Keshav Maharaj: ದಕ್ಷಿಣ ಆಫ್ರಿಕಾ ಪರ ನೂತನ ದಾಖಲೆ ಬರೆದ ಕೇಶವ್ ಮಹಾರಾಜ್
167 ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 2ನೇ ದಿನದಾಟಕ್ಕೆ ಒಂದು ವಿಕೆಟ್ಗೆ 49 ರನ್ ಬಾರಿಸಿದ್ದು, ಒಟ್ಟಾರೆ 216 ರನ್ ಮುನ್ನಡೆಯಲ್ಲಿದೆ. ಮೊದಲ ಇನಿಂಗ್ಸ್ನಲ್ಲಿ ಜಿಂಬಾಬ್ವೆ ಪರ ಸೇನ್ ವಿಲಯಮ್ಸನ್ ಶತಕ ಬಾರಿಸಿ ಮಿಂಚಿದ್ದರು. 16 ಬೌಂಡರಿ ನೆರವಿನಿಂದ 137ರನ್ ಬಾರಿಸಿದ್ದರು.


ಬುಲವಾಯೊ: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್(Keshav Maharaj) ಅವರು ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಜಿಂಬಾಬ್ವೆ(Zimbabwe) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ನಿರ್ಮಿಸಿದರು. ಎಡಗೈ ಸ್ಪಿನ್ನರ್ ಆಗಿರುವ ಮಹಾರಾಜ್ 59 ಟೆಸ್ಟ್ ಪಂದ್ಯಗಳಿಂದ ಒಟ್ಟು 202 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ 11 ಐದು ವಿಕೆಟ್ ಗೊಂಚಲು ಮತ್ತು ಒಂದು ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದಾರೆ.
ಜಿಂಬಾಬ್ವೆ(ZIM vs RSA) ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕೀಳುವ ಮೂಲಕ ಕೇಶವ್ ಮಹಾರಾಜ್ ಈ ಸಾಧನೆಗೈದರು. ಮಹಾರಾಜ್ ಮತ್ತು ವಿಯಾನ್ ಮಲ್ದರ್ (50ಕ್ಕೆ4) ಅಮೋಘ ಬೌಲಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 167 ರನ್ಗಳ ಮುನ್ನಡೆ ಸಾಧಿಸಿತು.
167 ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 2ನೇ ದಿನದಾಟಕ್ಕೆ ಒಂದು ವಿಕೆಟ್ಗೆ 49 ರನ್ ಬಾರಿಸಿದ್ದು, ಒಟ್ಟಾರೆ 216 ರನ್ ಮುನ್ನಡೆಯಲ್ಲಿದೆ. ಮೊದಲ ಇನಿಂಗ್ಸ್ನಲ್ಲಿ ಜಿಂಬಾಬ್ವೆ ಪರ ಸೇನ್ ವಿಲಯಮ್ಸನ್ ಶತಕ ಬಾರಿಸಿ ಮಿಂಚಿದ್ದರು. 16 ಬೌಂಡರಿ ನೆರವಿನಿಂದ 137ರನ್ ಬಾರಿಸಿದ್ದರು.
ದಕ್ಷಿಣ ಆಫ್ರಿಕಾ ಪರ ಲುವಾನ್ ಡ್ರೆ ಪ್ರಿಟೋರಿಯಸ್(153) ಮತ್ತು ಕಾರ್ಬಿನ್ ಬಾಶ್ ಅಜೇಯ 100 ರನ್ ಹೊಡೆದರು. ಬಾಸ್ ಅವರ ಚೊಚ್ಚಲ ಶತಕ ಇದಾಗಿದೆ. ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 418 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಜಿಂಬಾಬ್ವೆ 67.4 ಓವರ್ಗಳಲ್ಲಿ 251 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಇದನ್ನೂ ಓಇ IND vs ENG 2nd Test: ದ್ವಿತೀಯ ಟೆಸ್ಟ್ಗೂ ಮುನ್ನ ಟೀಮ್ ಇಂಡಿಯಾ ಸೇರಿದ ಯುವ ಸ್ಪಿನ್ನರ್
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್: 9ಕ್ಕೆ418 ಡಿಕ್ಲೇರ್(ಪ್ರಿಟೋರಿಯಸ್153, ಕಾರ್ಬಿನ್ ಬಾಶ್ 100* ತನಕಾ ಚಿವಂಗಾ 83ಕ್ಕೆ 4, ಮುಜರಬಾನಿ 59ಕ್ಕೆ 2. ಜಿಂಬಾಬ್ವೆ, ಮೊದಲ ಇನಿಂಗ್ಸ್; 67.4 ಓವರ್ಗಳಲ್ಲಿ 251 (ಸೀನ್ ವಿಲಿಯಮ್ಸ್ 137, ಕ್ರೇಗ್ ಇರ್ವಿನ್ 36, ಕೊಡಿ ಯೂಸುಫ್ 42ಕ್ಕೆ3, ವಿಯಾನ್ ಮಲ್ದರ್ 50ಕ್ಕೆ4, ಕೇಶವ್ ಮಹಾರಾಜ್ 70ಕ್ಕೆ3). ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್: 13 ಓವರ್ಗಳಲ್ಲಿ 1 ವಿಕೆಟ್ಗೆ 49 (ಟೋನಿ ಡಿ ಝಾರ್ಜಿ ಬ್ಯಾಟಿಂಗ್ 22, ವಿಯಾನ್ ಮಲ್ದರ್ ಬ್ಯಾಟಿಂಗ್ 25).