ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕದ ಉದ್ಯಮ ಕ್ಷೇತ್ರದ ಬೆಳವಣಿಗೆಯ ಹಿಂದೆ ಇರುವ ಶಕ್ತಿಯೇ ಎಸ್ಎಂಇಗಳು-ಕೋಟಕ್

ಸಾಂಪ್ರದಾಯಿಕ ವಿಧಾನಗಳಿಂದ ಡಿಜಿಟಲ್‌ಗೆ ಪರಿವರ್ತನೆ ಹೊಂದಿವೆ. ಮುಖ್ಯವಾಗಿ ಅಭಿವೃದ್ಧಿ ಕೇಂದ್ರಿತ ಉದ್ಯಮಗಳಾಗಿ ವಿಕಾಸ ಗೊಂಡಿವೆ. ಈ ಬದಲಾವಣೆಯ ಹಿಂದೆ ಅವುಗಳ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳಿವೆ ಎಂದರೆ ಅತಿಶಯೋಕ್ತಿಯಲ್ಲ. ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಕೋಟಕ್ ಫಿನ್‌ ನಂತಹ ವೇದಿಕೆಗಳು ಎಸ್ಎಂಇಗಳಿಗೆ ಚುರುಕಾಗಿ, ನಿಖರವಾಗಿ ಮತ್ತು ವ್ಯಾಪಕವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತಿವೆ.

ಉದ್ಯಮ ಕ್ಷೇತ್ರದ ಬೆಳವಣಿಗೆಯ ಹಿಂದೆ ಇರುವ ಶಕ್ತಿಯೇ ಎಸ್ಎಂಇಗಳು

Profile Ashok Nayak Jun 13, 2025 12:02 PM

ಕರ್ನಾಟಕದ ಉದ್ಯಮ ಕ್ಷೇತ್ರವು ಉತ್ತಮವಾದ ಬೆಳವಣಿಗೆಯನ್ನು ಕಾಣುತ್ತಿದ್ದು, ರಾಜ್ಯದ ಆರ್ಥಿಕತೆ ಯೂ ಏರುತ್ತಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಅಚ್ಚರಿ ಎಂದರೆ ಈ ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಸ್ಎಂಇಗಳು) ವಲಯ ದೊಡ್ಡ ಕೊಡುಗೆ ನೀಡುತ್ತಿದೆ. ಒಂದು ಕಾಲಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಅಷ್ಟಾಗಿ ಮನ್ನಣೆ ನೀಡುತ್ತಿರಲಿಲ್ಲ. ಆದರೆ ಈಗ ಈ ವಲಯವು ರಾಜ್ಯದ ಕೈಗಾರಿಕಾ ಮತ್ತು ತಾಂತ್ರಿಕ ಕ್ಷೇತ್ರದ ಬೆಳವಣಿಗೆಯ ಕೇಂದ್ರಬಿಂದು ವಾಗಿ ಮೂಡಿ ಬಂದಿದೆ. ವಾಯುಯಾನದಿಂದ ಎಲೆಕ್ಟ್ರಿಕ್ ವಾಹನಗಳವರೆಗೆ, ಸೆಮಿಕಂಡಕ್ಟರ್‌ ಗಳಿಂದ ಗ್ರೀನ್ ಮ್ಯಾನುಫ್ಯಾಕ್ಚರಿಂಗ್ ವರೆಗೆ ಎಸ್ಎಂಇ ಈಗ ಕೇವಲ ಪೋಷಕ ನಟರಾಗಿ ಮಾತ್ರವೇ ಉಳಿದಿಲ್ಲ, ಬದಲಾಗಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತಿವೆ.

ಈ ಎಂಎಸ್ಎಂಇಗಳು ಈಗ ಭಾರಿ ಬದಲಾವಣೆ ಹೊಂದಿವೆ. ಸಾಂಪ್ರದಾಯಿಕ ವಿಧಾನಗಳಿಂದ ಡಿಜಿಟಲ್‌ಗೆ ಪರಿವರ್ತನೆ ಹೊಂದಿವೆ. ಮುಖ್ಯವಾಗಿ ಅಭಿವೃದ್ಧಿ ಕೇಂದ್ರಿತ ಉದ್ಯಮಗಳಾಗಿ ವಿಕಾಸ ಗೊಂಡಿವೆ. ಈ ಬದಲಾವಣೆಯ ಹಿಂದೆ ಅವುಗಳ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳಿವೆ ಎಂದರೆ ಅತಿಶಯೋಕ್ತಿಯಲ್ಲ. ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಕೋಟಕ್ ಫಿನ್‌ ನಂತಹ ವೇದಿಕೆಗಳು ಎಸ್ಎಂಇಗಳಿಗೆ ಚುರುಕಾಗಿ, ನಿಖರವಾಗಿ ಮತ್ತು ವ್ಯಾಪಕ ವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತಿವೆ. ಕಾಗದರಹಿತ ಹಣಕಾಸು ಸೌಲಭ್ಯ, ಸರಳ ಸಂಗ್ರಹ ವ್ಯವಸ್ಥೆ ಮತ್ತು ಪಾವತಿ ವ್ಯವಸ್ಥೆ ಹಾಗೂ ಎಐ ಆಧರಿತ ವಿಶ್ಲೇಷಣೆಗಳನ್ನು ಒದಗಿಸುವ ಕೋಟಕ್ ಫಿನ್ ಸಂಸ್ಥೆಯು ಎಸ್ಎಂಇಗಳಿಗೆ ತಮ್ಮ ಕಾರ್ಯಾಚರಣೆಯ ಬಂಡವಾಳವನ್ನು ನಿರ್ವಹಿಸಲು ಮತ್ತು ಹೊಸ ಬೆಳವಣಿಗೆಯ ಅವಕಾಶಗಳ ಬಾಗಿಲನ್ನು ತೆರೆಯಲು ಸಹಾಯ ಮಾಡುತ್ತಿದೆ.

