Share Market: ಸೆನ್ಸೆಕ್ಸ್- ನಿಫ್ಟಿ ಹೈ ಜಂಪ್; 1 ಲಕ್ಷ ರೂ. ಗಡಿಯತ್ತ ಚಿನ್ನ: ಯಾವ ಷೇರು ಲಾಭದಾಯಕ?
Stock Market: ಸೆನ್ಸೆಕ್ಸ್ ಸೋಮವಾರ ಬೆಳಗ್ಗೆ 1,026 ಅಂಕಗಳ ಗಡಿಯನ್ನು ದಾಟಿ ಶುಭಾರಂಭ ಮಾಡಿತು. ನಿಫ್ಟಿ 24,000 ಅಂಕಗಳ ಮಟ್ಟಕ್ಕಿಂತ ಮೇಲಕ್ಕೆ ಜಿಗಿಯಿತು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳು ಜಿಗಿಯಿತು. ಅಂತಿಮವಾಗಿ ಸೆನ್ಸೆಕ್ಸ್ 855 ಅಂಕ ಏರಿಕೊಂಡು 79,408 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 273 ಅಂಕ ಹೆಚ್ಚಳದೊಂದಿಗೆ 24,125ಕ್ಕೆ ಸ್ಥಿರವಾಯಿತು. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಮುಂಬೈ: ಸೆನ್ಸೆಕ್ಸ್ ಸೋಮವಾರ (ಏ. 21) ಬೆಳಗ್ಗೆ 1,026 ಅಂಕಗಳ ಗಡಿಯನ್ನು ದಾಟಿ ಶುಭಾರಂಭ ಮಾಡಿತು. ನಿಫ್ಟಿ 24,000 ಅಂಕಗಳ ಮಟ್ಟಕ್ಕಿಂತ ಮೇಲಕ್ಕೆ ಜಿಗಿಯಿತು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳು ಜಿಗಿಯಿತು. ಅಂತಿಮವಾಗಿ ಸೆನ್ಸೆಕ್ಸ್ 855 ಅಂಕ ಏರಿಕೊಂಡು 79,408 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು (Stock Market). ನಿಫ್ಟಿ 273 ಅಂಕ ಹೆಚ್ಚಳದೊಂದಿಗೆ 24,125ಕ್ಕೆ ಸ್ಥಿರವಾಯಿತು. ಭಾರತೀಯ ಷೇರು ಸೂಚ್ಯಂಕಗಳು ಜನವರಿ 6ರ ಬಳಿಕ ಇಂಥ ಏರಿಕೆಯನ್ನು ಇವತ್ತು ದಾಖಲಿಸಿವೆ ಎಂಬುದು ಗಮನಾರ್ಹ.
ಖ್ಯಾತ ಆರ್ಥಿಕ ತಜ್ಞರಾದ ರುಚಿರ್ ಶರ್ಮಾ ಅವರ ಪ್ರಕಾರ, ಹೂಡಿಕೆದಾರರು ಅಮರಿಕದ ಷೇರುಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ಭಾರತ ಮತ್ತು ಬ್ರೆಜಿಲ್‌ನಂತಹ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ವಾರದ ಗಳಿಕೆಯ ಲೆಕ್ಕಾಚಾರದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಜಾಗತಿಕ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದು 6% ಹೆಚ್ಚಳ ದಾಖಲಿಸಿದೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಗೆ ಆಮದು ತೆರಿಗೆ ಏರಿಕೆಯ ಬಿಸಿ ತಟ್ಟಿದೆ. ಅವುಗಳ ಗ್ಲೋಬಲೈಸೇಶನ್‌ಗೆ ಹೊಡೆತ ಬಿದ್ದಿದೆ. ಹೀಗಾಗಿ ಅವುಗಳ ಷೇರು ದರಗಳೂ ಕುಸಿಯುತ್ತಿವೆ. ಹೀಗಾಗಿ ಜಾಗತಿಕ ಹೂಡಿಕೆಯು ಭಾರತದಂತಹ ಪ್ರಗತಿಶೀಲ ಮಾರುಕಟ್ಟೆಗೆ ಹರಿಯುವ ನಿರೀಕ್ಷೆ ಉಂಟಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಜಿಗಿಯುತ್ತಿದೆ ಸೆನ್ಸೆಕ್ಸ್, ನಿಫ್ಟಿ; ಯಾವ ಸ್ಟಾಕ್ಸ್ ಖರೀದಿಸಿದ್ರೆ ಲಾಭ?
