ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಅಮೆರಿಕ ಅಧ್ಯಕ್ಷ ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು; ಎರಡೆರಡು ಬಾರಿ ಯತ್ನ? ಇಸ್ರೇಲ್‌ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು?

ಟ್ರಂಪ್‌ ನಿರ್ಣಾಯಕ ನಾಯಕರಾಗಿದ್ದಾರೆ. ಅವರು ಇರಾನ್‌ನ ಪರಮಾಣು ನೀತಿಗೆ ವಿರುದ್ಧವಾಗಿ ನಿಂತಿದ್ದಾರೆ. ಅಣ್ವಸ್ತ್ರ ಹೊಂದುವಂತಿಲ್ಲ ಎಂದು ಇರಾನ್‌ಗೆ ಟ್ರಂಪ್‌ ಖಡಾ ಖಂಡಿತವಾಗಿ ಹೇಳಿದ್ದಾರೆ. ಅವರು ಇರಾನ್‌ ಮೇಲೆ ಭಾರೀ ಒತ್ತಡವನ್ನೇ ಹಾಕಿದ್ದಾರೆ. ಹೀಗಿರುವಾಗ ಇರಾನ್‌ಗೆ ಟ್ರಂಪ್‌ ಅತಿ ದೊಡ್ಡ ಶತ್ರುವಾಗಿದ್ದಾರೆ. ಇದೇ ಕಾರಣಕ್ಕೆ ಟ್ರಂಪ್‌ ಹತ್ಯೆಗೆ ಇರಾನ್‌ ಎರಡೆರಡು ಬಾರಿ ಯತ್ನಿಸಿದೆ ಎಂದು ನೆತನ್ಯಾಹು ಹೇಳಿದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು?

Profile Rakshita Karkera Jun 16, 2025 10:55 AM

ಟೆಲ್‌ ಅವಿವ್‌: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಒಮ್ಮೆ ಅಲ್ಲ, ಎರಡು ಬಾರಿ ಹತ್ಯೆ ಮಾಡಲು ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ. ತನ್ನ ಪರಮಾಣು ಸಮರದ ವಿರುದ್ಧ ದೃಢವಾಗಿ ನಿಂತಿರುವ ಟ್ರಂಪ್‌ ವಿರುದ್ಧ ಇರಾನ್‌ ಒಳಗೊಳಗೇ ಕುದಿಯುತ್ತಿದೆ. ಇರಾನ್‌ಗೆ ಟ್ರಂಪ್‌ ಅತಿ ದೊಡ್ಡ ಶತ್ರು ಎಂದು ಬೆಂಜಮಿನ್‌ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ನಿರ್ಣಾಯಕ ನಾಯಕರಾಗಿದ್ದಾರೆ. ಅವರು ಇರಾನ್‌ನ ಪರಮಾಣು ನೀತಿಗೆ ವಿರುದ್ಧವಾಗಿ ನಿಂತಿದ್ದಾರೆ. ಅಣ್ವಸ್ತ್ರ ಹೊಂದುವಂತಿಲ್ಲ ಎಂದು ಇರಾನ್‌ಗೆ ಟ್ರಂಪ್‌ ಖಡಾ ಖಂಡಿತವಾಗಿ ಹೇಳಿದ್ದಾರೆ. ಅವರು ಇರಾನ್‌ ಮೇಲೆ ಭಾರೀ ಒತ್ತಡವನ್ನೇ ಹಾಕಿದ್ದಾರೆ. ಹೀಗಿರುವಾಗ ಇರಾನ್‌ಗೆ ಟ್ರಂಪ್‌ ಅತಿ ದೊಡ್ಡ ಶತ್ರುವಾಗಿದ್ದಾರೆ. ಇದೇ ಕಾರಣಕ್ಕೆ ಟ್ರಂಪ್‌ ಹತ್ಯೆಗೆ ಇರಾನ್‌ ಎರಡೆರಡು ಬಾರಿ ಯತ್ನಿಸಿದೆ. ಟ್ರಂಪ್‌ ನಡೆಗೆ ಬೆಂಬಲ ಸೂಚಿಸಿರುವ ಕಾರಣ ತಮ್ಮ ಮಲಗುವ ಕೋಣೆಯನ್ನು ಗುರಿಯಗಿ ಇರಾನ್‌ ದಾಳಿ ನಡೆಸಿತ್ತು ಎಂದು ನೆತನ್ಯಾಹು ಹೇಳಿದರು.

