ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರವಾಸಿಗರ ಎದುರು ಧುತ್ತೆಂದು ಪ್ರತ್ಯಕ್ಷವಾದ ಹಿಮಚಿರತೆ; ವಿಡಿಯೊ ವೈರಲ್!

ಇತ್ತೀಚೆಗೆ ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆ ಪ್ರದೇಶದಲ್ಲಿ ಪ್ರವಾಸಿಗರ ಗುಂಪೊಂದು ಪರ್ವತದ ಕಣಿವೆ ರಸ್ತೆಯಲ್ಲಿ ಹಿಮ ಚಿರತೆಯೊಂದು ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಪ್ರವಾಸಿಗರ ಎದುರು ಧುತ್ತೆಂದು ಪ್ರತ್ಯಕ್ಷವಾದ ಹಿಮಚಿರತೆ; ವಿಡಿಯೊ ವೈರಲ್!

Profile pavithra May 7, 2025 5:00 PM

ಶಿಮ್ಲಾ: ಇತ್ತೀಚೆಗೆ ಪ್ರವಾಸಿಗರ ಗುಂಪೊಂದು ಪರ್ವತದ ಕಣಿವೆ ರಸ್ತೆಯಲ್ಲಿ ಹಿಮ ಚಿರತೆಯೊಂದು ಹೋಗುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ. ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆ ಪ್ರದೇಶದಲ್ಲಿ ಈ ಚಿರತೆ ಕಂಡುಬಂದಿದೆ. ಈ ಅನಿರೀಕ್ಷಿತ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.ಈ ಪ್ರವಾಸಿಗರ ಗುಂಪು ಕಾಜಾದಿಂದ ನಾಕೊಗೆ ಪ್ರಯಾಣಿಸುತ್ತಿತ್ತು.ಆಗ ಹಿಮಚಿರತೆಯೊಂದು ನಡೆದುಕೊಂಡು ಹೋಗುವುದನ್ನು ಅವರು ನೋಡಿದ್ದಾರೆ. ಕಾರಿನ ಒಳಗೆ ಕುಳಿತು ಈ ವಿಡಿಯೊವನ್ನು ಶೂಟ್ ಮಾಡಿದ್ದಾರೆ.ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ರಸ್ತೆಯಲ್ಲಿ ಹಿಮಚಿರತೆ ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, "ಇದು ಅಪರೂಪದ ದೃಶ್ಯ ... ಹಿಮ ಚಿರತೆಯನ್ನು ಗುರುತಿಸುವುದು ತುಂಬಾ ಕಷ್ಟ” ಎಂದಿದ್ದಾರೆ. ಇನ್ನೊಬ್ಬರು, "ವಿಶ್ವದ ಅತ್ಯಂತ ಅಸ್ಪಷ್ಟ ಪ್ರಾಣಿ ... ಹಿಮ ಚಿರತೆ... ವನ್ಯಜೀವಿ ಛಾಯಾಗ್ರಾಹಕರು ಒಂದನ್ನು ಗುರುತಿಸಲು ತಿಂಗಳುಗಳನ್ನು ಕಳೆಯುತ್ತಾರೆ ... ನೀವು ಅದೃಷ್ಟವಂತರು." ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಅಜ್ಜಿಯ ಆಸೆ ಈಡೇರಿಸಲು ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮೊಮ್ಮಗ; ವಿಡಿಯೊ ನೋಡಿ

ಕೆಲವರು ಈ ವಿಡಿಯೊ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದು, ಇದನ್ನು ಕೆಲವು ಬೇಟೆಗಾರು ಹುಡುಕುತ್ತಿರಬಹುದು ಎಂದು ಅನೇಕ ಬಳಕೆದಾರರು ಎಚ್ಚರಿಸಿದ್ದಾರೆ. ಒಬ್ಬರು, "ಇಂತಹ ವಿಡಿಯೊಗಳನ್ನು ಪೋಸ್ಟ್ ಮಾಡಬೇಡಿ. ಕಳ್ಳ ಬೇಟೆಗಾರರು ಯಾವಾಗಲೂ ಅವುಗಳನ್ನು ಹುಡುಕುತ್ತಿರುತ್ತಾರೆ. ನಾವು ಅವುಗಳನ್ನು ರಕ್ಷಿಸಬೇಕು” ಎಂದಿದ್ದಾರೆ.