಚಿನ್ಮಯ್ ರಾಜೇಶ್ ಸುತಾರ್ 53 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಫಾಲ್ಕನ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಂಗ್‌ಕ್ರಿಷ್ ರಘುವಂಶಿ (7 ರನ್‌), ಇಶಾನ್‌ ಎಂ. (20 ರನ್‌) ಹಾಗೂ ಅಮೋಘ ಭಟ್ಕಲ್‌ (16 ರನ್) ಗಳಿಸಿ ಔಟಾದರು. ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಕೈಕೊಟ್ಟರು. ಅವರ ಗಳಿಕೆ ಕೇವಲ 12 ರನ್‌. ಮಯೂರೇಷ್‌ ತಂಡೆಲ್‌ ಮತ್ತು ಹರ್ಷ್‌ ಅಘವ್‌ ತಂಡಕ್ಕೆ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ ಮುರಿಯದ 85 ರನ್‌ ಜತೆಯಾಟ ನಡೆಸಿತು. ತಂಡೆಲ್‌ 32 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿದರೆ, ಅಘವ್‌ 28 ಎಸೆತಗಳಲ್ಲಿ ಅಜೇಯ 45 ರನ್‌ ಬಾರಿಸಿದರು. ಹೀಗಾಗಿ, ತಂಡದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು.

ಕಳೆದ ಒಂದೂವರೆ ವರ್ಷದಿಂದ ಮುಟ್ಟಿದ್ದೆಲ್ಲವೂ ಚಿನ್ನ. ಕಳೆದ ವರ್ಷ ಮುಂಬೈ ಪರ ರಣಜಿ ಟ್ರೋಫಿ ಗೆದ್ದಿದ್ದ ಶ್ರೇಯಸ್‌, ಬಳಿಕ ತಮ್ಮದೇ ನಾಯಕತ್ವದಲ್ಲಿ ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಶ್ರೇಯಸ್‌, ಇರಾನಿ ಕಪ್‌ ಮುಂಬೈ ತಂಡದಲ್ಲಿದ್ದರು. ಇತ್ತೀಚೆಗೆ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗ ಶ್ರೇಯಸ್‌ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಇದೀಗ ಒಂದೇ ತಿಂಗಳಿನಲ್ಲಿ ಎರಡು ಫೈನಲ್‌ ಸೋಲು ಕಂಡಿದ್ದಾರೆ.

ಇದನ್ನೂ ಓದಿ IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್‌ ಅಯ್ಯರ್‌ʼ-ಯೋಗರಾಜ್‌ ಸಿಂಗ್‌ ಆರೋಪ!