Shefali Jariwala: ಅಗಲಿದ ಪ್ರೀತಿಯ ಮಡದಿಯ ನೆನೆದು ಕಣ್ಣೀರಿಟ್ಟ ಶೆಫಾಲಿ ಪತಿ! ವಿಡಿಯೊ ಇಲ್ಲಿದೆ
Shefali Jariwala death: ಶೆಫಾಲಿ ಜರಿವಾಲಾ ಅವರು ಹಠಾತ್ ಹೃದಯಾಘಾತದಿಂದ ನಿಧರರಾಗಿದ್ದಾರೆ. ಜೂನ್ 27 ರಂದು ಅವರಿಗೆ ಹೃದಯಾಘಾತ ಸಂಭವಿಸಿದ್ದು ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಆಘಾತ ತಂದ ವಿಚಾರವಾಗಿದೆ. ಇದೀಗ ಶೆಫಾಲಿ ಅವರ ಪತಿ ಪರಾಗ್ ತ್ಯಾಗಿ ಪತ್ನಿಯ ಅಗಲುವಿಕೆ ನೋವಿನಲ್ಲಿದ್ದು ಈ ನಡುವೆಯೂ ಮಾಧ್ಯಮದ ಮುಂದೆ ಬಂದು ಹೇಳಿಕೆಯೊಂದನ್ನು ನೀಡಿದ್ದಾರೆ.


ಮುಂಬೈ: ಬಾಲಿವುಡ್ನ ಖ್ಯಾತ ನಟಿ, ಮಾಡೆಲ್ ಹಾಗೂ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ (Shefali Jariwala's) ಅವರು ಹಠಾತ್ ಹೃದಯಾಘಾತದಿಂದ ನಿಧರರಾಗಿದ್ದಾರೆ. ಜೂನ್ 27 ರಂದು ಅವರಿಗೆ ಹೃದಯಾಘಾತ ಸಂಭವಿಸಿದ್ದು ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಆಘಾತ ತಂದ ವಿಚಾರವಾಗಿದೆ. ಇದೀಗ ಶೆಫಾಲಿ ಅವರ ಪತಿ ಪರಾಗ್ ತ್ಯಾಗಿ (Parag Tyagi) ಪತ್ನಿಯ ಅಗಲಿಕೆಯ ನೋವಿನಲ್ಲಿದ್ದು ಈ ನಡುವೆಯೂ ಮಾಧ್ಯಮದ ಮುಂದೆ ಬಂದು ಹೇಳಿಕೆಯೊಂದನ್ನು ನೀಡಿದ್ದಾರೆ. ಪತ್ನಿಯ ಸಾವಿನ ನೋವು ಇಡೀ ಕುಟುಂಬಕ್ಕೆ ಕಾಡಿದ್ದು ಈ ಬಗ್ಗೆ ಹೆಚ್ಚೇನು ಹೇಳಲಾಗದು, ನಮ್ಮ ವೈಯಕ್ತಿಕ ಜೀವನಕ್ಕೂ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಂಡು ಕೈ ಮುಗಿದು ಬೇಡಿಕೊಂಡ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪತ್ನಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ನಿಧನ ಪತಿ ಪರಾಗ್ ತ್ಯಾಗಿ ಅವರಿಗೆ ದೊಡ್ಡ ಆಘಾತ ವಾಗಿದೆ. ಪತ್ನಿಯ ಅಂತ್ಯ ಕ್ರಿಯೆಯ ನಂತರ ಅವರು ಮಾಧ್ಯಮದ ಮುಂದೆ ಕಾಣಿಸಿಕೊಂಡು ಕೈಜೋಡಿಸಿ ಬೇಡಿಕೊಂಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶೆಫಾಲಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ಮಾಧ್ಯಮದ ಮುಂದೆ ಅವರು ಮನವಿ ಮಾಡಿದ್ದಾರೆ. ಪರಾಗ್ ಅವರು ಭಾವುಕರಾಗಿ ಅಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಪರಾಗ್ ತ್ಯಾಗಿ ವಿಡಿಯೊ ಇಲ್ಲಿದೆ
ಅದೇ ರೀತಿ ಶೆಫಾಲಿ ಜರಿವಾಲಾ ಅವರ ಮೊದಲ ಪತಿ ಹರ್ಮೀತ್ ಸಿಂಗ್ ಅವರು ಅಂತಿಮ ವಿಧಿ ವಿದಾಯ ಸಂಪ್ರದಾಯಕ್ಕೆ ಬರಲು ಸಾಧ್ಯವಾಗದ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿ ಕೊಂಡಿದ್ದಾರೆ. ಯುರೋಪಿನಲ್ಲಿ ಇರುವುದರಿಂದ, ಅಂತ್ಯಕ್ರಿಯೆಗೆ ಹಾಜರಾಗಲು ಸಾಧ್ಯವಾಗ ದಿರುವುದು ನನಗೆ ನೋವಿನ ಸಂಗತಿಯಾಗಿದೆ. ಈ ಸಮಯದಲ್ಲಿ ನಾನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ಅಭಿನಯದ ‘ಕ್ಯಾಪಿಟಲ್ ಸಿಟಿ’ ಚಿತ್ರ ಜು.4ಕ್ಕೆ ರಿಲೀಸ್
ಶೆಫಾಲಿ ಜರಿವಾಲಾ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಪರಾಗ್ ತ್ಯಾಗಿ ಅವರನ್ನು ಮರು ವಿವಾಹವಾಗಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಪರಾಗ್ ಅವರ ಜೊತೆ ಸ್ನೇಹ ಸಂಬಂಧ ಇದ್ದು ಬಳಿಕ ಇವರಿಬ್ಬರು 4 ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ವಿವಾಹವಾದರು. ಈ ದಂಪತಿ ಹಲವಾರು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.
ಶೆಫಾಲಿ ಅವರು ಆಲ್ಬಮ್ ಸಾಂಗ್, ಸಿನಿಮಾಗಳಲ್ಲಿ ಕೂಡ ಪ್ರಸಿದ್ಧಿ ಪಡೆದಿದ್ದಾರೆ. ಕಾಂತಾಲಗಾ ರೀಮಿಕ್ಸ್ ವಿಡಿಯೊ ಮೂಲಕ ಅವರು ಹೆಚ್ಚು ಜನಪ್ರಿಯರಾಗಿದ್ದರು. ಬಾಲಿವುಡ್ ಕೆಲವು ಸಿನಿ ಮಾದಲ್ಲಿ ಕೂಡ ಕೂಡ ಅಭಿನಯಿಸಿದ್ದು ನಟಿ ಶೆಫಾಲಿ ಜರಿವಾಲಾ ಅವರು ಇತ್ತೀಚೆಗೆ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು.