Operation Midnight Hammer: ಇರಾನ್‌ನ ಪರಮಾಣು ನೆಲೆಗಳ ಮೇಲೆ ಬಿ-2 ಬಾಂಬರ್ ದಾಳಿ ಮಾಡಿದ ವಿಡಿಯೊ ರಿಲೀಸ್ ಮಾಡಿದ ಅಮೆರಿಕ
Israel-Iran Conflict: ಅಮೆರಿಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಲು ಆಪರೇಷನ್ ಮಿಡ್‌ನೈಟ್ ಹ್ಯಾಮರ್‌ನಲ್ಲಿ ಭಾಗಿಯಾಗಿರುವ ಬಿ -2 ಸ್ಪಿರಿಟ್ ಬಾಂಬರ್‌ಗಳು ಮಿಸೌರಿ ಬಳಿಯ ವೈಟ್‌ಮ್ಯಾನ್ ವಾಯುಪಡೆಯ ನೆಲೆಯಿಂದ ಹೊರಟ ವಿಡಿಯೊವನ್ನು ಬಿಡುಗಡೆ ಮಾಡಿದೆ. ಮುಖ್ಯ ಸ್ಟ್ರೈಕ್ ಪ್ಯಾಕೇಜ್‌ನ ಏಳು ಸ್ಟೆಲ್ತ್ ಬಾಂಬರ್‌ಗಳು ಸುರಕ್ಷಿತವಾಗಿ ಮರಳಿವೆ ಎಂದು ಅಮೆರಿಕ ಹೇಳಿಕೊಂಡಿದೆ.


ವಾಷಿಂಗ್ಟನ್: ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ಸೇನೆಯು ಬಾಂಬ್ ದಾಳಿ ನಡೆಸಿ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಇದೀಗ ಅಮೆರಿಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಲು ಆಪರೇಷನ್ ಮಿಡ್‌ನೈಟ್ ಹ್ಯಾಮರ್ (Operation Midnight Hammer)ನಲ್ಲಿ ಭಾಗಿಯಾಗಿರುವ ಬಿ -2 ಸ್ಪಿರಿಟ್ ಬಾಂಬರ್‌ಗಳು (B-2 Spirit bombers) ಮಿಸೌರಿ ಬಳಿಯ ವೈಟ್‌ಮ್ಯಾನ್ ವಾಯುಪಡೆಯ ನೆಲೆಯಿಂದ ಹೊರಟ ವಿಡಿಯೊವನ್ನು ಬಿಡುಗಡೆ ಮಾಡಿದೆ. ಮುಖ್ಯ ಸ್ಟ್ರೈಕ್ ಪ್ಯಾಕೇಜ್‌ನ ಏಳು ಸ್ಟೆಲ್ತ್ ಬಾಂಬರ್‌ಗಳು ನಿರಂತರವಾಗಿ ಹಾರಾಟ ನಡೆಸಿ ಬಾಂಬ್‌ಗಳನ್ನು ಬೀಳಿಸಿ ಸುರಕ್ಷಿತವಾಗಿ ಮರಳಿವೆ ಎಂದು ಅಮೆರಿಕ ಹೇಳಿಕೊಂಡಿದೆ.
ವಿಡಿಯೊದಲ್ಲಿ ಬಿ-2 ಬಾಂಬರ್ ವಿಮಾನವು ವೈಟ್‌ಮ್ಯಾನ್‌ನಲ್ಲಿರುವ ವಿಮಾನ ಹ್ಯಾಂಗರ್‌ನಿಂದ ಹೊರಬಂದು ಬೆಳಗ್ಗೆ 12:01ಕ್ಕೆ ಟೇಕ್‌ಆಫ್‌ಗೆ ಸಿದ್ಧತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ನಂತರ ಸ್ಪಿರಿಟ್ ಬಾಂಬರ್‌ಗಳು ವಾಯುನೆಲೆಯಲ್ಲಿ ಇಳಿಯುತ್ತಿರುವುದೂ ಕಂಡುಬಂದಿದೆ.
ಕಾರ್ಯಾಚರಣೆ ಜೂ. 21ರ ಬೆಳಗ್ಗೆ12 ಗಂಟೆಗೆ ಪ್ರಾರಂಭವಾಯಿತು ಮತ್ತು ಬಿ-2 ವಿಮಾನಗಳು ಮರುದಿನ ವೈಟ್‌ಮನ್ ನೆಲೆಯಲ್ಲಿ ಮತ್ತೆ ಬಂದಿಳಿದವು. ಈ ಕಾರ್ಯಾಚರಣೆ 37 ಗಂಟೆಗಳ ಕಾಲ ನಡೆಯಿತು. 2ನೇ ಅತಿ ಉದ್ದದ ಬಿ-2 ವಿಮಾನ ಇದಾಗಿದೆ. ಅಫ್ಘಾನಿಸ್ತಾನದಲ್ಲಿ ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ (OEF)ನ ಆರಂಭಿಕ ದಿನಗಳಲ್ಲಿ ಬಿ-2 ವಿಮಾನಗಳು 44 ಗಂಟೆಗಳ ಕಾಲ ಹಾರಾಟ ನಡೆಸಿದ್ದವು.
