ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಜೀವದ ಹಂಗು ತೊರೆದು ಶಿವಮೊಗ್ಗದ ಮಂಜುನಾಥ್‌ ಪುತ್ರನ ರಕ್ಷಿಸಿದ ಕಾಶ್ಮೀರಿ ಯುವಕನ ವಿಡಿಯೋ ಈಗ ವೈರಲ್‌

ಭಯೋತ್ಪಾದಕರ ಕೈಯಿಂದ ಬದುಕುಳಿದ ಮಂಜುನಾಥ್ ಅವರ ಪುತ್ರ ಅಭಿಜಯ್‌ನನ್ನು ಸ್ಥಳೀಯ ವ್ಯಕ್ತಿಯೊಬ್ಬರು ಬೆನ್ನ ಮೇಲೆ ಹೊತ್ತುಕೊಂಡು ಓಡುತ್ತಾ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು "ಇದು ನಿಜವಾದ ಕಾಶ್ಮೀರ" ಎಂದು ಕೊಂಡಾಡಲಾಗುತ್ತಿದೆ.

ಜೀವದ ಹಂಗು ತೊರೆದು ಬಾಲಕನ ರಕ್ಷಿಸಿದ ಕಾಶ್ಮೀರಿ ಯುವಕನ ವಿಡಿಯೋ ಈಗ ವೈರಲ್‌

ವೈರಲ್‌ ವಿಡಿಯೊ

ಹರೀಶ್‌ ಕೇರ ಹರೀಶ್‌ ಕೇರ Apr 24, 2025 12:05 PM

ಶ್ರೀನಗರ: ಜಮ್ಮು ಕಾಶ್ಮೀರ ಪಹಲ್ಗಾಮ್‌ ಕಣಿವೆಯಲ್ಲಿ ಭಯೋತ್ಪಾದಕರ ಬರ್ಬರ ದಾಳಿಯಲ್ಲಿ ಗಾಯಗೊಂಡು ದಿಕ್ಕು ತೋಚದೆ ಅಳುತ್ತಿದ್ದ ಬಾಲಕನನ್ನು ಕಾಶ್ಮೀರಿ ಯುವಕನೊಬ್ಬ ದೇವರಂತೆ ಬಂದು ರಕ್ಷಿಸಿದ್ದಾನೆ. ಗಾಯಗೊಂಡ ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡೇ ಕಿಲೋಮೀಟರ್‌ಗಳಷ್ಟು ದೂರ ಓಡಿ ಅವನ ಜೀವವನ್ನು ಉಳಿಸಿದ್ದಾನೆ. ಈ ಬಾಲಕ, ದಾಳಿಯಲ್ಲಿ ಮೃತರಾದ ಶಿವಮೊಗ್ಗದ ಮಂಜುನಾಥ್‌ ಅವರ ಪುತ್ರನಾಗಿದ್ದು, ಇದೀಗ ಈ ವಿಡಿಯೋ ವೈರಲ್‌ ಆಗುತ್ತಿದೆ.

ಉಗ್ರರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್‌ ಅವರು ಮೃತರಾಗಿದ್ದು, ಅವರ ಪಾರ್ಥಿವ ಶರೀರ ಇಂದು ಬೆಂಗಳೂರು ಮೂಲಕ ಶಿವಮೊಗ್ಗ ತಲುಪಿದೆ. ಈ ಸಂದರ್ಭದಲ್ಲಿ ಭಯೋತ್ಪಾದಕರ ಕೈಯಿಂದ ಬದುಕುಳಿದ ಮಂಜುನಾಥ್ ಅವರ ಪುತ್ರ ಅಭಿಜಯ್‌ನನ್ನು ಸ್ಥಳೀಯ ವ್ಯಕ್ತಿಯೊಬ್ಬರು ಬೆನ್ನ ಮೇಲೆ ಹೊತ್ತುಕೊಂಡು ಓಡುತ್ತಾ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು "ಇದು ನಿಜವಾದ ಕಾಶ್ಮೀರ" ಎಂದು ಕೊಂಡಾಡಲಾಗುತ್ತಿದೆ.



ಕಾಶ್ಮೀರದ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಉಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದೆ. ನರರಾಕ್ಷಸರ ಗುಂಪುಗಳು ಜನರ ಜೀವ ತೆಗೆಯುತ್ತಿದ್ದಾಗ, ಒಬ್ಬ ಭಾರತೀಯ ಯುವಕ ಅವರ ವಿರುದ್ಧ ನಿಂತು ಒಬ್ಬ ಹುಡುಗನ ಜೀವವನ್ನು ಉಳಿಸಿದ್ದಾನೆ ಎಂದು ಹಲವು ಕಾಶ್ಮೀರಿಗಳು ಹಂಚಿಕೊಳ್ಳುತ್ತಿದ್ದಾರೆ.

ಇದೇ ಘಟನೆಯಲ್ಲಿ, ಪಹಲ್ಗಾಮ್‌ನಲ್ಲಿ ಕುದುರೆ ಮೇಲೆ ಪ್ರವಾಸಿಗರನ್ನು ಒಯ್ದು ಜೀವನ ನಡೆಸುವ ಒಬ್ಬ ಮುಸ್ಲಿಂ ಯುವಕ ಕೂಡ ಭಯೋತ್ಪಾದಕರನ್ನು ಎದುರಿಸಿದ್ದ. ಆತನನ್ನು ಉಗ್ರರು ಕೊಂದುಹಾಕಿದ್ದರು. ಈ ಸುದ್ದಿ ಕೂಡ ವೈರಲ್‌ ಆಗಿತ್ತು.

ಇದನ್ನು ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರಿಂದ ಮೃತಪಟ್ಟ ಭರತ್‌ ಭೂಷಣ್‌ ಅಂತಿಮ ದರ್ಶನ ಮಾಡಿದ ಸಿಎಂ