ಇವತ್ತು ಹೆಚ್ಚು ಲಾಭ ಗಳಿಸಿರುವ ಷೇರುಗಳ ಪಟ್ಟಿ
ಸ್ಪಂದನಾ ಸ್ಪೂರ್ತಿ ಫೈನಾನ್ಷಿಯಲ್ ಲಿಮಿಟೆಡ್: 20%
ಜಸ್ಟ್ ಡಯಲ್: 11%
ವೊಡಾಫೋನ್ ಐಡಿಯಾ: 10%
ಟಾಟಾ ಎಲೆಕ್ಸಿ: 9%
ಟೆಕ್ನೊ ಎಲೆಕ್ಟ್ರಿಕ್ ಆ್ಯಂಡ್ ಎಂಜಿನಿಯರಿಂಗ್: 8%
ಟೆಕ್ ಮಹೀಂದ್ರಾ: 5%
ಟ್ರೆಂಟ್: 4%
ಎಕ್ಸಿಸ್ ಬ್ಯಾಂಕ್: 2.53%
ಎಸ್‌ಬಿಐ: 2.48%
ನಷ್ಟಕ್ಕೀಡಾದ ಷೇರುಗಳು
ಅದಾನಿ ಪೋರ್ಟ್ಸ್
ಐಟಿಸಿ
ಭಾರ್ತಿ ಏರ್‌ಟೆಲ್
ಟೈಟನ್
ಹಿಂದೂ ಯುನಿಲಿವರ್
ಸನ್ ಫಾರ್ಮಾ
ಮುತ್ತೂಟ್ ಫೈನಾನ್ಸ್ ಪ್ರತಿ ಷೇರಿಗೆ 26 ರೂ. ಡಿವಿಡೆಂಡ್ ಘೋಷಿಸಿದೆ. ಡಿವಿಡೆಂಡ್ ವಿತರಣೆಗೆ ರೆಕಾರ್ಡ್ ಡೇಟ್ ಏಪ್ರಿಲ್ 25 ಆಗಿದ್ದು, ಅಷ್ಟರೊಳಗೆ ಷೇರು ಖರೀದಿಸುವವರಿಗೆ ಡಿವಿಡೆಂಡ್ ಕೂಡ ಸಿಗಲಿದೆ. ಏಂಜೆಲ್ ವನ್ ಷೇರಿನ ದರದಲ್ಲಿ ಇವತ್ತು 5.4% ಏರಿಕೆಯಾಗಿದ್ದು, ಕಂಪನಿಯು ಪ್ರತಿ ಷೇರಿಗೆ 26 ರೂ.ಗಳ ಡಿವಿಡೆಂಡ್ ಘೋಷಿಸಿದೆ.
ಈ ನಡುವೆ ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕ ರಾಬರ್ಟ್ ಕಿಯೊಸಾಕಿ ಅವರು, ಕೆಲವು ಭವಿಷ್ಯಗಳನ್ನು ಗ್ರಹಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಿಟ್ ಕಾಯಿನ್ ದರ ಈಗ 84 ಸಾವಿರ ಡಾಲರ್ ಇದೆ. ಇದು 2025ರಲ್ಲಿ 180 ಸಾವಿರ ಡಾಲರ್‌ನಿಂದ 200 ಸಾವಿರ ಡಾಲರ್ ತನಕ ಜಿಗಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಬರ್ಟ್ ಕಿಯೊಸಾಕಿ ಪ್ರಕಾರ, ಅಮೆರಿಕದ ಸಾಲ ಸಾರ್ವಕಾಲಿಕ ಎತ್ತರದ ಮಟ್ಟದಲ್ಲಿದ್ದು, ಅಮೆರಿಕ ಬಹುಶಃ ಗ್ರೇಟ್ ಡಿಪ್ರೆಶನ್‌ಗೆ ಕುಸಿಯಲಿದೆ. ಈಗಾಗಲೇ ಅಮರಿಕದಲ್ಲಿ ಪ್ರಮುಖ 10 ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನರು ಈ ರಾಜ್ಯಗಳನ್ನು ಬಿಟ್ಟು ವಲಸೆ ಹೋಗುತ್ತಿದ್ದಾರೆ.
ಹವಾಯ್, ಮಿಸ್ಸಿಸಿಪ್ಪಿ, ನ್ಯೂ ಮೆಕ್ಸಿಕೊ, ಅಲಸ್ಕಾ, ನೆವಡಾ, ವೆಸ್ಟ್ ವರ್ಜೀನಿಯಾ, ಲೂಯಿಸಿಯಾನಾ, ನ್ಯೂಯಾರ್ಕ್, ಇಲಿನೋಯ್ಸ್, ಕ್ಯಾಲಿಫೋರ್ನಿಯಾದಿಂದ ಜನರ ವಲಸೆ ಹೆಚ್ಚುತ್ತಿ ಎಂದಿದ್ದಾರೆ. ಆರ್ಥಿಕ ಹಿಂಜರಿತದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ದರಗಳು ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದಾರೆ.
ಕಳೆದ ಏಳು ದಿನಗಳಲ್ಲಿ ಮೂರು ದಿನ ಷೇರು ಮಾರುಕಟ್ಟೆಗೆ ರಜೆ ಇತ್ತು. ಆದರೆ ಉಳಿದ ನಾಲ್ಕೂ ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಗಣನೀಯವಾಗಿ ಚೇತರಿಸಿದೆ. ಅದರ ವಿವರ ಇಲ್ಲಿದೆ.
ಸೆನ್ಸೆಕ್ಸ್-ನಿಫ್ಟಿ ಚೇತರಿಕೆಯ ಹಾದಿ
21/4/2025: ಸೆನ್ಸೆಕ್ಸ್ 1,026 ಅಂಕ ಜಿಗಿತ: 79,575, ನಿಫ್ಟಿ 322 ಅಂಕ ಏರಿಕೆ, 24,173.
20/4/2025: ಭಾನುವಾರ ರಜೆ
19/4/2025: ಶನಿವಾರ ರಜೆ
18/4/2025: ಗುಡ್ ಫ್ರೈಡೆ ರಜೆ
17/4/2025: ಸೆನ್ಸೆಕ್ಸ್ 1,508 ಏರಿಕೆ: 78,553, ನಿಫ್ಟಿ 414 ಏರಿಕೆ, 23,851
16/4/2025: ಸೆನ್ಸೆಕ್ಸ್ 309 ಏರಿಕೆ: 77,044, ನಿಫ್ಟಿ 108 ಏರಿಕೆ, 23,437
15/4/2025: ಸೆನ್ಸೆಕ್ಸ್ 1,577 ಏರಿಕೆ: 76,734, ನಿಫ್ಟಿ 500 ಏರಿಕೆ, 23,328
ಇದರೊಂದಿಗೆ ಕಳೆದ ಏಳು ದಿನಗಳಲ್ಲಿ ಸೆನ್ಸೆಕ್ಸ್ 2,841 ಅಂಕಗಳು ಮತ್ತು ನಿಫ್ಟಿ 845 ಅಂಕ ಚೇತರಿಸಿದೆ.
ಇವತ್ತು ಸೆನ್ಸೆಕ್ಸ್ ಮತ್ತು ನಿಫ್ಟಿಯ ಏರಿಕೆಗೆ ಕಾರಣವೇನು ಎಂಬುದನ್ನು ನೋಡೋಣ.
ಮೊದಲನೆಯದಾಗಿ ಬ್ಯಾಂಕಿಂಗ್ ದಿಗ್ಗಜಗಳಾದ ICICI BANK ಮತ್ತು HDFC BANK ಷೇರುಗಳ ದರ ಏರಿಕೆ ಪುಷ್ಟಿ ನೀಡಿತು. ಈ ಬ್ಯಾಂಕ್‌ಗಳ ಉತ್ತಮ ಆದಾಯ ಗಳಿಕೆ ಸಕಾರಾತ್ಮಕ ಪ್ರಭಾವ ಬೀರಿತು. ಡಾಲರ್ ದುರ್ಬಲವಾಗಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಯ ಒಳಹರಿವಿನಲ್ಲಿ ಹೆಚ್ಚಳದ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಜಿಗಿಯುತ್ತಿದೆ.
