ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Helicopter crash: ಹೆಲಿಕಾಪ್ಟರ್‌ ಪತನ; 5 ಪ್ರವಾಸಿಗರು ದುರಂತ ಸಾವು

Uttarakhand Helicopter crash: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ ಪತನಗೊಂಡಿದ್ದುಐವರು ಪ್ರವಾಸಿಗರು ದುರಂತ ಸಾವನ್ನಪ್ಪಿದ್ದಾರೆ. ಉತ್ತರಾಕಾಶಿಯಲ್ಲಿ ಇಂದು ಮುಂಜಾನೆ ಈ ದುರುಂತ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಹೆಲಿಕಾಪ್ಟರ್‌ ಪತನ; 5 ಪ್ರವಾಸಿಗರು ದುರಂತ ಸಾವು

Profile Rakshita Karkera May 8, 2025 10:03 AM

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಖಾಸಗಿ ಹೆಲಿಕಾಪ್ಟರ್‌ ಪತನಗೊಂಡಿದ್ದು(Helicopter crash), ಐವರು ಪ್ರವಾಸಿಗರು ದುರಂತ ಸಾವನ್ನಪ್ಪಿದ್ದಾರೆ. ಉತ್ತರಾಕಾಶಿಯಲ್ಲಿ ಇಂದು ಮುಂಜಾನೆ ಈ ದುರುಂತ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಒಬ್ಬನಿಗೆ ಗಂಭೀರವಾಗಿ ಗಾಯವಾಗಿದೆ. ಡೆಹ್ರಾಡೂನ್‌ನಿಂದ ಹರ್ಸಿಲ್‌ ಹೆಲಿಪ್ಯಾಡ್‌ಗೆ ಈ ಹೆಲಿಕಾಪ್ಟರ್‌ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರು, ಸೇನೆ, ವಿಪತ್ತು ನಿರ್ವಹಣಾ ಪಡೆ ಮತ್ತು ಅಂಬ್ಯುಲೆನ್ಸ್‌ ಉತ್ತರಕಾಶಿಯಲ್ಲಿ ಜಂಟೀ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.



ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಂಚಿಕೊಂಡಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮಡಿದವರ ಆತ್ಮಗಳಿಗೆ ದೇವರು ಶಾಂತಿ ನೀಡಲಿ ಮತ್ತು ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬಗಳಿಗೆ ನೀಡಲಿ ಎಂದು ಅವರು ಬರೆದಿದ್ದಾರೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಮತ್ತು ಅಪಘಾತದ ತನಿಖೆ ನಡೆಸಲು ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಶ್ರೀ ಧಾಮಿ ಹೇಳಿದರು. ಈ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದುರ್ಘಟನೆಯ ರಣ ಭೀಕರ ದೃಶ್ಯ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Helicopter Crash: ತರಬೇತಿ ವಿಮಾನ ಪತನ; ಓರ್ವ ಪೈಲೆಟ್‌ ಸಾವು

ಒಟ್ಟು ಏಳು ಮಂದಿ ಪ್ರಯಾಣಿಕರಿಂದ ತುಂಬಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್ ಹೆಲಿಪ್ಯಾಡ್‌ಗೆ ಹಾರುತ್ತಿತ್ತು. ಅಲ್ಲಿಂದ ಪ್ರವಾಸಿಗರು ರಸ್ತೆ ಮೂಲಕ ಸುಮಾರು 30 ಕಿ.ಮೀ ದೂರವನ್ನು ಕ್ರಮಿಸಿ ಗಂಗೋತ್ರಿಗೆ ತೆರಳಲು ನಿರ್ಧರಿಸಿದ್ದರು.