Mehidy Hasan: ಬಾಂಗ್ಲಾ ಏಕದಿನ ತಂಡಕ್ಕೆ ಮೆಹದಿ ಹಸನ್ ನೂತನ ನಾಯಕ
105 ಏಕದಿನ ಪಂದ್ಯಗಳಲ್ಲಿ 1617 ರನ್ ಮತ್ತು 110 ವಿಕೆಟ್ಗಳೊಂದಿಗೆ, ಮಿರಾಜ್ ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಆಲ್ರೌಂಡರ್ಗಳಲ್ಲಿ 4 ನೇ ಸ್ಥಾನದಲ್ಲಿದ್ದಾರೆ. ಮೆಹಿದಿ ಹಸನ್ ಈ ಹಿಂದೆ ನಾಲ್ಕು ಏಕದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸಿದ್ದರು.


ಢಾಕಾ: ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಮುನ್ನವೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(Bangladesh Cricket Board) ಅಚ್ಚರಿಯ ಬೆಳವಣಿಗೆ ಎಂಬಂತೆ ತಂಡದ ನಾಯಕನ್ನು ಬದಲಾಯಿಸಿದೆ. ನಜ್ಮುಲ್ ಹೊಸೈನ್ ಶಾಂಟೊ(Najmul Hossain Shanto) ಬದಲಿಗೆ ಮೆಹದಿ ಹಸನ್ ಮಿರಾಜ್(Mehidy Hasan) ಅವರನ್ನು ನೂತನ ಏಕದಿನ ನಾಯಕರನ್ನಾಗಿ ಘೋಷಿಸಿದೆ. ಬ್ಯಾಟಿಂಗ್ನಲ್ಲಿ ಗಮನಹರಿಸುವ ಸಲುವಾಗಿ ಇತ್ತೀಚೆಗೆ ಶಾಂಟೊ ಅವರು ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಏಕದಿನ ನಾಯಕನಾಗಿ ಮುಂದುವರಿಯಲು ಸಿದ್ಧರಾಗಿದ್ದರು. ಆದ್ಯಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ ನೂತನ ನಾಯಕ ಆಯ್ಕೆ ಮಾಡಿದೆ.
"ಮೆಹದಿ ಹಸನ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ, ತಂಡವನ್ನು ಪ್ರೇರೇಪಿಸುವ ಅವರ ಸಾಮರ್ಥ್ಯ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಅವರ ಉತ್ಸಾಹಭರಿತ ಉಪಸ್ಥಿತಿಯು ತಂಡದ ಪರಿವರ್ತನೆಯ ಸಮಯದಲ್ಲಿ ಏಕದಿನ ತಂಡವನ್ನು ಮುನ್ನಡೆಸಲು ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ಮಂಡಳಿ ಭಾವಿಸಿರುವುದಾಗಿ" ಬಿಸಿಬಿಯ ಕ್ರಿಕೆಟ್ ಕಾರ್ಯಾಚರಣೆ ಸಮಿತಿಯ ಅಧ್ಯಕ್ಷ ನಜ್ಮುಲ್ ಅಬೆದೀನ್ ಹೇಳಿದ್ದಾರೆ.
105 ಏಕದಿನ ಪಂದ್ಯಗಳಲ್ಲಿ 1617 ರನ್ ಮತ್ತು 110 ವಿಕೆಟ್ಗಳೊಂದಿಗೆ, ಮಿರಾಜ್ ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಆಲ್ರೌಂಡರ್ಗಳಲ್ಲಿ 4 ನೇ ಸ್ಥಾನದಲ್ಲಿದ್ದಾರೆ. ಮೆಹದಿ ಹಸನ್ ಈ ಹಿಂದೆ ನಾಲ್ಕು ಏಕದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸಿದ್ದರು.
"ಮಂಡಳಿಯಿಂದ ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ನನಗೆ ಸಿಕ್ಕ ದೊಡ್ಡ ಗೌರವ" ಎಂದು ಮೆಹದಿ ಹಸನ್ ಬಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ದೇಶವನ್ನು ಮುನ್ನಡೆಸುವುದು ಯಾವುದೇ ಕ್ರಿಕೆಟಿಗನ ಕನಸಾಗಿರುತ್ತದೆ ಮತ್ತು ಮಂಡಳಿ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಮೆಹದಿ ಹೇಳಿದ್ದಾರೆ.
ಇದನ್ನೂ ಓದಿ IND vs ENG: ಮೊದಲನೇ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಸಂಜಯ್ ಬಾಂಗರ್!
"ನನಗೆ ಈ ತಂಡದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಮ್ಮಲ್ಲಿ ನಿರ್ಭೀತ ಕ್ರಿಕೆಟ್ ಆಡುವ ಪ್ರತಿಭೆ ಮತ್ತು ನಂಬಿಕೆ ಇದೆ. ನಾವು ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಬೇಕು, ಹಿಂಜರಿಕೆಯಿಲ್ಲದೆ ಆಡಬೇಕು ಮತ್ತು ದೇಶಕ್ಕಾಗಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ" ಎಂದರು.