ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ನಮ್ಮ ಮೇಲೆ ಇಸ್ರೇಲ್‌ ಪರಮಾಣು ಬಾಂಬ್‌ ಹಾಕಿದ್ರೆ ..... ಪಾಕಿಸ್ತಾನ ನಿಮಗೆ ಬುದ್ಧಿ ಕಲಿಸುತ್ತದೆ; ಇರಾನ್ ಅಧಿಕಾರಿ ಹೇಳಿಕೆ

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ ನಾಲ್ಕನೇ ದಿನಕ್ಕೆ (Israel-Iran Conflict) ಕಾಲಿಟ್ಟಿದೆ. ಅಪಾರ ಪ್ರಮಾಣದ ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಇದೀಗ ಇರಾನ್ ಮೇಲೆ ಪರಮಾಣು ಬಾಂಬ್ ಹಾಕಿದರೆ ಪಾಕಿಸ್ತಾನ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸುತ್ತದೆ ಎಂದು ಇರಾನಿನ ಗಣ್ಯ ಪಡೆಗಳ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಸ್ರೇಲ್‌ ಮೇಲೆ ಪಾಕಿಸ್ತಾನ ಅಣು ಬಾಂಬ್‌ ಹಾಕುತ್ತದೆ; ಇರಾನ್‌

Profile Vishakha Bhat Jun 16, 2025 4:56 PM

ಟೆಹ್ರಾನ್‌: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ ನಾಲ್ಕನೇ ದಿನಕ್ಕೆ (Israel-Iran Conflict) ಕಾಲಿಟ್ಟಿದೆ. ಅಪಾರ ಪ್ರಮಾಣದ ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಇದೀಗ ಇರಾನ್ ಮೇಲೆ ಪರಮಾಣು ಬಾಂಬ್ ಹಾಕಿದರೆ ಪಾಕಿಸ್ತಾನ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸುತ್ತದೆ ಎಂದು ಇರಾನಿನ ಗಣ್ಯ ಪಡೆಗಳ ಉನ್ನತ ಅಧಿಕಾರಿಯೊಬ್ಬರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೇಳಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವೆ ಕ್ಷಿಪಣಿಗಳ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಅವರು ಈ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಅವರು ಇಸ್ರೇಲ್ ಮೇಲೆ ಪರಮಾಣು ಬಾಂಬ್ ದಾಳಿ ಮಾಡುವುದಾಗಿ ಪಾಕಿಸ್ತಾನ ನಮಗೆ ಭರವಸೆ ನೀಡಿದೆ" ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಿರಿಯ ಅಧಿಕಾರಿ ಮತ್ತು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ರೆಝಾಯಿ ಹೇಳಿದರು. ಆದರೆ ಪಾಕಿಸ್ತಾನದ ಅಧಿಕಾರಿಗಳು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ICAN (ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಶ್ ನ್ಯೂಕ್ಲಿಯರ್ ವೆಪನ್ಸ್) ಪ್ರಕಾರ, ಪ್ರಸ್ತುತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಒಂಬತ್ತು ದೇಶಗಳಲ್ಲಿ ಇಸ್ರೇಲ್ ಮತ್ತು ಪಾಕಿಸ್ತಾನ ಸೇರಿವೆ. ಪಾಕಿಸ್ತಾನವು "ಇರಾನ್‌ನ ಬೆನ್ನಿಗೆ ನಿಲ್ಲುವುದಾಗಿ" ಪ್ರತಿಜ್ಞೆ ಮಾಡಿದೆ ಮತ್ತು ಮುಸ್ಲಿಂ ಜಗತ್ತು ಒಂದಾಗುವಂತೆ ಕರೆ ನೀಡಿದೆ ಎಂದು ರೆಝೇ ಹೇಳಿದರು. ಇಸ್ರೇಲ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದರೆ ಪಾಶ್ಚಿಮಾತ್ಯ ಜಗತ್ತಿನ ಬೆಂಬಲವನ್ನು ಹೊಂದಿರುವ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಇರಾನ್‌ಗೆ ಬೆಂಬಲ ನೀಡಿದೆ.

ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್‌; ಇರಾನ್‌-ಇಸ್ರೇಲ್‌ ಡೆಡ್ಲಿ ಅಟ್ಯಾಕ್‌ ವಿಡಿಯೊ ವೈರಲ್‌

ಇಸ್ರೇಲ್ ಮತ್ತು ಇರಾನ್ ನಡುವೆ ಸತತ ನಾಲ್ಕನೇ ರಾತ್ರಿಯೂ (Israel-Iran Conflict) ಕ್ಷಿಪಣಿಗಳ ದಾಳಿ ನಡೆದಿದೆ. ಸೋಮವಾರ ಬೆಳಿಗ್ಗೆ ವರದಿಗಳ ಪ್ರಕಾರ, ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಬಳಿ ಹಲವಾರು ಜೋರಾದ ಸ್ಫೋಟಗಳು ಕೇಳಿಬಂದವು. ಪರಿಣಾಮ ಆ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಪರಮಾಣು ಸ್ಥಾವರದ ಬಳಿ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 2.5 ರಷ್ಟು ದಾಖಲಾಗಿದೆ. ಇರಾನ್ ಇಂಟರ್ನ್ಯಾಷನಲ್ ಇಂಗ್ಲಿಷ್ ಪೋಸ್ಟ್ ಮಾಡಿದ ವೀಡಿಯೊಗಳು ಕೋಮ್ ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಬೃಹತ್ ಸ್ಫೋಟಗಳನ್ನು ತೋರಿಸಿವೆ.