ಇನ್ನು ಇದೇ ವೇಳೆ ಅವರು, ಇಸ್ರೇಲ್‌ನ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್ ಪ್ರಧಾನಿ ಸಮರ್ಥಿಸಿಕೊಂಡರು, ಇಸ್ರೇಲ್‌ಗೆ ಇರಾನ್‌ನಿಂದ ಪರಮಾಣು ದಾಳಿಯ ಬೆದರಿಕೆ ಇದೆ. ಇರಾನ್‌ ಪರಮಾಣು ಬಾಂಬ್‌ ತಯಾರಿಕೆಯಲ್ಲಿ ಆತುರಾತುರವಾಗಿ ಮುಂದಾಗುತ್ತಿದೆ. ಅಲ್ಲದೇ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಶಸ್ತ್ರಾಗಾರವನ್ನು ವರ್ಷಕ್ಕೆ 3,600 ಶಸ್ತ್ರಾಸ್ತ್ರಗಳಿಗೆ, ಮೂರು ವರ್ಷಗಳಲ್ಲಿ 10,000 ಕ್ಷಿಪಣಿಗಳಿಗೆ ಮತ್ತು 26 ವರ್ಷಗಳಲ್ಲಿ 20,000 ಶಸ್ತ್ರಾಸ್ತ್ರಗಳಿಗೆ ಹೆಚ್ಚಿಸುವ ಆತುರ ಇರಾನ್‌ಗಿದೆ. ಇಸ್ರೇಲ್‌ನಷ್ಟು ವಿಸ್ತೀರ್ಣ ಹೊಂದಿರುವ ಯಾವುದೇ ದೇಶ, ಇಂತಹ ಬೆದರಿಕೆಯನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Israel-Gaza War: ಕದನ ವಿರಾಮ ಉಲ್ಲಂಘನೆ... ಇಸ್ರೇಲ್‌-ಗಾಜಾ ನಡುವೆ ಯುದ್ಧೋನ್ಮಾದ; ಏರ್‌ಸ್ಟ್ರೈಕ್‌ನಲ್ಲಿ 200 ಜನ ಬಲಿ

ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೆ, ಜಗತ್ತನ್ನೂ ರಕ್ಷಿಸುತ್ತಿದೆ ಇತ್ತೀಚಿನ ದಾಳಿಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ವಲ್ಪಮಟ್ಟಿಗೆ ಹಿನ್ನಡೆಗೊಳಿಸಿದೆ ಎಂದು ಅವರು ಹೇಳಿದರು. ಇಸ್ರೇಲ್‌ ನಗರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರಮುಖ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳನ್ನು ಹೊಡೆದುರುಳಿಸಲಾಗಿದೆ. ಇರಾನ್ ಜಗತ್ತಿಗೆ ಒಡ್ಡುವ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಯನ್ನು ತೊಡೆದುಹಾಕಲು ಅಗತ್ಯವಿರುವ ಎಲ್ಲವನ್ನೂ ಮಾಡಲು ತಮ್ಮ ದೇಶ ಸಿದ್ಧವಾಗಿದೆ ಎಂದು ನೆತನ್ಯಾಹು ಹೇಳಿದರು.

ಆಪರೇಷನ್ ರೈಸಿಂಗ್ ಲಯನ್ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ನೆತನ್ಯಾಹು "ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ" ಎಂದು ಬಣ್ಣಿಸಿದ್ದಾರೆ.