Mock drill: ಆಪರೇಷನ್ ಸಿಂದೂರ್ ನಡುವೆಯೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾಕ್ ಡ್ರಿಲ್
Nationwide mock drill: ಯುದ್ಧದಂತಹ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಬಗ್ಗೆ ಅರಿವು ಮೂಡಿಸುವ ನೀಡುವ ಉದ್ದೇಶದಿಂದ ದೇಶದಾದ್ಯಂತ 259 ಜಿಲ್ಲೆಗಳಲ್ಲಿ ಈ ಕವಾಯತು ನಡೆಸಲಾಗಿದೆ. ಕರ್ನಾಟಕದ ಮೂರು ನಗರಗಳೂ ಸೇರಿದಂತೆ ದೆಹಲಿ, ಮುಂಬೈ, ಚೆನ್ನೈ ಮತ್ತು ಅಯೋಧ್ಯೆ ಸೇರಿದಂತೆ ದೇಶದ ಇತರ ಸ್ಥಳಗಳಲ್ಲಿಯೂ ಅಣಕು ಕವಾಯತುಗಳು ನಡೆದವು. ಕರ್ನಾಟಕದ ಬೆಂಗಳೂರು ನಗರ, ಮಲ್ಲೇಶ್ವರಂ ಮತ್ತು ರಾಯಚೂರಿನಲ್ಲಿ ಕವಾಯತು ನಡೆಸಲಾಗಿದೆ.


ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರವ್ಯಾಪಿ ಅಣಕು ಕವಾಯತು ನಡೆಸಲಾಗಿದೆ. ಯುದ್ಧದಂತಹ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಬಗ್ಗೆ ಅರಿವು ಮೂಡಿಸುವ ನೀಡುವ ಉದ್ದೇಶದಿಂದ ದೇಶದಾದ್ಯಂತ 259 ಜಿಲ್ಲೆಗಳಲ್ಲಿ ಈ ಕವಾಯತು ನಡೆಸಲಾಗಿದೆ. ಕರ್ನಾಟಕದ ಮೂರು ನಗರಗಳೂ ಸೇರಿದಂತೆ ದೆಹಲಿ, ಮುಂಬೈ, ಚೆನ್ನೈ ಮತ್ತು ಅಯೋಧ್ಯೆ ಸೇರಿದಂತೆ ದೇಶದ ಇತರ ಸ್ಥಳಗಳಲ್ಲಿಯೂ ಅಣಕು ಕವಾಯತುಗಳು ನಡೆದವು. ಕರ್ನಾಟಕದ ಬೆಂಗಳೂರು ನಗರ, ಮಲ್ಲೇಶ್ವರಂ ಮತ್ತು ರಾಯಚೂರಿನಲ್ಲಿ ಕವಾಯತು ನಡೆಸಲಾಗಿದೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿ ಮತ್ತು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಈ ಮಾಕ್ ಡ್ರಿಲ್ ಕಾರ್ಯಕ್ರಮದಲ್ಲಿ ನಾಗರಿಕರು ಉತ್ಸಾಹದಿಂದ ಭಾಗಿಯಾದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನ 7 ಮತ್ತು 8 ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಅಣಕು ಕವಾಯತು ನಡೆಸಲಾಯಿತು, ಅಲ್ಲಿ ನಾಗರಿಕರಿಗೆ ಬೆಂಕಿಯನ್ನು ನಂದಿಸುವ ಬಗ್ಗೆ ಜ್ಞಾನವನ್ನು ನೀಡಲಾಯಿತು. ಸಿಎಸ್‌ಎಂಟಿಯಲ್ಲಿ ನಡೆದ ಕವಾಯತುಗಳ ಕುರಿತು ಮಾತನಾಡಿದ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಡಾ. ಸ್ವಪ್ನಿಲ್ ನೀಲಾ, "ಕೇಂದ್ರ ರೈಲ್ವೆಯ ನಾಗರಿಕ ರಕ್ಷಣಾ ಘಟಕವು ಸಿಎಸ್‌ಎಂಟಿಯಲ್ಲಿ ಅಣಕು ಕವಾಯತು ನಡೆಸಿತು. ಅಣಕು ಕವಾಯತು ಮೂಲಕ, ಸೆಂಟ್ರಲ್ ರೈಲ್ವೆ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲುಸಾಮಾನ್ಯ ಜನರಿಗೆ ಕವಾಯತುಗಳ ಮೂಲಕ ಎಚ್ಚರಿಕೆ ನೀಡಲು ಪ್ರಯತ್ನಿಸಿದೆ ಎಂದು ಹೇಳಿದರು.
ಪಂಜಾಬ್‌ನ ಅಮೃತಸರದಲ್ಲಿ ಮತ್ತೊಂದು ಅಣಕು ಕವಾಯತಿನ ದೃಶ್ಯಗಳನ್ನು ನಡೆಸಲಾಯಿತು, ಇದರಲ್ಲಿ ಪೊಲೀಸರು ಮತ್ತು ರಕ್ಷಣಾ ತಂಡಗಳು ರಕ್ಷಣಾ ತಂತ್ರಗಳನ್ನು ಪ್ರದರ್ಶಿಸಿದವು ಮತ್ತು ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಇತರರಿಗೆ ಹೇಗೆ ಸಹಾಯ ಮಾಡಬೇಕೆಂಬ ಬಗ್ಗೆಯೂ ಅರಿವು ಮೂಡಿಸಲಾಯಿತು.
ದೆಹಲಿಯ ಹಲವಾರು ಭಾಗಗಳಲ್ಲಿ ಅಣಕು ಕವಾಯತುಗಳನ್ನು ಸಹ ನಡೆಸಲಾಯಿತು. ಖಾನ್ ಮಾರುಕಟ್ಟೆಯಲ್ಲಿ ನಡೆದ ಕವಾಯತಿನಲ್ಲಿ ಮಾತನಾಡಿದ NDRF ಡೆಪ್ಯೂಟಿ ಕಮಾಂಡೆಂಟ್ ರತೀಶ್ ಕುಮಾರ್, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರು ಪರಸ್ಪರ ಹೇಗೆ ಸ್ಪಂದಿಸಬೇಕು? ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು.
ಏಪ್ರಿಲ್ 22 ರಂದು 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಈ ಅಣಕು ಕವಾಯತುಗಳನ್ನು ನಡೆಸಿತು. ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಬಲವಾದ ಕ್ಷಿಪಣಿ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿತು. ಬುಧವಾರ ಬೆಳಗಿನ ಜಾವ ಭಾರತವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಒಂಬತ್ತು ಶಿಬಿರಗಳ ಮೇಲೆ ದಾಳಿ ನಡೆಸಿತು. ಪಾಕಿಸ್ತಾನದ ಸಿಯಾಲ್‌ಕೋಟ್, ಮುರಿಡ್ಕೆ ಮತ್ತು ಬಹವಾಲ್‌ಪುರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿರಿಸಿಕೊಳ್ಳಲಾಯಿತು, ಆದರೆ ದಾಳಿಗಳು ಮುಜಫರಾಬಾದ್, ಕೋಟ್ಲಿ ಮತ್ತು ಭಿಂಬರ್‌ನಲ್ಲಿರುವ ಅಡಗುತಾಣಗಳ ಮೇಲೂ ಕೇಂದ್ರೀಕರಿಸಿದವು. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿದ್ದು, ದಾಳಿಗೆ 'ಆಪರೇಷನ್ ಸಿಂದೂರ್' ಹೆಸರಿಡಲಾಗಿದೆ.