ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock market: ಸೆನ್ಸೆಕ್ಸ್‌ 155 ಅಂಕ ಇಳಿಕೆ, ನಿಫ್ಟಿ 24,379ಕ್ಕೆ ಸ್ಥಿರ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಇವತ್ತು ಸೆನ್ಸೆಕ್ಸ್ 155 ಅಂಕ ಕಳೆದುಕೊಂಡು 80,641ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ನಿಫ್ಟಿ 81 ಅಂಕ ಕಳೆದುಕೊಂಡು 24,379ಕ್ಕೆ ಸ್ಥಿರವಾಗಿದೆ. ಇವತ್ತು ಸ್ಟಾಕ್‌ ಮಾರ್ಕೆಟ್‌ ಫ್ಯಾಟ್‌ ಆಗಿತ್ತು. ಅಂಥ ಏರಿಳಿತಗಳು ಇದ್ದಿರಲಿಲ್ಲ.

ಸೆನ್ಸೆಕ್ಸ್‌ 155 ಅಂಕ ಇಳಿಕೆ, ನಿಫ್ಟಿ 24,379ಕ್ಕೆ ಸ್ಥಿರ

Profile Vishakha Bhat May 6, 2025 5:29 PM

ಕೇಶವ ಪ್ರಸಾದ.ಬಿ

ಮುಂಬೈ: ಸ್ಟಾಕ್‌ ಮಾರ್ಕೆಟ್‌ನಲ್ಲಿ (Stock market) ಇವತ್ತು ಸೆನ್ಸೆಕ್ಸ್ 155 ಅಂಕ ಕಳೆದುಕೊಂಡು 80,641ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ನಿಫ್ಟಿ 81 ಅಂಕ ಕಳೆದುಕೊಂಡು 24,379ಕ್ಕೆ ಸ್ಥಿರವಾಗಿದೆ. ಇವತ್ತು ಸ್ಟಾಕ್‌ ಮಾರ್ಕೆಟ್‌ ಫ್ಯಾಟ್‌ ಆಗಿತ್ತು. ಅಂಥ ಏರಿಳಿತಗಳು ಇದ್ದಿರಲಿಲ್ಲ. ಮಹೀಂದ್ರಾ ಆಂಡ್‌ ಮಹೀಂದ್ರಾ ಮತ್ತು ಭಾರ್ತಿ ಏರ್‌ ಟೆಲ್‌ ಷೇರುಗಳು ಲಾಭ ಗಳಿಸಿದರೂ, ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ ಷೇರಿನ ದರ ಇಳಿಯಿತು.ಬ್ಯಾಂಕ್‌ ಆಫ್‌ ಬರೋಡಾ ಷೇರು ದರದಲ್ಲಿ 10% ನಷ್ಟ ಆಯಿತು. ಬ್ಯಾಂಕ್‌ ಲಾಭ ಗಳಿಸಿದ್ದರೂ, ನಿರೀಕ್ಷಿತ ಮಟ್ಟ ತಲುಪದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಈ ನಡುವೆ ನಿಫ್ಟಿ 500 ಇಂಡೆಕ್ಸ್‌ ನಲ್ಲಿ 4 ಲಾರ್ಜ್‌ ಮತ್ತು ಸ್ಮಾಲ್-ಕ್ಯಾಪ್‌ ಷೇರುಗಳು 52 ವಾರಗಳಲ್ಲಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಆ ಷೇರುಗಳು ಯಾವುದು ಎಂದು ನೋಡೋಣ.

ಸಿಯೆಟ್‌ : 52-week high: Rs 3,627.9 | Up 11% YTD

ಚಂಬಾಲ್‌ ಫರ್ಟಿಲೈಸರ್ಸ್‌ : 52-week high: Rs 715| Up 41% YTD

ಭಾರ್ತಿ ಏರ್‌ ಟೆಲ್‌ : 52-week high: Rs 1,912 | Up 19% YTD

ಗೋಡ್‌ಫ್ರೆ ಫಿಲಿಪ್ಸ್‌ ಇಂಡಿಯಾ : 52-week high: Rs 8,989 | Up 75% YTD

ಖಾಸಗಿ ವಲಯದ ಯಸ್‌ ಬ್ಯಾಂಕ್‌ ಈಗ ಸುದ್ದಿಯಲ್ಲಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯಸ್‌ ಬ್ಯಾಂಕ್‌ ಅನ್ನು ಖರೀದಿಸಲು ಜಪಾನ್‌ ಮೂಲದ ಬ್ಯಾಂಕಿಂಗ್‌ ದಿಗ್ಗಜ ಸುಮಿಟೊಮೊ ಮಿತ್ಸುಯಿ ಬ್ಯಾಂಕಿಂಗ್‌ ಕಾರ್ಪೊರೇಷನ್‌ ಸಂಸ್ಥೆಯು ಖರೀದಿಸಲಿದೆ ಎಂದು ಇಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಸಂಕ್ಷಿಪ್ತವಾಗಿ SMBC ಎಂದು ಕರೆಯುವ ಇದು ಜಪಾನಿನ ಬಹುರಾಷ್ಟ್ರೀಯ ಬ್ಯಾಂಕ್‌ ಆಗಿದ್ದು, ಯಸ್‌ ಬ್ಯಾಂಕ್‌ನ ಬಹುಪಾಲು ಷೇರುಗಳನ್ನು ಖರೀದಿಸಲು ಮುಂದಾಗಿದೆ. SMBC ಯ ಪ್ರಧಾನ ಕಚೇರಿ ಜಪಾನಿನ ಟೋಕಿಯೊದಲ್ಲಿದೆ.