1 ಲಕ್ಷ ರೂ. ಗಡಿಯನ್ನು ಮುಟ್ಟಲು ಚಿನ್ನಕ್ಕೆ ಇನ್ನು ಹೆಚ್ಚು ದೂರವಿಲ್ಲ. ಬಂಗಾರದ ದರದಲ್ಲೂ ಸೋಮವಾರ 1,500 ರೂ. ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ 24 ಕ್ಯಾರಟ್ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 96,747 ರೂ. ಏರಿಕೆಯಾಗಿದೆ. ಬೆಳ್ಳಿ ದರದಲ್ಲೂ ಪ್ರತಿ ಕೆಜಿಗೆ 693 ರೂ. ಹೆಚ್ಚಳವಾಗಿದ್ದು, 95,730 ರೀ.ಗೆ ವೃದ್ಧಿಸಿದೆ.
ಹಾಗಾದ್ರೆ ಈಗ ಯಾವ ಷೇರುಗಳನ್ನು ಖರೀದಿಸಿದ್ರೆ ಲಾಭ ಸಿಗಬಹುದು ಎಂಬ ಪ್ರಶ್ನೆ ನಿಮ್ಮದಾಗಿರಬಹುದಲ್ಲವೇ? ಈ ಪ್ರಶ್ನೆಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ಹೋಲ್ಡಿಂಗ್ಸ್ ಏನೆನ್ನುತ್ತದೆ ಎಂಬುದದನ್ನು ನೋಡೋಣ.
ನೊಮುರಾ ಸಂಸ್ಥೆಯ ಮುನ್ನೋಟದ ಪ್ರಕಾರ ನಿಫ್ಟಿಯು ಮಾರ್ಚ್ 2026ರ ವೇಳೆಗೆ 24,970 ಕ್ಕೆ ಮುಟ್ಟಲಿದೆ. ಆದರೆ ಇವತ್ತಿನ ವೇಗವನ್ನು ಗಮನಿಸಿದ್ರೆ, ಮಾರ್ಚ್ ತನಕವೂ ಕಾಯಬೇಕಿಲ್ಲ ಎಂದನ್ನಿಸುತ್ತಿದೆ. ಇರಲಿ.
ನೊಮುರಾ ಪ್ರಕಾರ ಲಾಭದಾಯಕ ಷೇರುಗಳು
ಎಕ್ಸಿಸ್ ಬ್ಯಾಂಕ್
ಐಸಿಐಸಿಐ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಬಜಾಜ್ ಫೈನಾನ್ಸ್
ಗೋದ್ರೇಜ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್
ರಿಲಯನ್ಸ್ ಇಂಡಸ್ಟ್ರೀಸ್
ಮಹೀಂದ್ರಾ ಆಂಡ್ ಮಹೀಂದ್ರಾ
ಟಾಟಾ ಪವರ್
ನೊಮುರಾ ಪ್ರಕಾರ ಸ್ಮಾಲ್/ಮಿಡ್ ಕ್ಯಾಪ್ ಷೇರುಗಳಲ್ಲಿ ಆಯ್ಕೆ
ಫೆಡರಲ್ ಬ್ಯಾಂಕ್
ಮ್ಯಾರಿಕೊ
ಲುಪಿನ್
ಡಿಕ್ಸಾನ್
ನೊಮುರಾ ಪ್ರಕಾರ ಬುಲ್ಲಿಶ್ ಆಗಿರುವ ಸೆಕ್ಟರ್
ಆಟೊಮೊಬೈಲ್
ರಿಯಲ್ ಎಸ್ಟೇಟ್
ಕನ್ಸಮ್ಷನ್
ನೊಮುರಾ ಪ್ರಕಾರ ಎಚ್ಚರ ವಹಿಸಬೇಕಾದ ಸೆಕ್ಟರ್‌ಗಳು
ರಫ್ತು
ಐಟಿ
ಕ್ಯಾಪೆಕ್ಸ್ ಹೆವಿ ಇಂಡಸ್ಟ್ರೀಸ್
ಮೋತಿಲಾಲ್ ಓಸ್ವಾಲ್ ಪ್ರಕಾರ 2025, April 21ರ ಬಳಿಕ ಖರೀದಿಸಬಹುದಾದ ಷೇರುಗಳು
Stock: HAL: CMP: 4,220/-
Target price: 5,100/-
Upside: 21%
Stock: Castrol: CMP: 202/-
Target price: 260/-
Upside: 29%