ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IAS Transfer: ರೋಹಿಣಿ ಸಿಂಧೂರಿ ದಾಸರಿ, ಡಿ. ರೂಪಾ ವರ್ಗಾವಣೆ

IAS Transfer: ಕರ್ನಾಟಕ ಸಿಲ್ಕ್‌ ಮಾರ್ಕೆಟಿಂಗ್‌ ಬೋರ್ಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಪೋರ್ಸ್‌ನ ಹೆಚ್ಚುವರಿ ಡಿಜಿಪಿ ಆಗಿ ವರ್ಗಾಯಿಸಲಾಗಿದೆ. ರೋಹಿಣಿ ಸಿಂಧೂರಿ ದಾಸರಿ ಅವರನ್ನು ಕೃಷಿ ಇಲಾಖೆಯ ಆಹಾರ ಸಂಸ್ಕರಣೆ ಮತ್ತು ಬೆಳೆ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಸ್ಥಾನದಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗ ಮಾಡಲಾಗಿದೆ.

ರೋಹಿಣಿ ಸಿಂಧೂರಿ ದಾಸರಿ, ಡಿ. ರೂಪಾ ವರ್ಗಾವಣೆ

ರೋಹಿಣಿ ಸಿಂಧೂರಿ, ಡಿ. ರೂಪಾ

ಹರೀಶ್‌ ಕೇರ ಹರೀಶ್‌ ಕೇರ Jun 12, 2025 1:32 PM

ಬೆಂಗಳೂರು: ಐಎಎಸ್‌ ಅಧಿಕಾರಿ (IAS Transfer) ರೋಹಿಣಿ ಸಿಂಧೂರಿ ದಾಸರಿ (Rohini Sindhuri Dasari) ಹಾಗೂ ಐಪಿಎಸ್‌ ಅಧಿಕಾರಿ (IPS Transfer) ಡಿ. ರೂಪಾ (D Roopa) ಸೇರಿ ನಾಲ್ವರು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ (Karnataka government) ಆದೇಶ ಹೊರಡಿಸಿದೆ. ಈ ಇಬ್ಬರೂ ಅಧಿಕಾರಿಗಳು ಇತ್ತೀಚೆಗೆ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಮಾನನಷ್ಟ ಪ್ರಕರಣಗಳನ್ನು ದಾಖಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕರ್ನಾಟಕ ಸಿಲ್ಕ್‌ ಮಾರ್ಕೆಟಿಂಗ್‌ ಬೋರ್ಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಪೋರ್ಸ್‌ನ ಹೆಚ್ಚುವರಿ ಡಿಜಿಪಿ ಆಗಿ ವರ್ಗಾಯಿಸಲಾಗಿದೆ. ರೋಹಿಣಿ ಸಿಂಧೂರಿ ದಾಸರಿ ಅವರನ್ನು ಕೃಷಿ ಇಲಾಖೆಯ ಆಹಾರ ಸಂಸ್ಕರಣೆ ಮತ್ತು ಬೆಳೆ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಸ್ಥಾನದಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗ ಮಾಡಲಾಗಿದೆ.

ಇವರಲ್ಲದೆ ಸ್ಥಾನ ನಿರ್ದೇಶನಕ್ಕಾಗಿ ಕಾಯುತ್ತಿದ್ದ ಇಬ್ಬರಿಗೆ ಸ್ಥಾನ ನಿರ್ದೇಶನ ಮಾಡಲಾಗಿದೆ. ಶೆಟ್ಟಣ್ಣವರ್‌ ಎಸ್‌.ಬಿ ಅವರನ್ನು ಬೆಳಗಾವಿಯ ಸ್ಥಾನಿಕ ಆಯಕ್ತರಾಗಿ ನಿಯೋಜಿಸಲಾಗಿದೆ. ಅಕ್ರಂ ಪಾಷ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿಚಾರಣೆ ಇಂದು