ಈ ಹಿನ್ನೆಲೆಯಲ್ಲಿ ಯಸ್‌ ಬ್ಯಾಂಕಿನ ಷೇರುಗಳ ದರದಲ್ಲಿ ಏರಿಕೆ ಕಂಡು ಬಂದಿದೆ.

ಯಸ್‌ ಬ್ಯಾಂಕ್‌ ಷೇರಿನ ಈಗಿನ ದರ 19 ರುಪಾಯಿ ಆಗಿದೆ. ಸದ್ಯಕ್ಕೆ ಎಸ್‌ಬಿಐ ಇದರಲ್ಲಿ 24% ಷೇರುಗಳನ್ನು ಹೊಂದಿದೆ. ಎಸ್‌ಬಿಐ ಕೂಡ ಹೊಸ ಸ್ಟ್ರಾಟಜಿಕ್‌ ಇನ್ವೆಸ್ಟರ್‌ಗಳ ಹುಡುಕಾಟದಲ್ಲಿದೆ. ಡೀಲ್‌ ಯಶಸ್ವಿಯಾದರೆ ಬ್ಯಾಂಕಿನ 26% ಷೇರುಗಳನ್ನು ಎಸ್‌ಎಂಬಿಸಿ ಖರೀದಿಸಲಿದೆ. ಎಲ್‌ಐಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಷೇರು ಪಾಲನ್ನು ಹೊಂದಿವೆ. ಯಸ್‌ ಬ್ಯಾಂಕ್‌ನ ಮಾರ್ಕೆಟ್‌ ಕ್ಯಾಪ್‌ 55,595 ಕೋಟಿ ರುಪಾಯಿಗಳಾಗಿದೆ.

CDSL ಷೇರುದಾರರಿಗೆ ಪ್ರತಿ ಷೇರಿಗೆ 12.50 ರುಪಾಯಿ ಡಿವಿಡೆಂಡ್‌ ಸಿಗಲಿದೆ. ಜತೆಗೆ ಪ್ರತಿ ಷೇರಿಗೆ ಒಂದು ಷೇರು ಬೋನಸ್‌ ಕೂಡ ದೊರೆಯಲಿದೆ. ಈ ಕುರಿತ ವಿವರಗಳನ್ನು ನೋಡೋಣ.

CDSL ಷೇರಿನ ಈಗಿನ ದರ : 1,263 ರುಪಾಯಿ

2024 ಮೇನಲ್ಲಿ ದರ : 1054 ರುಪಾಯಿ, 17% ಏರಿಕೆ

52 wk high : 1989/-

52 wk low : 917/-

ಸೇವೆ: ಡಿಮ್ಯಾಟ್‌, ಸೆಕ್ಯುರಿಟೀಸ್‌ ಕ್ಲಿಯರಿಂಗ್.‌

ಡಿಮ್ಯಾಟ್‌ ಖಾತೆಗಳ ಸಂಖ್ಯೆಯ ದೃಷ್ಟಿಯಿಂದ ಸಿಡಿಎಸ್‌ಎಲ್‌ ಭಾರತದ ಅತಿ ದೊಡ್ಡ ಡೆಪಾಸಿಟರಿ ಸಂಸ್ಥೆಯಾಗಿದೆ. 2024ರಲ್ಲಿಇದರ ಆದಾಯ 812 ಕೋಟಿ ರುಪಾಯಿಯಷ್ಟಿತ್ತು. ಸೆಂಟ್ರಲ್‌ ಡೆಪಾಸಿಟರಿ ಸರ್ವೀಸ್‌ ಲಿಮಿಟೆಡ್‌ ಎಂಬುದು ಸಿಡಿಎಸ್‌ಎಲ್‌ನ ಪೂರ್ಣ ಹೆಸರು. ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಸಿಡಿಎಸ್‌ಎಲ್‌ ಪ್ರತಿ ಷೇರಿಗೆ 12.50 ರುಪಾಯಿಗಳ ಡಿವಿಡೆಂಡ್‌ ಘೋಷಿಸಿದೆ. ರೆಕಾರ್ಡ್‌ ಡೇಟ್‌ ಇನ್ನೂ ಘೋಷಣೆಯಾಗಿಲ್ಲ.

ಈ ಸುದ್ದಿಯನ್ನೂ ಓದಿ: Stock Market: FII ಮತ್ತು DII ಖರೀದಿಸಿದ 5 ಪೆನ್ನಿ ಸ್ಟಾಕ್ಸ್; 100 ರುಪಾಯಿಗಿಂತಲೂ ಅಗ್ಗ!

ಸಿಡಿಎಸ್‌ಎಲ್‌ ಷೇರು, ಹೂಡಿಕೆದಾರರಿಗೆ ಕಳೆದ 5 ವರ್ಷಗಳಲ್ಲಿ 1,117% ರಿಟರ್ನ್ಸ್‌ ನೀಡಿದೆ. ಜತೆಗೆ ಪ್ರತಿ ಷೇರಿಗೆ 1 ಬೋನಸ್‌ ಷೇರನ್ನೂ ನೀಡುತ್ತಿದೆ. ಐಸಿಐಸಿಐ ಸೆಕ್ಯುರಿಟೀಸ್‌ ಸಿಡಿಎಸ್‌ಎಲ್‌ನ ರೇಟಿಂಗ್‌ ಅನ್ನು ರೆಡ್ಯೂಸ್‌ ಮಾಡಿದ್ದರೂ, ಹೂಡಿಕೆಯನ್ನು ಮುಂದುವರಿಸಬಹುದು ಎಂದು ಸಲಹೆ ನೀಡಿದೆ. ಡಿಮ್ಯಾಟ್‌ ಅಕೌಂಡ್‌ಗಳ ದೃಷ್ಟಿಯಿಂದ ಸಿಡಿಎಸ್‌ಎಲ್‌ ಮುಂಚೂಣಿಯಲ್ಲಿದೆ.