AUS vs SA WTC final: ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಸ್ಟೀವನ್ ಸ್ಮಿತ್!
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಜೂನ್ 11 ರಂದು ಲಂಡನ್ನ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಬ್ಯಾಟಿಂಗ್ನಲ್ಲಿ ವಿಶೇಷ ದಾಖಲೆಯನ್ನು ಬರೆಯುವ ಸಾಧ್ಯತೆ ಇದೆ.

ವಿಶೇಷ ದಾಖಲೆಯ ಸನಿಹದಲ್ಲಿ ಸ್ಟೀವನ್ ಸ್ಮಿತ್.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಟ್ಸ್ ಕ್ರೀಡಾಂಗಣದಲ್ಲಿ ಜೂನ್ 11 ರಂದು ಆರಂಭವಾಗಲಿರುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ (WTC 2025 Final) ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (Aus vs SA) ಕಾದಾಟ ನಡೆಸಲಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ 123 ವರ್ಷಗಳ ಬಳಿಕ ಇದೇ ಮೊದಲು ಈ ಎರಡೂ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡ, ಇದೀಗ ಮೂರನೇ ಆವೃತ್ತಿಯಲ್ಲಿಯೂ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ. ಆಸ್ಟ್ರೇಲಿಯಾ ತಂಡಕ್ಕೆ ಈ ಸಾಧನೆ ಮಾಡಲು ಇನ್ನೂ ಒಂದೇ ಒಂದು ಹೆಜ್ಜೆ ಬಾಕಿ ಇದೆ.
ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಸ್ಟೀವನ್ ಸ್ಮಿತ್ ನೂತನ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಅವರು ಸದ್ಯ ಡಬ್ಲ್ಯುಟಿಸಿ ಫೈನಲ್ನಲ್ಲಿ ಆಡಿದ ಎರಡು ಇನಿಂಗ್ಸ್ಗಳಿಂದ 155 ರನ್ಗಳನ್ನು ಕಲೆ ಹಾಕಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ನಲ್ಲಿ 45 ರನ್ಗಳನ್ನು ಕಲೆ ಹಾಕಿದರೆ, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ 200 ರನ್ಗಳನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಭಾರತದ ಅಜಿಂಕ್ಯ ರಹಾನೆ (199 ರನ್) ಅವರು ಸದ್ಯ ಫೈನಲ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಸ್ಮಿತ್ ಈ ಪಂದ್ಯದಲ್ಲಿ 45 ರನ್ ಗಳಿಸಿದರೆ, ರಹಾನೆ ದಾಖಲೆಯನ್ನು ಮುರಿಯಲಿದ್ದಾರೆ.
ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್ ಫೈನಲ್ ಫೈಟ್; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?
ಆಸ್ಟ್ರೇಲಿಯಾ ತಂಡದಲ್ಲಿ ಟ್ರಾವಿಸ್ ಹೆಡ್ ಡಬ್ಲ್ಯುಟಿಸಿ ಫೈನಲ್ನಲ್ಲಿ 181 ರನ್ಗಳನ್ನು ಕಲೆ ಹಾಕಿದ್ದಾರೆ. ಅವರು 200 ರನ್ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ ಕೇವಲ 19 ರನ್ ಮಾತ್ರ ಬೇಕಾಗಿದೆ. ಆದರೆ, ಸ್ಟೀವನ್ ಸ್ಮಿತ್ ಮೇಲಿನ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲಿದ್ದಾರೆ. ಆದ್ದರಿಂದ ಈ ಸಾಧನೆಯನ್ನು ಬೇಗ ಮಾಡಲು ಸ್ಮಿತ್ಗೆ ಅವಕಾಶವಿದೆ. ಟ್ರಾವಿಸ್ ಹೆಡ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ.
ಡಬ್ಲ್ಯುಟಿಸಿ ಫೈನಲ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳು
ಅಜಿಂಕ್ಯ ರಹಾನೆ (ಭಾರತ)- 199
ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 181
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 145
ರೋಹಿತ್ ಶರ್ಮಾ (ಭಾರತ)- 122
ವಿರಾಟ್ ಕೊಹ್ಲಿ (ಭಾರತ)- 120
ICC WTC Final 2025: ವಿಶ್ವ ಟೆಸ್ಟ್ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
ಡಬ್ಲ್ಯುಟಿಸಿ ಫೈನಲ್ ಸ್ವರೂಪದ ಬದಲಾವಣೆಗೆ ಸ್ಮಿತ್ ಆಗ್ರಹ
ಪ್ರಸ್ತುತ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್ನಲ್ಲಿ ಒಂದೇ ಒಂದು ಪಂದ್ಯವನ್ನು ಮಾತ್ರ ಆಡಿಸಲಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ದ ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಸ್ಮಿತ್, ಪ್ರಶಸ್ತಿ ಸುತ್ತಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು ಆಡಿಸಬೇಕೆಂದು ಅಗ್ರಹಿಸಿದ್ದರು. ಇದರ ಆಧಾರದ ಮೇಲೆ ಚಾಂಪಿಯನ್ ಅನ್ನು ನಿರ್ಧರಿಸಬೇಕೆಂದು ಅವರು ಹೇಳಿದ್ದರು.
"ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ, ಆದರೆ ಹೌದು, ಬಹುಶಃ ಮೂರು ಪಂದ್ಯಗಳ ಸರಣಿ ಚೆನ್ನಾಗಿರುತ್ತದೆ. ಈಗಾಗಲೇ ಸಾಕಷ್ಟು ಪ್ಯಾಕ್ ಆಗಿರುವ ಕ್ಯಾಲೆಂಡರ್ನಲ್ಲಿ ಅದನ್ನು ಅಳವಡಿಸಿದರೆ ಒಳ್ಲೆಯದು. ಆದರೆ ಅದನ್ನು ಮಾಡಲು ಸಾಧ್ಯವಾದರೆ, ಅದು ತುಂಬಾ ಚೆನ್ನಾಗಿರುತ್ತದೆ," ಎಂದು ಸ್ಟೀವನ್ ಸ್ಮಿತ್ ತಿಳಿಸಿದ್ದಾರೆ.