ವಿಜ್ಞಾನದ ಸುಜ್ಞಾನಕ್ಕೆ ಇದುವೇ ಬೆಸ್ಟ್ ಪ್ಲೇಸ್!
ವಿಜ್ಞಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅದು ಎಷ್ಟು ಸರಳ ಎಂಬುದನ್ನು ಪಾರ್ಸೆಕ್ (ParSEC) ಸೆಂಟರ್‌ನಲ್ಲಿ ತಿಳಿಯಬಹುದು. ಇಂಥದ್ದೊಂದು ಪ್ರಾಯೋಗಿಕ ಗ್ಯಾಲರಿ ಬಹುಬೇಗ ಜನಪ್ರಿಯತೆ ಗಳಿಸಿದೆ. ಹಾಗಾದರೆ, ಈ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಕೇಂದ್ರವು ಕೇವಲ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾತ್ರ ಸೀಮಿತವೇ ಎಂದು ನೋಡುವುದಾದರೆ, ಇಲ್ಲ ಎಂಬ ಉತ್ತರ ಬರುತ್ತದೆ. ಇಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು, ಚಿಂತನಾ ಲಹರಿಯನ್ನು ಒರೆಗೆ ಹಚ್ಚುವ ಕೆಲಸ ಆಗುತ್ತದೆ. ವಿಜ್ಞಾನದ ಬಗೆಗಿನ ಪರಿಕಲ್ಪನೆಯನ್ನು ಬದಲಾಯಿಸುವ ಇದು, ಮಕ್ಕಳ ಸ್ಮೃತಿಪಟಲದಲ್ಲಿ ಸುಲಭವಾಗಿ ಅಚ್ಚೊತ್ತಲಿದೆ.


ವಿಜ್ಞಾನ-ವಿನೋದ ವಿಚಾರ ಮಂಥನಕ್ಕೆ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್!
ಬೆಂಗಳೂರು: ಸೈನ್ಸ್ ಅಥವಾ ವಿಜ್ಞಾನ ಅನ್ನೋದು ಕಬ್ಬಿಣದ ಕಡಲೆ ಅಲ್ಲ. ಅರ್ಥ ಮಾಡಿಕೊಳ್ಳ ಲಾಗದ ವಿಷಯವೂ ಅಲ್ಲ. ಅದೊಂದು ವಿನೋದ. ಬಗೆದಷ್ಟೂ ತಿಳಿದುಕೊಳ್ಳುವ ಆಸಕ್ತಿ ನಿಮಗಿ ದ್ದರೆ, ನಿಮ್ಮ ಮಕ್ಕಳಿಗೆ ಕಲಿಸಬೇಕೆಂದಿದ್ದರೆ ಬೆಂಗಳೂರಿನ ಜಯನಗರದ ಹೃದಯ ಭಾಗದಲ್ಲಿರುವ ``ದಿ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ಗೆ” (ParSEC) ಬನ್ನಿ. ಈ ಕೇಂದ್ರದಲ್ಲಿ ಪ್ರಾಯೋ ಗಿಕ ಕಲಿಕೆಗೆ ಅವಕಾಶ ಇದ್ದು, ನಮ್ಮ ಜೀವನದಲ್ಲಿ ವಿಜ್ಞಾನ ಹೇಗೆ ಅಡಗಿದೆ ಎಂಬುದನ್ನು ಇಲ್ಲಿ ಅರಿಯಬಹುದಾಗಿದೆ. ಅಲ್ಲದೆ, ವಿಜ್ಞಾನದಲ್ಲಿ ತಂತ್ರಜ್ಞಾನದ ಬಳಕೆಯನ್ನೂ ಕಲಿಯಬಹುದಾಗಿದೆ.
ವಿಜ್ಞಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅದು ಎಷ್ಟು ಸರಳ ಎಂಬುದನ್ನು ಪಾರ್ಸೆಕ್ (ParSEC) ಸೆಂಟರ್‌ನಲ್ಲಿ ತಿಳಿಯಬಹುದು. ಇಂಥದ್ದೊಂದು ಪ್ರಾಯೋಗಿಕ ಗ್ಯಾಲರಿ ಬಹುಬೇಗ ಜನಪ್ರಿಯತೆ ಗಳಿಸಿದೆ. ಹಾಗಾದರೆ, ಈ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಕೇಂದ್ರವು ಕೇವಲ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾತ್ರ ಸೀಮಿತವೇ ಎಂದು ನೋಡುವುದಾದರೆ, ಇಲ್ಲ ಎಂಬ ಉತ್ತರ ಬರುತ್ತದೆ. ಇಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು, ಚಿಂತನಾ ಲಹರಿಯನ್ನು ಒರೆಗೆ ಹಚ್ಚುವ ಕೆಲಸ ಆಗುತ್ತದೆ. ವಿಜ್ಞಾನದ ಬಗೆಗಿನ ಪರಿಕಲ್ಪನೆಯನ್ನು ಬದಲಾಯಿಸುವ ಇದು, ಮಕ್ಕಳ ಸ್ಮೃತಿಪಟಲದಲ್ಲಿ ಸುಲಭ ವಾಗಿ ಅಚ್ಚೊತ್ತಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಎಲ್ಲ ವಯೋಮಾನದವರಿಗೆ ವಿಜ್ಞಾನ ಕಲಿಕೆ ಬಗ್ಗೆ ಉತ್ಸಾಹವನ್ನು ಹುಟ್ಟು ಹಾಕುವ ಗುರಿಯನ್ನು ಪರಮ್ ಸಂಸ್ಥೆ ಹೊಂದಿದೆ. ಪಾರ್ಸೆಕ್ (ParSEC) "ವಿಜ್ಞಾನ ಗ್ಯಾಲರಿ " ಮಾತ್ರವಲ್ಲ, ಇದೊಂದು ನಾವೀನ್ಯತೆಯ ಕೇಂದ್ರವಾಗಿದ್ದು, ʻವಿಜ್ಞಾನದಲ್ಲಿನ ಮೋಜುʼ ಎಲ್ಲರ ಅನುಭವಕ್ಕೆ ಬರಲಿದೆ.
ಇದನ್ನೂ ಓದಿ: Roopa Gururaj Column: ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು
ಹೇಗಿರಲಿದೆ ಪಾರ್ಸೆಕ್ ವಿಜ್ಞಾನ ಲೋಕ?
ನೀವು ಪಾರ್ಸೆಕ್ (ParSEC) ಸೆಂಟರ್‌ಗೆ ಕಾಲಿಟ್ಟರೆ ಸಾಕು ವಿಜ್ಞಾನ ಲೋಕವೇ ತೆರೆದುಕೊಳ್ಳ ಲಾರಂಭಿಸುತ್ತದೆ. ವಿಜ್ಞಾನದ ಕೌತುಕಗಳ ಬಗ್ಗೆ ನೀವು ಖುದ್ದು ಅನುಭವವನ್ನು ಪಡೆದುಕೊಳ್ಳ ಬಹುದಾಗಿದೆ. ವಿಜ್ಞಾನದ ಜೊತೆ ಜೊತೆಗೆ ನೀವು ಸಾಗುತ್ತಿರುವ ಅನುಭವ ನಿಮ್ಮದಾಗುತ್ತದೆ. ತಂತ್ರಜ್ಞಾನದಲ್ಲಿ ವಿಜ್ಞಾನದ ಬಳಕೆ ಹೇಗಿದೆ? ಇದಕ್ಕೂ ವಿಜ್ಞಾನಕ್ಕೂ ಏನು ಸಂಬಂಧ ಎಂಬುದನ್ನು ಸ್ವತಃ ತಿಳಿದುಕೊಳ್ಳಬಹುದಾಗಿದೆ. ಅಂದಹಾಗೆ, ಪಾರ್ಸೆಕ್ ಸೈನ್ಸ್ ಗ್ಯಾಲರಿಯಲ್ಲಿ ಒಟ್ಟು 7 ಗ್ಯಾಲರಿಯನ್ನು ರೂಪಿಸಲಾಗಿದೆ. ಇಂಟ್ರೊಡಕ್ಷನ್ ಗ್ಯಾಲರಿ, ಕೈನೆಟಿಕ್ ಗ್ಯಾಲರಿ, ಟ್ಯಾಕ್ಟೈಲ್ ಗ್ಯಾಲರಿ, ಡಿಜಿಟಲ್ ಗ್ಯಾಲರಿ, ಪಜಲ್ ಗ್ಯಾಲರಿ ಮತ್ತು ಲೈಟ್ ಗ್ಯಾಲರಿ, ಇಲ್ಯೂಷನ್ ಗ್ಯಾಲರಿ ಎಂಬುದಾಗಿ ಮಾಡಲಾಗಿದೆ.
ಇಂಟ್ರೊಡಕ್ಷನ್ ಗ್ಯಾಲರಿಯಲ್ಲಿ ಪರಮ್ ಕುರಿತಾದ ಕಿರು ಪರಿಚಯ ಮಾಡಿಕೊಡಲಾಗುತ್ತದೆ. ಕೈನೆಟಿಕ್ ಗ್ಯಾಲರಿಯಲ್ಲಿ ಮೋಷನ್ ಮೂಮೆಂಟ್ಸ್ ಇದ್ದರೆ, ವಿಜ್ಞಾನ ತತ್ವಗಳ ಆಧಾರದ ಮೇಲೆ ಲೈಟ್ ಗ್ಯಾಲರಿಯಲ್ಲಿ ಬೆಳಕಿನ ಚಮತ್ಕಾರ ಕಾಣಬಹುದು. ಟ್ಯಾಕ್ಟೈಲ್ ಗ್ಯಾಲರಿಯಲ್ಲಿ ನೀವು ಸ್ವತಃ ಸ್ಪರ್ಶಿಸಿ ವಿಜ್ಞಾನದ ಅನುಭವವನ್ನು ಪಡೆದುಕೊಳ್ಳುತ್ತೀರಿ. ಇನ್ನು ಡಿಜಿಟಲ್ ಗ್ಯಾಲರಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು (Artificial intelligence) ಅಳವಡಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಅಥವಾ ಜನ ಸಾಮಾನ್ಯರು ಡಿಜಿಟಲ್ ಸ್ಕ್ರೀನ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಕಲೆ ಮತ್ತು ವಿಜ್ಞಾನ ಒಟ್ಟುಗೂಡಿರುವ ಪಜಲ್ ಗ್ಯಾಲರಿಯಲ್ಲಿ ನಿಮ್ಮ ಮೆದುಳನ್ನು ಚುರುಕುಗೊಳಿಸುವ ಚಟುವಟಿಕೆಗಳು ಇರಲಿದೆ. ಇದಲ್ಲದೆ, ಇಲ್ಯೂಷನ್ ಗ್ಯಾಲರಿಯಲ್ಲಿ ನಿಮಗೊಂದು ಅದ್ಭುತವೇ ಕಾಣಸಿಗುತ್ತದೆ. ಇಲ್ಲಿ ಮನುಷ್ಯನಲ್ಲಿರುವ ನವರಸಗಳನ್ನು ಎಕ್ಸ್‌ಪೀರಿಯನ್ಸ್ ಮಾಡಬಹುದಾಗಿದೆ ಎಂದರೆ ನೀವು ನಂಬಲೇಬೇಕು. ಹಾಗಾಗಿ ಇಲ್ಲಿಗೆ ಬರುತ್ತಿರುವ ಮಕ್ಕಳಷ್ಟೇ ಅಲ್ಲ ಪೋಷಕರೂ ಕೂಡ ರೋಮಾಂಚನಗೊಳ್ಳುತ್ತಿದ್ದಾರೆ.

ಒಟ್ಟಾರೆ ಈ ಏಳು ಗ್ಯಾಲರಿಗಳಿಂದ 100ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಕಾಣಬಹುದಾಗಿದೆ. ಮನುಷ್ಯನಂತೆ ಹೆಜ್ಜೆ ಹಾಕುವ ಬೈಸಿಕಲ್ ಇರಬಹುದು, ಬೆರಳ ತುದಿಯಲ್ಲೇ ಆಡಿಸಬಹುದಾದ ತಂತ್ರಜ್ಞಾನಗಳನ್ನು ಅರಿಯಬಹುದು. ಇದೇ ರೀತಿಯಾಗಿ ವಿಭಿನ್ನವಾದ ಹಲವಾರು ಆಸಕ್ತಿದಾಯಕ, ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿರಲಿದೆ.
ಪ್ರವೇಶ ಶುಲ್ಕ ಎಷ್ಟು?
ಜಯನಗರ 7ನೇ ಬ್ಲಾಕ್‌ನಲ್ಲಿರುವ ಈ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಪ್ರವೇಶಿಸಲು ಶುಲ್ಕವನ್ನು ನಿಗದಿ ಮಾಡಲಾಗಿದೆ. ಅದೂ ಕೂಡಾ ಕೈಗೆಟುಕುವ ದರದಲ್ಲೇ ಲಭ್ಯವಿದೆ. ಆಸಕ್ತರು ನೇರವಾಗಿ ಕೇಂದ್ರಕ್ಕೇ ಬಂದು ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದ್ದು, ವಾರಾಂತ್ಯ ದಲ್ಲಿ 300 ರೂಪಾಯಿ ಇದ್ದರೆ, ಉಳಿದ ದಿನಗಳಲ್ಲಿ 250 ರೂಪಾಯಿ ದರ ನಿಗದಿ ಮಾಡಲಾಗಿದೆ. ಜತೆಗೆ ಬುಕ್ ಮೈ ಶೋ ಮೂಲಕವೂ ಟಿಕೆಟ್ ಖರೀದಿಸಬಹುದಾಗಿದ್ದು, ವಾರಾಂತ್ಯದಲ್ಲಿ 250 ರೂ. ಹಾಗೂ ಉಳಿದ ದಿನಗಳಲ್ಲಿ 225 ರೂ. ಇರಲಿದೆ. ಶಾಲಾ ಮಕ್ಕಳಿಗಾಗಿ 225 ರೂ. ಇರಲಿದ್ದು, ಒಂದು ವೇಳೆ ಶಾಲಾ ಆಡಳಿತ ಮಂಡಳಿಯು ಹತ್ತಕ್ಕೂ ಹೆಚ್ಚು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತವಾಗಿ ಕೊಡಲಾಗುತ್ತದೆ.
