Viral News: ಇದೆಂಥಾ ಹುಚ್ಚಾಟ?! ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದ ವ್ಯಕ್ತಿಗೆ ಬೈಯ್ದ ಮಹಿಳೆ; ಕಿಡಿಕಾರಿದ ನೆಟ್ಟಿಗರು
ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಬೈಕಿನಲ್ಲಿದ್ದ ವ್ಯಕ್ತಿಗೆ ತೀವ್ರ ಗಾಯವಾಗಿ ರಕ್ತಸೋರುತ್ತಿತ್ತು. ಆದರೆ ಕಾರು ಮಾಲಕಿ ಇದ್ಯಾವುದನ್ನೂ ಗಮನಿಸದೆ ಆತ ನಟನೆ ಮಾಡುತ್ತಿದ್ದಾನೆ ಎಂದು ನಿಂದಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಬೆಂಗಳೂರು: ಬೆಂಗಳೂರಿನ ಪೆಟ್ರೋಲ್ ಬಂಕ್ ಒಂದರ ಬಳಿ ಇತ್ತೀಚೆಗೆ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಬೈಕ್‌ನಲ್ಲಿದ್ದ ವ್ಯಕ್ತಿಗೆ ಗಾಯವಾಗಿ ರಕ್ತ ಸೋರುತ್ತಿದ್ದರೂ, ಕಾರಿನಲ್ಲಿದ್ದ ಮಹಿಳೆ ಮಾತ್ರ ಆತ ನಾಟಕ ಮಾಡುತ್ತಿದ್ದಾನೆ ಹೇಳಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ನೆಟ್ಟಿಗರು ಆ ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ನಗರದ ಪೆಟ್ರೋಲ್ ಬಂಕ್ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ. ಆದರೆ ಬೈಕ್‌ನಲ್ಲಿದ್ದ ವ್ಯಕ್ತಿ ರಸ್ತೆಯಲ್ಲಿ ನೋವಿನಿಂದ ನರಳುತ್ತಿದ್ದರೂ ಕಾರಿನ ಮಾಲಕಿ ಅವನನ್ನು ನಿಂದಿಸುತ್ತಾ 'ನಟನೆ' ಮಾಡುತ್ತಿದ್ದಾನೆ ಎಂದು ಆರೋಪಿಸುತ್ತಿರುವುದು ಕಂಡು ಬಂದಿದೆ.
ವರದಿ ಪ್ರಕಾರ, ಮಹಿಳೆಯ ಕಾರು ಪೆಟ್ರೋಲ್ ಬಂಕ್‌ನಿಂದ ಹೊರಬರುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಂಪರ್ ಮತ್ತು ಫೆಂಡರ್ ಸೇರಿದಂತೆ ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದ್ದು, ಭಾಗಶಃ ಮುರಿದುಹೋಗಿದೆ. ಅಪಘಾತದಲ್ಲಿ ಸಿಲುಕಿರುವ ರಾಯಲ್ ಎನ್‌ಫೀಲ್ಡ್ ಬೈಕ್‍ಗೆ ಯಾವುದೇ ಹಾನಿಯಾಗಿಲ್ಲ. ಆದರೆ ಬೈಕಿನಲ್ಲಿದ್ದ ವ್ಯಕ್ತಿಗೆ ಗಾಯವಾಗಿ ಬಾಯಿಯಿಂದ ರಕ್ತಸ್ರಾವವಾಗಿದೆ. ಆದರೆ ಮಹಿಳೆ ಕೋಪಗೊಂಡು ಬೈಕರ್ ಗಾಯಗೊಂಡಂತೆ ನಟಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಮಹಿಳೆ ವಿರುದ್ಧ ಕಿಡಿಕಾರಿದ್ದಾರೆ. ಅಪಘಾತಕ್ಕೆ ಯಾರೇ ಕಾರಣರಾಗಿದ್ದರೂ, ಗಾಯಗೊಂಡ ವ್ಯಕ್ತಿಯ ಬಗ್ಗೆ ಕನಿಕರ ತೋರದೆ ಆತನನ್ನು ಬೈದಿದ್ದಕ್ಕೆ ಅನೇಕರು ಮಹಿಳೆಯ ನಡವಳಿಕೆಯನ್ನು ಖಂಡಿಸಿದ್ದಾರೆ. ಅವಳು ಏನು ಹೇಳುತ್ತಿದ್ದಾಳೆ? ರಸ್ತೆಗಳಲ್ಲಿ ಇದೆಂಥ ಅಶಿಸ್ತಿನ ವರ್ತನೆ? ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರಾಜಾ ರಘುವಂಶಿ ಕೊಲೆ ಪ್ರಕರಣ; ಮದ್ವೆ ವಿಡಿಯೊದಲ್ಲಿ ಸಿಕ್ತು ಮಹತ್ವದ ಸುಳಿವು!
ಇದು ಅಧಿಕಾರ ದುರುಪಯೋಗದ ಸ್ಪಷ್ಟ ಪ್ರಕರಣವಾಗಿದೆ ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಯಾರ ತಪ್ಪು ಎಂಬುದರ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.