ಸ್ಯಾಮ್ಸಂಗ್ ನ ವೈವಿಧ್ಯಮಯ ಉತ್ಪನ್ನಗಳ ಮೂಲಕ ಬೆಂಗಳೂರಿನಲ್ಲಿ 5ಜಿ ವಾಣಿಜ್ಯ ಸೇವೆ ಪ್ರಾರಂಭಿಸಿದ ವೊಡಾಫೋನ್ ಐಡಿಯಾ
ವಿ ಸಂಸ್ಥೆಯು ಈಗಾಗಲೇ ಚಂಡೀಗಢ ಮತ್ತು ಪಾಟ್ನಾದಲ್ಲಿ 2025ರ ಏಪ್ರಿಲ್ ನಲ್ಲಿಯೇ 5ಜಿ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸಿದೆ. ಈ ಮೂರು ವಲಯಗಳಲ್ಲಿಯೂ ಅತ್ಯುತ್ತಮ 5ಜಿ ಅನುಭವವನ್ನು ಒದಗಿಸಲು ವಿ ಸ್ಯಾಮ್ಸಂಗ್ ನ ಸಣ್ಣ ಗಾತ್ರದ, ಶಕ್ತಿ- ದಕ್ಷ ಮತ್ತು ಹೆಚ್ಚಿನ ಟ್ರಾನ್ಸ್ ಮಿಟ್ ಶಕ್ತಿಯುಳ್ಳ ರೇಡಿಯೊಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ.


ಬೆಂಗಳೂರು: ಚಂಡೀಗಢ ಮತ್ತು ಪಾಟ್ನಾದಲ್ಲಿ ವಿ ಸಂಸ್ಥೆಯ 2ಜಿ, 4ಜಿ ಮತ್ತು 5ಜಿ ವಾಣಿಜ್ಯ ಜಾಲಗಳಿಗೆ ಸ್ಯಾಮ್ಸಂಗ್ ಸಂಸ್ಥೆಯು ತನ್ನ ಉದ್ಯಮ ಶ್ರೇಷ್ಠ ಉತ್ಪನ್ನಗಳ ಮೂಲಕ ಬಲ ತುಂಬಿದ್ದು, ಈ ಮೂಲಕ ಭಾರತದಲ್ಲಿ ಅತ್ಯುತ್ತಮ ಸಂಪರ್ಕ ಸೇವೆ ಒದಗಿಸಲು ನೆರವಾಗುತ್ತಿದೆ.
ಬೆಂಗಳೂರು, ಜೂನ್ 12, 2025: ಪ್ರಮುಖ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (ವಿ) ಇಂದು ಬೆಂಗಳೂರಿನಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂ. ಲಿಮಿಟೆಡ್ (ಸ್ಯಾಮ್ಸಂಗ್) ಜೊತೆಗಿನ ಸಹಭಾಗಿತ್ವದಲ್ಲಿ 5ಜಿ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದೆ.
ಬೆಂಗಳೂರು ಭಾರತದ ಪ್ರಮುಖ ಟೆಲಿಕಾಂ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, "ಭಾರತದ ಸಿಲಿಕಾನ್ ವ್ಯಾಲಿ" ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಮತ್ತು ಜಾಗತಿಕ ಐಟಿ ಕೇಂದ್ರವಾಗಿ ಜನಪ್ರಿಯತೆ ಗಳಿಸಿದೆ. ಇಲ್ಲಿ 5ಜಿ ವಾಣಿಜ್ಯ ಸೇವೆಗಳನ್ನು ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. 2024 ರಿಂದ ಈ ಎರಡು ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಬಿಹಾರ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ಭಾರತದ ಪ್ರಮುಖ ಟೆಲಿಕಾಂ ವಲಯಗಳಲ್ಲಿ ಸ್ಯಾಮ್ಸಂಗ್ ನ ಉದ್ಯಮ ಶ್ರೇಷ್ಠ ಉತ್ಪನ್ನಗಳ ಮೂಲಕ ಅತ್ಯುತ್ತಮ 5ಜಿ ಜಾಲದ ಸಂಪರ್ಕವನ್ನು ಒದಗಿಸುತ್ತಿವೆ ಮತ್ತು ವಿ ಸಂಸ್ಥೆಯ 2ಜಿ ಮತ್ತು 4ಜಿ ಜಾಲಗಳನ್ನು ಆಧುನೀಕರಣಗೊಳಿಸುತ್ತಿವೆ.
ಇದನ್ನೂ ಓದಿ: LeT Commander Saifullah Khalid: ಉಗ್ರರ ಪೋಷಕ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ರಿವೀಲ್!
