ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್‌ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್

Metgala Fashion: ಅಮೆರಿಕದ ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆಯುತ್ತಿರುವ 2025 ರ ಮೆಟ್ ಗಾಲಾದಲ್ಲಿ ಬಾಲಿವುಡ್‌ನ ಸೆಲೆಬ್ರೆಟಿಗಳು ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಯಾರ‍್ಯಾರು ಯಾವ್ಯಾವ ಬಗೆಯ ಡಿಸೈನರ್‌ವೇರ್‌ ಧರಿಸಿದ್ದರು? ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಮೆಟ್‌ಗಾಲಾದಲ್ಲಿ ಆಕರ್ಷಿಸಿದ ಬಾಲಿವುಡ್‌ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್

ಚಿತ್ರಕೃಪೆ: ಇನ್ಸ್ಟಾಗ್ರಾಮ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆಯುತ್ತಿರುವ 2025ರ ಸಾಲಿನ ಮೆಟ್ ಗಾಲಾದಲ್ಲಿ (Metgala Fashion) ಬಾಲಿವುಡ್‌ನ ಸೆಲೆಬ್ರೆಟಿಗಳು ಅತ್ಯಾಕರ್ಷಕವಾಗಿ ಕಾಣಿಸಿಕೊಂಡು ಜಾಗತಿಕ ಮಟ್ಟದ ಫ್ಯಾಷನ್‌ ಪ್ರಿಯರ ಮನ ಸೆಳೆದರು. ಹೌದು, ಕಿಂಗ್‌ಖಾನ್‌ ಶಾರುಖ್ ಖಾನ್, ನಟಿ ಪ್ರಿಯಾಂಕಾ ಚೋಪ್ರಾ-ನಿಕ್‌, ನಟಿ ಕಿಯಾರಾ ಅಡ್ವಾಣಿ ಮತ್ತು ದಿಲ್ಜಿತ್ ದೋಸಾಂಜ್, ಇಶಾ ಅಂಬಾನಿ, ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ, ಸಭ್ಯಸಾಚಿ ಸೇರಿದಂತೆ ಅನೇಕ ಭಾರತೀಯ ತಾರೆಯರು, ಸೆಲೆಬ್ರೆಟಿಗಳು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಮಿಂಚಿದರು.

Metgala Fashion 1

ಕಿಂಗ್‌ ಖಾನ್‌ ಶಾರೂಖ್‌ ಖದರ್‌

ಬಾಲಿವುಡ್‌ನ ಕಿಂಗ್‌ಖಾನ್‌ ಎಂದೇ ಹೆಸರುವಾಸಿಯಾಗಿರುವ ಶಾರೂಖ್‌ ಖಾನ್‌ಗೆ ಇದು ಮೊದಲನೇಯ ಮೆಟ್‌ಗಾಲಾ. ಹಾಗಾಗಿ ಅಲ್ಲಿನ ಸಾಕಷ್ಟು ಮಂದಿಗೆ ಅವರ ಗುರುತೇ ಸಿಗಲಿಲ್ಲ! ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಡಿಸೈನರ್‌ ಸಭ್ಯಸಾಚಿಯವರ ಶರ್ಟ್‌ ಲೆಸ್‌ ಬ್ಲ್ಯಾಕ್‌ ಸೂಟ್‌ನಲ್ಲಿ ಕಾಣಿಸಿಕೊಂಡ ಶಾರೂಖ್‌, ಲೇಯರ್‌ ಚೈನ್ಸ್‌ ಹಾಗೂ ಸ್ಟಿಕ್‌ ಹಿಡಿದು ತಮ್ಮದೇ ಆದ ಪೋಸ್‌ ನೀಡಿ ಎಲ್ಲರನ್ನು ಸೆಳೆದರು.

ಪ್ರಿಯಾಂಕಾ-ನಿಕ್‌ ಕಪಲ್‌ ಗೋಲ್‌

ನಟಿ ಪ್ರಿಯಾಂಕಾ-ನಿಕ್‌ ಮಾತ್ರ ಜತೆಜತೆಯಾಗಿಯೇ ಕಾಣಿಸಿಕೊಂಡರು. ಪ್ರಿಯಾಂಕಾ ಪೊಲ್ಕಾ ಡಾಟ್ಸ್‌ ಡಿಸೈನರ್‌ವೇರ್‌ನಲ್ಲಿ ರೆಟ್ರೋ ಲುಕ್‌ನಲ್ಲಿ ಪತಿಯೊಂದಿಗೆ ಪೋಸ್‌ ನೀಡಿದರು.