ಅಮೆರಿಕ ರಿಲೀಸ್ ಮಾಡಿದ ವಿಡಿಯೊ ಇಲ್ಲಿದೆ:
BREAKING: The US just released footage of B-2 stealth bombers before striking Iran’s nuclear sites — taking off and returning. pic.twitter.com/Occy6KIrK4
— Hananya Naftali (@HananyaNaftali) June 23, 2025
ಈ ಸುದ್ದಿಯನ್ನೂ ಓದಿ: Israel-Iran conflict: ಇಸ್ರೇಲ್ ದಾಳಿಯಲ್ಲಿ ಇರಾನ್‌ನ 3 ಪ್ರಮುಖ ಪರಮಾಣು ತಾಣಗಳು ಧ್ವಂಸ
ಬಿ-2 ವಿಮಾನಗಳು ಜಿಬಿಯು-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್(MOP) ಹೊತ್ತುಕೊಂಡು ಹಾರಿದ್ದವು. ಇದು ಅಮೆರಿಕದ ಬಂಕರ್-ಬಸ್ಟರ್ ಬಾಂಬ್ ಆಗಿದ್ದು, ಇದನ್ನು ಸ್ಪಿರಿಟ್ ಬಾಂಬರ್ ಮಾತ್ರ ನಿರ್ವಹಿಸಬಹುದು. ಜಿಬಿಯು-57 30,000 ಪೌಂಡ್‌ಗಳ ಬೃಹತ್ ಬಾಂಬ್ ಆಗಿದ್ದು, ಇದರ ಪರಿಣಾಮ 200 ಅಡಿವರೆಗೆ ವ್ಯಾಪಿಸುತ್ತದೆ.
ಏನಿದು ಆಪರೇಷನ್ ಮಿಡ್‌ನೈಟ್ ಹ್ಯಾಮರ್?
ಮುಖ್ಯ ದಾಳಿ ಪ್ಯಾಕೇಜ್‌ನಲ್ಲಿ ಏಳು ಬಿ-2 ಬಾಂಬರ್‌ಗಳು ಮತ್ತು ಪ್ರತಿ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಇರಾನ್‌ನ ಫೋರ್ಡೊ, ನತಾನ್ಜ್ ಮತ್ತು ಇಸ್ಪಹಾನ್ ಅಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ಈ ದಾಳಿ ನಡೆಸಿದೆ. ʼʼಫೋರ್ಡೊ ಮೇಲೆ 6 ಬಿ-2 ಬಾಂಬರ್ ಯುದ್ದ ವಿಮಾನಗಳು 12 ಬಂಕರ್ ನಿಷ್ಕ್ರಿಯಗೊಳಿಸುವ ಬಾಂಬ್‌ಗಳನ್ನು ಬೀಳಿಸಿವೆ. ಅದೇ ರೀತಿ ನತಾನ್ಜ್ ಮತ್ತು ಇಸ್ಪಹಾನ್ ಗುರಿಯಾಗಿಸಿ ನೌಕಾಪಡೆಯ ಜಲಾಂತರ್ಗಾಮಿ ನೌಕೆಗಳು 30 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿವೆ. ನತಾನ್ಜ್ ಮತ್ತು ಇಸ್ಪಹಾನ್ ಮೇಲೆ ಬೀ-2 2 ಬಂಕರ್ ನಿಷ್ಕ್ರಿಯ ಬಾಂಬ್‌ಗಳನ್ನು ಬೀಳಿಸಿವೆʼʼ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಬಿ-2 ಜಗತ್ತಿನ ಅತ್ಯಂತ ದುಬಾರಿ ಯುದ್ಧ ವಿಮಾನ
ಬಿ-2 ಜಗತ್ತಿನ ಅತ್ಯಂತ ದುಬಾರಿ ಯುದ್ಧ ವಿಮಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಹಸ್ಯ ಬಾಂಬರ್‌ಗಳನ್ನು ನಾರ್ತ್‌ರೊಪ್ ನಿರ್ಮಿಸಿದೆ. ಇದು ಬರೋಬ್ಬರಿ 13,500 ಕಿಲೋ ಗ್ರಾಂ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.