ಈ ಸಹಭಾಗಿತ್ವದ ಭಾಗವಾಗಿ ವಿ ಸಂಸ್ಥೆಯು ಈಗಾಗಲೇ ಚಂಡೀಗಢ ಮತ್ತು ಪಾಟ್ನಾದಲ್ಲಿ 2025ರ ಏಪ್ರಿಲ್ ನಲ್ಲಿಯೇ 5ಜಿ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸಿದೆ. ಈ ಮೂರು ವಲಯಗಳಲ್ಲಿಯೂ ಅತ್ಯುತ್ತಮ 5ಜಿ ಅನುಭವವನ್ನು ಒದಗಿಸಲು ವಿ ಸ್ಯಾಮ್ಸಂಗ್ ನ ಸಣ್ಣ ಗಾತ್ರದ, ಶಕ್ತಿ- ದಕ್ಷ ಮತ್ತು ಹೆಚ್ಚಿನ ಟ್ರಾನ್ಸ್ ಮಿಟ್ ಶಕ್ತಿಯುಳ್ಳ ರೇಡಿಯೊಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ. ಈ ಉತ್ಪನ್ನ ಗಳು ಸೆಲ್ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ವಿದ್ಯುತ್ ಉಳಿತಾಯ ಮಾಡುವ ವೈಶಿಷ್ಟ್ಯ ಗಳನ್ನು ಒದಗಿಸುತ್ತವೆ. ಇದರಿಂದ ವಿಯ ಗ್ರಾಹಕರಿಗೆ ಉತ್ತಮ ಗ್ರಾಹಕ ಅನುಭವ ಮತ್ತು ಸುಸ್ಥಿರ ವಿಧಾನಗಳ ಮೂಲಕ ಸೇವೆ ದೊರೆಯುತ್ತದೆ.
ಈ ನಿಯೋಜನೆಗಾಗಿ ಸ್ಯಾಮ್ಸಂಗ್ ಸಂಸ್ಥೆಯು ವಿವಿಧ ಸ್ಪೆಕ್ಟ್ರಮ್ ಬ್ಯಾಂಡ್ ಗಳನ್ನು ನಿರ್ವಹಿಸುವ ವಿಶಾಲ ಶ್ರೇಣಿಯ ರೇಡಿಯೋಗಳನ್ನು ಒದಗಿಸಿದ್ದು, ಇದರಲ್ಲಿ 32T32R ಮ್ಯಾಸಿವ್ ಎಂಐಎಓ ರೇಡಿಯೋಗಳು, ರೇಡಿಯೋ ಆಕ್ಸೆಸ್ ನೆಟ್ವರ್ಕ್ (ಆರ್ ಎ ಎನ್) ಉತ್ಪನ್ನಗಳು, ಬೇಸ್ ಬ್ಯಾಂಡ್ ಮತ್ತು ವರ್ಚುವಲೈಸ್ಡ್ ಸೆಂಟ್ರಲ್ ಯೂನಿಟ್ (ವಿಸಿಯು) ಎಂದು ಕರೆಯಲ್ಪಡುವ ಸಾಫ್ಟ್ ವೇರ್ ಕಾರ್ಯಗಳು ಒಳಗೊಂಡಿವೆ.
ಕಂಪನಿಗಳು ದೇಶದ ಮೊದಲ ವರ್ಚುವಲೈಸ್ಡ್ ಬೇಸ್ ಸ್ಟೇಷನ್ ಕಂಟ್ರೋಲರ್ (ವಿ ಬಿ ಎಸ್ ಸಿ) ಅನ್ನು ಸಹ ಅಳವಡಿಸಿದ್ದು, ಇದು 2ಜಿ ಜಾಲದ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೂಲಕ ಜಾಲವನ್ನು ಅತ್ಯಾಧುನಿಕ ಸಾಫ್ಟ್ ವೇರ್ ಉತ್ಪನ್ನಗಳೊಂದಿಗೆ ಆಧುನೀ ಕರಣಗೊಳಿಸಲಾಗಿದೆ ಹಾಗೂ ಹಳೆಯ ತಂತ್ರಜ್ಞಾನ ಮತ್ತು ಸೇವೆಗಳಿಗೂ ನೆರವು ಒದಗುವಂತೆ ನೋಡಿಕೊಳ್ಳಲಾಗುತ್ತಿದೆ.
ನೆಟ್ ವರ್ಕ್ ಕೆಲಸಗಳ ವರ್ಚುವಲೀಕರಣದಿಂದ ವಿ ಸಂಸ್ಥೆಗೆ ನೆಟ್ ವರ್ಕ್ ನಿಯೋಜನೆಯನ್ನು ಸರಳಗೊಳಿಸಲು ಮತ್ತು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಹೆಚ್ಚಿನ ದಕ್ಷತೆ, ಕಡಿಮೆ ಕಾರ್ಯಾಚರಣೆ ವೆಚ್ಚ, ಉತ್ತಮ ಸಂಪನ್ಮೂಲ ಹಂಚಿಕೆ ನಿಯಂತ್ರಣ ಮುಂತಾದ ಪ್ರಯೋಜನ ದೊರಕಲಿದೆ ಮತ್ತು ಗ್ರಾಹಕ ತೃಪ್ತಿ ಹೆಚ್ಚಲಿದೆ. ಈ ವರ್ಚುವಲೀಕರಣದ ಅಳವಡಿಕೆ ಯೊಂದಿಗೆ ಆಪರೇಟರ್ ಗಳು ಸಾಫ್ಟ್ ವೇರ್ -ಆಧಾರಿತ ಮತ್ತು ಹೊಂದಿಕೊಳ್ಳುವ ನೆಟ್ ವರ್ಕ್ ಗಳನ್ನು ಸುಲಭವಾಗಿ ನಿರ್ಮಿಸಿಕೊಳ್ಳಬಹುದು ಮತ್ತು ಭವಿಷ್ಯ ಸಿದ್ಧ ನೆಟ್ ವರ್ಕ್ ಅನ್ನು ರೂಪಿಸಬಹುದು.
