ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haveri Rain: ಹಾವೇರಿಯಲ್ಲಿ ಭಾರಿ ಮಳೆ; ನೆಲಕ್ಕುರುಳಿದ ಮರಗಳು, ವಿದ್ಯುತ್‌ ಕಂಬ ಬಿದ್ದು ಹಲವು ಬೈಕ್‌ ಜಖಂ

Haveri Rain: ಹಾವೇರಿಯ ಶಹರದ ಶಿವಾಜಿ ನಗರದಲ್ಲಿ ತೆಂಗಿನ ಮರ ಬಿದ್ದ ಹಿನ್ನೆಲೆ ನಾಲ್ಕು ವಿದ್ಯುತ್‌ ಕಂಬಗಳು ಉರುಳಿ, ಹಲವು ಬೈಕ್‌ಗಳು ಜಖಂಗೊಂಡಿವೆ. ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಿಂದ ಹಾವೇರಿಯಿಂದ ಗುತ್ತಲ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ನಾಲ್ಕೈದು ದೊಡ್ಡ ಮರಗಳು ಉರುಳಿದ್ದರಿಂದ ಮೂರು ಗಂಟೆಗಳ ಕಾಲ‌ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಹಾವೇರಿಯಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು

Profile Prabhakara R Apr 15, 2025 7:57 PM

ಹಾವೇರಿ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಹಲವೆಡೆ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಇನ್ನು ಹಾವೇರಿಯ ಶಹರದ ಶಿವಾಜಿ ನಗರದಲ್ಲಿ ತೆಂಗಿನ ಮರ ಬಿದ್ದ ಹಿನ್ನೆಲೆ ನಾಲ್ಕು ವಿದ್ಯುತ್‌ ಕಂಬಗಳು ಉರುಳಿ, ಹಲವು ಬೈಕ್‌ಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ನಗರಸಭೆ ವಾರ್ಡ್ ಸದಸ್ಯೆ ಚನ್ನಮ್ಮ ಬ್ಯಾಡಗಿ, ಪೌರಾಯುಕ್ತ ಚನ್ನಬಪಸಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Haveri Rain

ಜಿಲ್ಲೆಯ ಹಲವೆಡೆ ಬಿರುಗಾಳಿ ಮಳೆಗೆ ರಸ್ತೆ ಬದಿಯ ಮರದ ಟೊಂಗೆಗಳು ಮುರಿದು ಬಿದ್ದ ಪರಿಣಾಮವಾಗಿ ಸಂಚಾರ ಅಡಚಣೆ ಉಂಟಾಯಿತು. ಇನ್ನು ಬಿರುಗಾಳಿ ಮಳೆ ಆಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕೂಡ ಕಡಿತ ಮಾಡಲಾಯಿತು. ಏಕಾಏಕಿ ಮಳೆ ಆರಂಭವಾಗಿದ್ದರಿಂದ ಕೆಲಸ ಕಾರ್ಯದಲ್ಲಿ ತೊಡಗಿದ್ದ ಜನ ತೊಂದರೆ ಅನುಭವಿಸುವಂತಾಯಿತು.

rainfall

ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಿಂದ ಹಾವೇರಿಯಿಂದ ಗುತ್ತಲ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕರ್ಜಗಿ, ಅಗಡಿ ಸಮೀಪ ರಸ್ತೆಗೆ ನಾಲ್ಕೈದು ದೊಡ್ಡ ಮರಗಳು ಉರುಳಿದ್ದರಿಂದ ಮೂರು ಗಂಟೆಗಳ ಕಾಲ‌ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

Rain News (34)

ಈ ಸುದ್ದಿಯನ್ನೂ ಓದಿ | Karnataka Rain: ರೈತರಿಗೆ ಗುಡ್‌ ನ್ಯೂಸ್‌; ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆ!