Viral Video: 'ಡಿಂಗ್ ಡಾಂಗ್ ಡಿಂಗ್' ಸಾಂಗ್‌ಗೆ ಸಖತ್ ಆಗಿ ಹೆಜ್ಜೆ ಹಾಕಿದ ಗರ್ಭಿಣಿ; ನೆಟ್ಟಿಗರು ಫುಲ್ ಶಾಕ್
ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಕೊಂಡ ವೈದ್ಯೆ, ಡ್ಯಾನ್ಸರ್ ಆದ ಗರ್ಭಿಣಿ ಸೋನಮ್ ದಯಾ ಡಿಂಗ್ ಡಾಂಗ್ ಡಿಂಗ್ ಎಂದು ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.


ಗರ್ಭಿಣಿಯರು ನಡೆಯುವಾಗ ಕುಳಿತುಕೊಳ್ಳುವಾಗ ಬಹಳ ಎಚ್ಚರಿಕೆಯಿಂದಿರಬೇಕು ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಕೊಂಡ ಗರ್ಭಿಣಿ 'ಡಿಂಗ್ ಡಾಂಗ್ ಡಿಂಗ್' ಎಂದು ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.ಗರ್ಭಿಣಿಯ ಹೆಸರು ಸೋನಮ್ ದಯಾ ಎಂಬುದಾಗಿ ತಿಳಿದುಬಂದಿದೆ. ಈಕೆ ಒಬ್ಬ ಡ್ಯಾನ್ಸರ್ ಜೊತೆಗೆ ವೈದ್ಯೆ ಕೂಡ ಹೌದು!
ಈಕೆ ಜನಪ್ರಿಯ ನೃತ್ಯ ಸಂಯೋಜಕ ಆದಿಲ್ ಖಾನ್ ಅವರೊಂದಿಗೆ 'ಡಿಂಗ್ ಡಾಂಗ್ ಡಿಂಗ್' ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ವೈರಲ್ ವಿಡಿಯೊದಲ್ಲಿ ಆಕೆ ಮಾಡಿದ್ದ ಕೆಲವು ಡ್ಯಾನ್ಸ್ ಸ್ಟೆಪ್‍ಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಹಾಗಾಗಿ ಕೆಲವರು ಗರ್ಭಾವಸ್ಥೆಯಲ್ಲಿ ಡ್ಯಾನ್ಸ್ ಮಾಡುವುದು ಅಪಾಯಕಾರಿ ಎಂದು ಹೇಳಿದ್ದಾರೆ. ಕೆಲವರು ಮಹಿಳೆಯ ಧೈರ್ಯವನ್ನು ಹೊಗಳಿದ್ದಾರೆ. ಇತರರು ಅವಳನ್ನು ಅಜಾಗರೂಕ ತಾಯಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಆದರೆ ಸೋನಮ್ ಸ್ವತಃ ವೈದ್ಯರಾಗಿರುವುದರಿಂದ ನೆಟ್ಟಿಗರ ಕಳವಳಗಳನ್ನು ತನ್ನ ಶೀರ್ಷಿಕೆಯ ಮೂಲಕ ಪರಿಹರಿಸಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
Is this safe for the child in womb?pic.twitter.com/BZvoWdUCIr
— Deepika Narayan Bhardwaj (@DeepikaBhardwaj) May 5, 2025
ಈ ವಿಡಿಯೊಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ "ಮಕ್ಕಳು ಖಂಡಿತವಾಗಿಯೂ ಒಳ್ಳೆ ಡ್ಯಾನ್ಸರ್ ಆಗುತ್ತಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್ ನಟಿ ಭಾಗ್ಯಶ್ರೀ ಪ್ರತಿಕ್ರಿಯಿಸಿ, " ನೀವು ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದೀರಿ... ನನ್ನ ಹೃದಯ ಬಾಯಿಗೆ ಬಂದಿದ್ದರೂ .. ನೀವು ಅದನ್ನು ತುಂಬಾ ಸುಲಭವಾಗಿ ಕಾಣುವಂತೆ ಮಾಡಿದ್ದೀರಿ. ದೇವರು ನಿಮಗೆ ಆರೋಗ್ಯ ಮತ್ತು ಶಕ್ತಿಯನ್ನು ಆಶೀರ್ವದಿಸಲಿ. ನಿಮಗೆ ಮತ್ತು ನಿಮ್ಮ ಪುಟ್ಟ ಮಕ್ಕಳಿಗೆ ಪ್ರೀತಿ. ಅಭಿನಂದನೆಗಳು." ಎಂದಿದ್ದಾರೆ. ನಟಿ ಅಂಜಲಿ ಆನಂದ್ ಸೋನಮ್ ಅವಳ ಹೊಗಳಿ, "ಇದು ಪೌರಾಣಿಕ ವಿಷಯ. ಮೇಡಂ ನೀವೊಬ್ಬ ಲೆಜೆಂಡ್” ಎಂದಿದ್ದಾರೆ.
ವೈದ್ಯೆಯಾಗಿ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸೋನಮ್ ಗರ್ಭಾವಸ್ಥೆಯಲ್ಲಿ ವ್ಯಾಯಾಮ ಎಷ್ಟು ಒಳ್ಳೆಯದು ಎಂಬ ಬಗ್ಗೆ ವೈದ್ಯಕೀಯ ಮತ್ತು ವೈಯಕ್ತಿಕ ದೃಷ್ಟಿಕೋನದಿಂದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಅವಳು ತಿಳಿಸಿದ್ದಾಳೆ.
ಗರ್ಭಾವಸ್ಥೆಯಲ್ಲಿ ದೈಹಿಕ ಚಟುವಟಿಕೆಯು ಗರ್ಭಪಾತ, ಕಡಿಮೆ ಜನನ ತೂಕ ಅಥವಾ ಬೇಗ ಹೆರಿಗೆಯಾಗುವ ಅಪಾಯವನ್ನು ಹೆಚ್ಚಿಸುವುದಿಲ್ಲ. ವಾಸ್ತವವಾಗಿ, ಸಕ್ರಿಯವಾಗಿರುವುದು ಗರ್ಭಾವಸ್ಥೆಯಲ್ಲಿ ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಆದರೆ ಯಾವುದೇ ವ್ಯಾಯಾಮ ದಿನಚರಿಯನ್ನು ಶುರುಮಾಡುವ ಅಥವಾ ಮುಂದುವರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಆರೋಗ್ಯ ಮತ್ತು ಗರ್ಭಧಾರಣೆಯ ಹಂತಕ್ಕೆ ಯಾವ ರೀತಿಯ ಚಟುವಟಿಕೆ ಹೆಚ್ಚು ಸೂಕ್ತವಾಗಿದೆ ಎಂಬುದರ ಕುರಿತು ಅವರು ನಿಮಗೆ ಮಾರ್ಗದರ್ಶನ ನೀಡಬಹುದು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಜ್ಜಿಯ ಆಸೆ ಈಡೇರಿಸಲು ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮೊಮ್ಮಗ; ವಿಡಿಯೊ ನೋಡಿ
ಅಲ್ಲದೇ ವೈರಲ್ ಡ್ಯಾನ್ಸ್ ವಿಡಿಯೊದಲ್ಲಿ ತನ್ನ ಡ್ರೆಸ್ ಬಗ್ಗೆ ಟೀಕಿಸಿದವರಿಗೆ, ವ್ಯಾಯಾಮವು ಕೇವಲ ದೈಹಿಕ ಆರೋಗ್ಯದ ಬಗ್ಗೆ ಮಾತ್ರವಲ್ಲ - ಇದು ಆತ್ಮವಿಶ್ವಾಸ, ಬಲಶಾಲಿ ಮತ್ತು ಸಬಲೀಕರಣವನ್ನು ಅನುಭವಿಸುವ ಒಂದು ಮಾರ್ಗವಾಗಿದೆ ಎಂದು ಸೋನಮ್ ಉತ್ತರಿಸಿದ್ದಾಳೆ.