ಬೇಬಿ ಬಂಪ್‌ ಪ್ರದರ್ಶಿಸಿದ ನಟಿ ಕಿಯಾರಾ ಔಟ್‌ಫಿಟ್‌

ನಟಿ ಕಿಯಾರ ಅಡ್ವಾನಿ, ಬ್ಲ್ಯಾಕ್‌ & ಗೋಲ್ಡ್‌ ಔಟ್‌ಫಿಟ್‌ನಲ್ಲಿ ವೈಟ್‌ ಕೇಪ್‌ನಲ್ಲಿ ತಮ್ಮ ಬೇಬಿ ಬಂಪ್‌ ಪ್ರದರ್ಶಿಸಿ, ತಾಯಿ ಪ್ರೇಮ ವ್ಯಕ್ತಪಡಿಸಿದರು.

Metgala Fashion 2

ಮಹಾರಾಜನಂತೆ ಕಂಡ ಗಾಯಕ ದಿಲ್ಜೀತ್‌

ನಟ ಮತ್ತು ಗಾಯಕ ದಿಲ್ಜೀತ್ ದೋಸಾಂಜ್ ಥೇಟ್‌ ಪಂಜಾಬಿ ಶೈಲಿಯ ಮಹಾರಾಜನಂತೆ ಕಾಣಿಸಿಕೊಂಡರು. ಅಷ್ಟು ಮಾತ್ರವಲ್ಲ, ಶಕೀರಾ ಕೂಡ ಇವರೊಂದಿಗೆ ಫೋಟೋ ಪೋಸ್‌ ನೀಡಿದರು. ಇದು ವೈರಲ್‌ ಸುದ್ದಿಯಾಗಿದೆ ಕೂಡ.

ಇಶಾ ಅಂಬಾನಿಯ ರೆಡ್‌ಕಾರ್ಪೆಟ್‌ ಡಿಸೈನರ್‌ವೇರ್‌

ಅಂಬಾನಿ ಫ್ಯಾಮಿಲಿಯವರೆಂದರೇ ಕೇಳಬೇಕೇ! ಇಶಾ ಅಂಬಾನಿಯ ಅತ್ಯಾಕರ್ಷಕ ಕಟೌಟ್‌ ಡಿಸೈನ್‌ನ ಡಿಸೈನರ್‌ವೇರ್‌ ಹಾಗೂ ಜ್ಯುವೆಲರಿಗಳು ನೋಡುಗರನ್ನು ಕೆಲಕಾಲ ಮಂತ್ರಮುಗ್ದರನ್ನಾಗಿಸಿತು.

Metgala Fashion 3

ಡಿಸೈನರ್‌ ಮನೀಶ್‌ ಮಲ್ಹೋತ್ರಾ ವಾಕ್‌

ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ, ತಾವೇ ಸಿದ್ಧಪಡಿಸಿದ ಎಂಬ್ರಾಯ್ಡರಿ ಕೇಪ್‌ ಬ್ಲ್ಯಾಕ್‌ ಕಾಂಬಿನೇಷನ್‌ನ ಕೋಟ್‌ನಲ್ಲಿ ಮಾಡೆಲ್‌ನಂತೆ ವಾಕ್‌ ಮಾಡಿದರು.

ಡಿಸೈನರ್‌ ಸಭ್ಯಸಾಚಿ ಲುಕ್‌

ಸೀನಿಯರ್‌ ಡಿಸೈನರ್‌ ಸಭ್ಯಸಾಚಿ ತಮ್ಮದೇ ಕ್ರಿಯೇಷನ್‌ನ ಬ್ಲ್ಯಾಕ್‌ & ವೈಟ್‌ ಡ್ರೆಸ್‌ನಲ್ಲಿ ವೈಟ್‌ ಲಾಂಗ್‌ ಕೋಟ್‌ ಹಾಗೂ ಬ್ರೋಚ್‌ ಇರುವ ಸಾಂಪ್ರದಾಯಿಕ ಕ್ಯಾಪ್‌ ಹಾಗೂ ಲೇಯರ್‌ ನೆಕ್‌ಲೇಸ್‌ನಲ್ಲಿ ಕಾಣಿಸಿಕೊಂಡು ನೋಡುಗರಲ್ಲಿ ಕುತೂಹಲ ಮೂಡಿಸಿದರು.‌

ಈ ಸುದ್ದಿಯನ್ನೂ ಓದಿ | Isha Ambani Metgala Fashion: ಮೆಟ್‌ಗಾಲದಲ್ಲಿ ಇಶಾ ಅಂಬಾನಿ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿದರೇ ಶಾಕ್‌ ಆಗ್ತೀರ