ಈ ಕುರಿತು ಮಾತನಾಡಿರುವ ವೊಡಾಫೋನ್ ಐಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಜಗ್ಬೀರ್ ಸಿಂಗ್ ಅವರು, “ಬೆಂಗಳೂರು, ಚಂಡೀಗಢ ಮತ್ತು ಪಾಟ್ನಾದಲ್ಲಿ ವಿ ಸಂಸ್ಥೆಯ 5ಜಿ ಸೇವೆಗಳು ಪ್ರಾರಂಭವಾಗಿರುವುದು ಗ್ರಾಹಕರಿಗೆ ಅತ್ಯುತ್ತಮವಾದ, ಹೆಚ್ಚು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಜೊತೆಗೆ ಸ್ಯಾಮ್ ಸಂಗ್ ಅನ್ನು ನಮ್ಮ ಹೊಸ ಪಾಲುದಾರನಾಗಿ ಪರಿಚಯಿಸುವ ಉದ್ದೇಶವೂ ಸಂಸ್ಥೆಗಿದೆ. ಸ್ಯಾಮ್ಸಂಗ್ ಜೊತೆಗಿನ ಸಹಭಾಗಿತ್ವದ ಮೂಲಕ ಉತ್ತಮ ಗ್ರಾಹಕ ಅನುಭವವನ್ನು ನೀಡುವುದು ಮತ್ತು ಇಂದಿನ ಡಿಜಿಟಲ್ ಸಂಪರ್ಕಿತ ಜಗತ್ತಿನಲ್ಲಿ ಅಗತ್ಯವಿರುವ ಹೆಚ್ಚುವರಿ ಮೊಬೈಲ್ ಬ್ರಾಡ್ ಬ್ಯಾಂಡ್ ಸಾಮರ್ಥ್ಯಗಳು ಮತ್ತು ಇತರ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಅಧ್ಯಕ್ಷ ಮತ್ತು ನೆಟ್ವರ್ಕ್ಸ್ ಬಿಸಿನೆಸ್ ಮುಖ್ಯಸ್ಥರಾದ ವೂಜುನ್ ಕಿಮ್ ಅವರು, “ಭಾರತ, ವಿಶೇಷವಾಗಿ ಬೆಂಗಳೂರು ಜಾಗತಿಕ ಡಿಜಿಟಲ್ ಪರಿವರ್ತನೆ ವಿಚಾರದಲ್ಲಿ ಬಹಳ ಮುಂಚೂಣಿಯಲ್ಲಿದೆ. ವಿಶ್ವದ ಅತ್ಯಂತ ಪ್ರಮುಖ ಐಟಿ ಮಾರುಕಟ್ಟೆಗಳಲ್ಲಿ ವಿಯ ಗ್ರಾಹಕ ರಿಗೆ ಅತ್ಯಾಧುನಿಕ ಸಂಪರ್ಕ ಸೇವೆಯನ್ನು ಒದಗಿಸುವ ವಿ ಸಂಸ್ಥೆಯ ಈ ಪ್ರಯಾಣದ ಭಾಗವಾಗಿ ರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಸ್ಯಾಮ್ಸಂಗ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಯೋಚಿಸುತ್ತದೆ ಮತ್ತು ಮೊಬೈಲ್ ಆಪರೇಟರ್ ಗಳ ಭವಿಷ್ಯದ ಅಗತ್ಯಗಳನ್ನು ಮೊದಲೇ ಊಹಿಸುತ್ತದೆ. ಈ ಸಹಭಾಗಿತ್ವದ ಮೂಲಕ ನಮ್ಮ ಸೃಜನಶೀಲ ಉತ್ಪನ್ನಗಳ ಮೂಲಕ ವಿಯ ಮೊಬೈಲ್ ಬಳಕೆದಾರರ ಬೇಡಿಕೆಗಳನ್ನು ಪೂರೈಸಲು ಮತ್ತು ಉದ್ಯಮದ ಬೆಳವಣಿಗೆಯನ್ನು ಸಾಧ್ಯ ವಾಗಿಸಲು ಸ್ಯಾಮ್ಸಂಗ್ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಹೇಳಿದರು.