Wayne Larkins: 85 ಶತಕ ಬಾರಿಸಿದ್ದ ಇಂಗ್ಲೆಂಡ್ನ ವೇಯ್ನ್ ಲಾರ್ಕಿನ್ಸ್ ನಿಧನ
1982 ರ ಬಂಡಾಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಲಾಗಿತ್ತು.ಇದರಂದಾಗಿ ಅವರಿಗೆ ರಾಷ್ಟ್ರೀಯ ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಕೈತಪ್ಪಿತ್ತು.1978 ರಿಂದ 1985 ರ ನಡುವೆ ದೇಶೀಯ ಕ್ರಿಕೆಟ್ನಲ್ಲಿ ಪ್ರತಿ ಋತುವಿನಲ್ಲಿ ಲಾರ್ಕಿನ್ಸ್ 1,000 ಪ್ರಥಮ ದರ್ಜೆ ರನ್ಗಳನ್ನು ದಾಟಿದ್ದರು.


ಲಂಡನ್: ಎಪ್ಪತ್ತರ ದಶಕದಲ್ಲಿ ಇಂಗ್ಲೆಂಡ್ ಮತ್ತು ಮತ್ತು ನಾರ್ಥಾಂಪ್ಟನ್ಶೈರ್ ತಂಡದ ಬ್ಯಾಟ್ಸ್ಮನ್ ಆಗಿದ್ದ ವೇಯ್ನ್ ಲಾರ್ಕಿನ್ಸ್(71) ವಯೋಸಹಜ ಕಾಯಿಲೆಗಳಿಂದ ನಿಧನರಾದರು. "ನೆಡ್" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಲಾರ್ಕಿನ್ಸ್(Wayne Larkins), 1979 ಮತ್ತು 1991 ರ ನಡುವೆ 13 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿದ್ದರು. 1979 ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.
1982 ರ ಬಂಡಾಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಲಾಗಿತ್ತು.ಇದರಂದಾಗಿ ಅವರಿಗೆ ರಾಷ್ಟ್ರೀಯ ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಕೈತಪ್ಪಿತ್ತು. ತಮ್ಮ ವರ್ಣರಂಜಿತ ಆಫ್-ಫೀಲ್ಡ್ ಪಾತ್ರ ಮತ್ತು ಸ್ಟ್ರೋಕ್ ಪ್ಲೇಗೆ ಹೆಸರುವಾಸಿಯಾದ ಲಾರ್ಕಿನ್ಸ್, ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ನಾರ್ಥಾಂಪ್ಟನ್ಶೈರ್ನೊಂದಿಗೆ ಕಳೆದರು, ಕ್ಲಬ್ಗಾಗಿ 700 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದರು. ನಂತರ ಅವರು ಡರ್ಹ್ಯಾಮ್ಗೆ ತೆರಳಿದರು. ಒಟ್ಟು 40,000 ರನ್ ಮತ್ತು 85 ಶತಕಗಳನ್ನು ಗಳಿಸಿ ವೃತ್ತಿಜೀವನವನ್ನು ಕೊನೆಗೊಳಿಸಿದರು. 1978 ರಿಂದ 1985 ರ ನಡುವೆ ಪ್ರತಿ ಋತುವಿನಲ್ಲಿ ಲಾರ್ಕಿನ್ಸ್ 1,000 ಪ್ರಥಮ ದರ್ಜೆ ರನ್ಗಳನ್ನು ದಾಟಿದ್ದರು.
ಇದನ್ನೂ ಓದಿ Dilip Doshi: ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ
"ನೆಡ್ ತಾನು ಭೇಟಿಯಾದ ಪ್ರತಿಯೊಬ್ಬರನ್ನು ಪ್ರೀತಿಸುತ್ತಿದ್ದನು. ಮತ್ತು ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. ನಾವು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಇಡುತ್ತೇವೆ" ಎಂದು ಪತ್ನಿ ಡೆಬ್ಬಿ ಹೇಳಿದ್ದಾರೆ.
ಸಿಕ್ಸರ್ ಬಾರಿಸಿದ ಮರು ಕ್ಷಣವೇ ಸಾವನ್ನಪ್ಪಿದ ಕ್ರಿಕೆಟಿಗ
ಕ್ರಿಕೆಟ್ ಪಂದ್ಯವೊಂದರಲ್ಲಿ ಸಿಕ್ಸರ್ ಬಾರಿಸಿದ ಮರು ಕ್ಷಣವೇ ಬ್ಯಾಟರ್ ಒಬ್ಬ ತಕ್ಷಣವೇ ಯುವಕನೊಬ್ಬ ಹೃದಯಾಘಾತದಿಂದ(Heart Attack) ಮೃತಪಟ್ಟಿರುವ ಘಟನೆ ಪಂಜಾಬ್ನ ಫಿರೋಜ್ಪುರದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹರ್ಜೀತ್ ಸಿಂಗ್(Harjeet Singh) ಎಂದು ಗುರುತಿಸಲಾಗಿದೆ. ಈ ಹೃದಯವಿದ್ರಾವಕ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ ಹರ್ಜೀತ್ ಸಿಂಗ್, ಸಿಕ್ಸರ್ ಬಾರಿಸಿದ ಬಳಿಕ ನಾನ್ಸ್ಟ್ರೈಕರ್ ಬ್ಯಾಟರ್ನತ್ತ ಮಾತನಾಡಲು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದ ಬಳಿಕ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.