ಗ್ಯಾಲರಿ ತೆರೆಯುವ ಸಮಯ?
ಮಂಗಳವಾರ – ಶುಕ್ರವಾರ: ಬೆಳಗ್ಗೆ 10 ರಿಂದ ಸಂಜೆ 06 ಗಂಟೆವರೆಗೆ
ಶನಿವಾರ - ಭಾನುವಾರ: ಬೆಳಗ್ಗೆ 11 ರಿಂದ ಸಂಜೆ 07 ಗಂಟೆವರೆಗೆ
ಸೋಮವಾರ: ರಜೆ
ಬೆಂಗಳೂರಿನ ಇತರೆಡೆಯೂ ಸೈನ್ಸ್ ಮ್ಯೂಸಿಯಂಗೆ ಸಿದ್ಧತೆ!
ಜಯನಗರದಲ್ಲಿರುವ ಈ ಸೈನ್ಸ್ ಗ್ಯಾಲರಿಗೆ ಎಲ್ಲೆಡೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಕ್ಕಳು ಹಾಗೂ ಪೋಷಕರು ಕೌತುಕದಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಮಹಾನಗರಿ ಬೆಂಗಳೂರು ವಿಶಾಲವಾಗಿರುವುದರಿಂದ ಬೇರೆಡೆಯೂ ಕೇಂದ್ರ ತೆರೆಯುವಂತೆ ಜನರಿಂದ ಸಂಸ್ಥೆಗೆ ಒತ್ತಡ ಬಂದಿದೆ. ಹೀಗಾಗಿ ಪರಮ್ ಸಂಸ್ಥೆಯು ಬೆಂಗಳೂರಿನ ವೈಟ್‌ಫೀಲ್ಡ್ ಸೇರಿದಂತೆ ಇತರೆಡೆಯೂ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ.

ಏನಿದು ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ?
ಬೆಂಗಳೂರಿನ ಮಾಗಡಿರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಈ ಕೇಂದ್ರವು, ಭಾರತದಲ್ಲಿ ರೂಪು ಗೊಳ್ಳುತ್ತಿರುವ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್ ತಾಣವಾಗಿದೆ. ಇದು ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ಕೊಡಲಿದೆ. ಇಲ್ಲಿ, ವೈಜ್ಞಾನಿಕ ಆವಿಷ್ಕಾರಗಳೂ, ಸಾಂಸ್ಕೃತಿಕ ಕಲಿಕಾ ಸೌಲಭ್ಯಗಳೂ ಇರಲಿವೆ. ಅಲ್ಲದೇ, ಇದು ಇವೆಲ್ಲದ್ದಕ್ಕೂ ಏಷ್ಯಾದಲ್ಲಿಯೇ ಅತ್ಯುತ್ಕೃಷ್ಟ (Excellent) ಸೌಲಭ್ಯಗಳನ್ನು ಹೊಂದಿರುವ ತಾಣವಾಗಲಿದೆ. ಹೀಗಾಗಿ, "ಪರಮ್" ಕಲಿಕೆಗೂ, ಮನೋರಂಜನಾತ್ಮಕ ಚಟುವಟಿಕೆಗಳಿಗೂ ಬೃಹತ್ ಕೇಂದ್ರ ತಾಣವಾಗಿ ರೂಪುಗೊಳ್ಳುತ್ತಿದೆ.
ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಭವನ, ವಿಜ್ಞಾನ ಕೇಂದ್ರ ಹಾಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಅತಿಥಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಈ ಕೇಂದ್ರದ ಮೂಲಕ ಸೇವಾ ಸಂಸ್ಥೆಯು ಯುವ ಮನಸ್ಸುಗಳಿಗೆ ಆಧುನಿಕ ವಿಜ್ಞಾನ (Modern Science) ಮತ್ತು ಭಾರತೀಯ ಪ್ರಾಚೀನ ವಿಜ್ಞಾನ (Ancient Indian Science) , ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದೆ.