ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RRB Recruitment Exam: ಪರೀಕ್ಷೆಗೆ ʼತಾಳಿ ತೆಗೀರಿʼ ಎಂದ ರೈಲ್ವೆ ಇಲಾಖೆ; ಜನಿವಾರಾನೂ ತೆಗೀಬೇಕಾ?

ಸಿಇಟಿ ಪರೀಕ್ಷೆ ಬರೆಯಲು ಜನಿವಾರ ನಿರಾಕರಿಸಿದ ಪ್ರಕರಣ (Janivara Row) ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಹಾಗೂ ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ.

ಪರೀಕ್ಷೆಗೆ ʼತಾಳಿ ತೆಗೀರಿʼ ಎಂದ ರೈಲ್ವೆ ಇಲಾಖೆ; ಜನಿವಾರಾನೂ ತೆಗೀಬೇಕಾ?

ಹರೀಶ್‌ ಕೇರ ಹರೀಶ್‌ ಕೇರ Apr 28, 2025 9:36 AM

ಬೆಂಗಳೂರು: ರಾಜ್ಯದ ಸಿಇಟಿ ಪರೀಕ್ಷೆಯಲ್ಲಿ (CET Exam) ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ (Janivara Row) ಪ್ರಕರಣದ ವಿವಾದ ಮಾಸುವುದಕ್ಕೂ ಮುನ್ನವೇ, ಕೇಂದ್ರ ರೈಲ್ವೆ ನೇಮಕಾತಿ ಮಂಡಳಿ (RRB Exam) ಇನ್ನೊಂದು ಸೂಚನೆ ನೀಡಿದೆ. ರೈಲ್ವೆ ಇಲಾಖೆ ನಡೆಸುವ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ‘ಮಂಗಳ ಸೂತ್ರ ಮತ್ತು ಧಾರ್ಮಿಕ ಚಿಹ್ನೆಗಳನ್ನು’ ಧರಿಸಿ ಪರೀಕ್ಷೆ ಬರೆಯುವುದನ್ನು ನಿಷೇಧಿಸಿಸಲಾಗಿದೆ. ಈ ಸೂಚನೆಯ ಪ್ರಕಾರ ತಾಳಿ, ಮಂಗಳಸೂತ್ರಗಳನ್ನು ಪರೀಕ್ಷಾರ್ಥಿಗಳು ತೆಗೆಯಬೇಕಿದೆ. ʼಧಾರ್ಮಿಕ ಚಿಹ್ನೆಗಳುʼ ಎಂಬುದರಲ್ಲಿ ಜನಿವಾರವೂ ಅಡವಾಗಿರುವುದರಿಂದ, ಅದನ್ನೂ ತೆಗೆಸಲಾಗುತ್ತದೆ ಎನ್ನಲಾಗಿದೆ.

ಸಿಇಟಿ ಪರೀಕ್ಷೆ ಬರೆಯಲು ಜನಿವಾರ ನಿರಾಕರಿಸಿದ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಹಾಗೂ ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ. ರೈಲ್ವೆ ಇಲಾಖೆಯು ನರ್ಸಿಂಗ್ ಸೂಪರಿಂಟೆಂಡೆಂಟ್‌ ಹುದ್ದೆಗೆ ಮಂಗಳವಾರ ಪರೀಕ್ಷೆ ನಡೆಸಲಿದ್ದು, ಪರೀಕ್ಷಾ ಕೇಂದ್ರದೊಳಗೆ ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ. ಪ್ರವೇಶ ಪತ್ರದ 7ನೇ ಕ್ರಮಾಂಕದ ಸೂಚನೆಯಲ್ಲಿ ಮಂಗಳಸೂತ್ರ ಧರಿಸುವಂತಿಲ್ಲ ಹಾಗೂ ಧರ್ಮದ ಸಂಕೇತಗಳನ್ನು ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಬ್ರಾಹ್ಮಣ ಸಂಘಟನೆಗಳು ಹೈಕೋರ್ಟ್‌ಗೂ ಹೋಗಿವೆ. ಈ ಕುರಿತು ವಿವರ ನೀಡುವಂತೆ ರಾಜ್ಯ ಸರಕಾರ ಹಾಗೂ ಕೆಇಎಗೆ ಹೈಕೋರ್ಟ್‌ ನೋಟೀಸ್‌ ನೀಡಿದೆ. ಈ ನಡುವೆ ರೈಲ್ವೆ ಇಲಾಖೆಯ ಪ್ರಕಟಣೆ ಕುತೂಹಲ ಮೂಡಿಸಿದೆ. ರೈಲ್ವೆ ಇಲಾಖೆಯ ಸೂಚನೆಯ ವಿರುದ್ಧವೂ ಪ್ರತಿಭಟಿಸಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: Janivara row: ಜನಿವಾರ ವಿವಾದ: ರಾಜ್ಯ ಸರ್ಕಾರ, ಕೆಇಎಗೆ ಹೈಕೋರ್ಟ್ ನೋಟಿಸ್, ಮರು ಪರೀಕ್ಷೆಗೆ ಅರ್ಜಿದಾರರ ಆಗ್ರಹ