ಇದನ್ನೂ ಓದಿ: Vishweshwar Bhat Column: ಬೋಯಿಗ್‌ 787-8 ಡ್ರೀಮ್‌ ಲೈನರ್

ಈ ಕುರಿತು ಮಾತನಾಡಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಿಭಾಗದ ಅಧ್ಯಕ್ಷರಾದ ಶೇಖರ್ ಭಂಡಾರಿ ಅವರು , “ಕರ್ನಾಟಕದ ಉದ್ಯಮಿಗಳು ಧೈರ್ಯಶಾಲಿ ಗಳು, ದೂರದೃಷ್ಟಿಯುಳ್ಳವರು ಮತ್ತು ಡಿಜಿಟಲ್‌ ಪರಿಣತರು. ಅವರು ಮುಂಚೂಣಿಯಲ್ಲಿ ನೀಂತು ಕೈಗಾರಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಕೋಟಕ್ ಫಿನ್ ವೇದಿಕೆಯನ್ನು ಅವರ ಉದ್ದೇಶ ಸಾಕಾರಕ್ಕೆ ಸಾಥ್ ನೀಡಲು ರೂಪಿಸಲಾಗಿದ್ದು, ಇದು ಮೊಬೈಲ್, ವೆಬ್ ಮತ್ತು ಎಪಿಐಗಳ ಮೂಲಕ ಸೇವೆ ಒದಗಿಸುತ್ತದೆ. ಇದು ಸರಳವಾಗಿದೆ, ಸಂಯೋಜಿತವಾಗಿದೆ ಮತ್ತು ‘ನಿಮ್ಮ ಅಗತ್ಯಗಳಿಗಾಗಿ’ ನಿರ್ಮಿತಗೊಂಡಿದೆ” ಎಂದು ಹೇಳಿದರು.

Kotak

ಹೀಗೆ ಆರ್ಥಿಕವಾಗಿ ಶಕ್ತಿ ತುಂಬುವುದರಿಂದ ಎಸ್ಎಂಇಗಳು ಹೆಚ್ಚು ಅಭಿವೃದ್ಧಿ ಹೊಂದಬಹು ದಾದ ಕ್ಷೇತ್ರಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಮತ್ತು ಕರ್ನಾಟಕದ ಕೈಗಾರಿಕಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಪಾಲುದಾರಿಕೆ ಮಾಡಿಕೊಳ್ಳಲು ಅವಕಾಶ ಗಳಿಸುತ್ತದೆ. 21.25 ಲಕ್ಷಕ್ಕಿಂತಲೂ ಹೆಚ್ಚಿನ ನೋಂದಾಯಿತ ಎಂಎಸ್ಎಂಇಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಉದ್ಯಮ ಕ್ಷೇತ್ರದ ಒಂದು ಪ್ರಮುಖ ವಿಭಾಗವಾಗಿದ್ದು, ಹೊಸತನ, ಉದ್ಯೋಗಾವಕಾಶ ಮತ್ತು ರಫ್ತು ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರಗಳಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುತ್ತಿದ್ದು, ಎಸ್ಎಂಇಗಳ ಬೆಳವಣಿಗೆಗೆ ತನ್ನ ಬದ್ಧತೆಯನ್ನು ತೋರ್ಪಡಿಸಿಕೊಂಡಿದೆ. ಡಿಜಿಟಲ್ ವ್ಯವಸ್ಥೆ ಮತ್ತು ಗ್ರಾಹಕ ಕೇಂದ್ರಿತ ವೇದಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ಬ್ಯಾಂಕ್ ಎಸ್ಎಂಇಗಳಿಗೆ ಹೆಚ್ಚು ದೃಢವಾಗಿ ಕಾರ್ಯನಿರ್ವಹಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರಲು ಸಹಾಯ ಮಾಡುತ್ತಿದೆ.

ಕರ್ನಾಟಕವು ಜಾಗತಿಕ ಮಟ್ಟದ ಹೂಡಿಕೆ ಗಳಿಸುವುದನ್ನು ಮುಂದುವರಿಸಿದೆ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಎತ್ತರಗಳನ್ನು ತಲುಪುತ್ತಿದೆ. ಈ ಬೆಳವಣಿಗೆಯ ಹಿಂದೆ ಎಸ್ಎಂಇಗಳು ಶಾಂತ ವಾಗಿ ಮತ್ತು ಶಕ್ತಿಯುತವಾಗಿ ಕೆಲಸ ಮಾಡುತ್ತಿದ್ದು, ಈ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತಿವೆ. ಗುರಿ ಸಾಧಿಸುವ ಸಂದರ್ಭದಲ್ಲಿ ಸರಿಯಾದ ಬೆಂಬಲ ದೊರಕಿದರೆ ಏನೆಲ್ಲಾ ಸಾಧ್ಯವಾಗಬಹುದು ಎಂಬು ದಕ್ಕೆ ಈ ವಲಯದ ಅಭಿವೃದ್ಧಿ ಅತ್ಯುತ್ತಮ ಪುರಾವೆಯಾಗಿದೆ ಮತ್ತು ಕೋಟಕ್ ಈ ಪಯಣದ ಭಾಗವಾಗಿರಲು ಹೆಮ್ಮೆಪಡುತ್ತದೆ.